ಚೆನ್ನೈನ ಹೋಟಲ್‌ವೊಂದಕ್ಕೆ ಹುಸಿ ಬಾಂಬ್ ಕರೆ ಮಾಡಿದ ನಟನನ್ನು ಬಂಧಿಸಿದ್ದಾರೆ ಪೊಲೀಸರು. ಅಷ್ಟಕ್ಕೂ ಈ ಹುಚ್ಚಾಟ ಮಾಡಿದ್ದೇಕೆ?
ವೆಬ್ ಸೀರಿಸ್ ಹಾಗೂ ಅನೇಕ ಕಿರು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಕೆನಡಿ ಜಾನ್ ಗಂಗಾಧರ್ ಚೆನ್ನೈನ ತೇನಾಂಪೇಟೆಯಲ್ಲಿರುವ ಐಷಾರಾಮಿ ಹೋಟೆಲ್‌ಗೆ ಆಗಸ್ಟ್ 26ರಂದು ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿ ಹೆದರಿಸಿದ್ದಾರೆ.
ವಿಜಯ್ ದಳಪತಿ ಮನೆಯಲ್ಲಿ ಬಾಂಬ್; 21 ವರ್ಷದ ಸೈಕೋ ಹುಡುಗನಿಂದ ಕಾಲ್!
ನಿಜಕ್ಕೂ ಬಾಂಬ್ ಇತ್ತಾ?
ನಟ ಜಾನ್ ಗಂಗಾಧರ್ ಹಾಗೂ ಐಷಾರಾಮಿ ಹೋಟೆಲ್ ಮಾಲೀಕ ಮಹೇಶ್ ಇಬ್ಬರೂ ವೆಬ್ ಸರಣಿಯೊಂದಕ್ಕೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಮಹೇಶ್ ವೆಬ್ ಸರಣಿಗೆ ಬಂಡವಾಳ ಹಾಕಿರುವ ನಿರ್ಮಾಪಕ. ಚಿತ್ರೀಕರಣವಿದ್ದ ದಿನ ಜಾನ್ ಸರಿಯಾದ ಸಮಯಕ್ಕೆ ಬಾರದೆ ತಡವಾಗಿ ಬಂದಿದಕ್ಕೆ ನಿರ್ಮಾಪಕರು ಮಹೇಶ್ ಜಾನ್ ಅವರನ್ನು ಕೆಲಸಕ್ಕೆ ಬಾರದಂತೆ ವಾಪಸ್ ಕಳುಹಿಸಿದ್ದಾರೆ. ಅಂದಿನ ಚಿತ್ರೀಕರಣವನ್ನೂ ರದ್ದು ಮಾಡಲಾಗಿತ್ತು.
ತಲಾ ಅಜಿತ್ ಮನೆಯಲ್ಲಿ ಬಾಂಬ್; ಬೆದರಿಕೆ ಕರೆ ಮಾಡಿದ್ಯಾರು?
ಹೋಟೆಲ್‌ನಿಂದ ಹೊರ ಬಂದ ನಟ ಜಾನ್ ಕೋಪದಿಂದ ಹೊಟೇಲ್ ಸಿಬ್ಬಂದಿಗೆ ಕರೆ ಮಾಡಿ, ಬಾಂಬ್ ಇಟ್ಟಿರುವುದಾಗಿ ಹೆದರಿಸಿದ್ದಾರೆ. ಅಲ್ಲದೆ ಅವರೇ ಪೊಲೀಸ್ ಕಂಟ್ರೋಲ್ ರೂಮ್‌ಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಶ್ವಾನದಳದೊಂದಿಗೆ ಬಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಮಾರು 1 ಗಂಟೆ ಕಾಲ ಕಾರ್ಯಾಚರಣೆ ನಡೆಸಿದ್ದರೂ, ಯಾವುದೇ ಬಾಂಬ್ ಸಿಗದ ಕಾರಣ ಕರೆ ಬಂದ ನಂಬರ್‌ನನ್ನು ಪೊಲೀಸರು ಟ್ರೇಸ್ ಮಾಡಿದ್ದಾರೆ. ಬಂಧಿತ ನಟ ಜಾನ್ ಗಂಗಾಧರ್ ಮಾಡಿದ ತಪ್ಪನ್ನು ಒಪ್ಪಿಕೊಂಡು, ಇದು ಹುಸಿ ಬಾಂಬ್ ಕರೆ ಎಂದು ಸ್ಪಷ್ಟಪಡಿಸಿದ್ದಾರೆ
ಹೋಟೆಲ್‌ನಲ್ಲಿ ರೂಂ ಮಾಡಿ ಪರಾರಿಯಾಗ್ತಿದ್ದ ಅಜ್ಜ ಧಾರವಾಡದಲ್ಲಿ ಸಿಕ್ಕಿಬಿದ್ದ!
"
