ಕಾಲಿವುಡ್‌ ಮಾಸ್ಟರ್‌ ಹೀರೋ ವಿಜಯ್ ದಳಪತಿ ಮನೆಯಲ್ಲಿ ಬಾಂಬ್‌ ಇದೆ ಎಂಬ ಸುದ್ದಿ ರಾತ್ರೋರಾತ್ರಿ ಅನೇಕರ ನಿದ್ದೆಗೆಡಿಸಿತ್ತು ಅದರಲ್ಲೂ ಅಕ್ಕ-ಪಕ್ಕದ ಮನೆಯವರು ಭಯಭೀತರಾಗಿ ರೋಡಿಗೆ ಬಂದು ನಿಂತುಕೊಂಡರು. ಇಡೀ ಮನೆ ತನಿಖೆ ಮಾಡಿದ ನಂತರ ಯಾವುದೇ ಬಾಂಬ್ ಪತ್ತೆಯಾಗದ ಕಾರಣ ಪೊಲೀಸರು ಕರೆ ಮಾಡಿರುವ ವ್ಯಕ್ತಿ ಯಾರೆಂದು ವಿಚಾರಣೆ ಪ್ರಾರಂಭಿಸಿದರು. 

ರಜನಿಕಾಂತ್ ಮನೆಯಲ್ಲಿ ಬಾಂಬ್; ಯಾರ ಕೈವಾಡವಿದು! 

 ಜುಲೈ 4ರಂದು ಮಧ್ಯರಾತ್ರಿ 4 ಗಂಟೆಗೆ ತಮಿಳುನಾಡು ಪೊಲೀಸ್‌ ಮಾಸ್ಟರ್ ಕಂಟ್ರೋಲ್‌ ರೂಮ್‌ಗೆ ನಟ ವಿಜಯ್ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಒಂದು ದೂರವಾಣಿ ಕರೆ ಬರುತ್ತದೆ. ಕರೆ ಮಾಡಿದವರು ಯಾರೆಂದು ತಿಳಿದುಕೊಳ್ಳದೇ ಕೂಡಲೇ ಸ್ಥಳಕ್ಕೆ ಧಾವಿಸುತ್ತಾರೆ. ಆದರೆ ಅದು ಹುಸಿ ಬಾಂಬ್ ಕರೆ ಎಂದು ತಿಳಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಸೈಕೋ ಕಾಲ್:

ವಿಚಾರಣೆ ಶುರು ಮಾಡಿದ ಪೊಲೀಸರು ಕರೆ ಮಾಡಿದ ವ್ಯಕ್ತಿ ಯಾರೆಂದು ಪತ್ತೆ ಹಚ್ಚಿದ್ದಾರೆ. ಈ ಹಿಂದೆಯೂ ಇಂತದೇ ಅನೇಕ ಪ್ರ್ಯಾಂಕ್ ಕಾಲ್ ಮಾಡಿದ್ದ ವ್ಯಕ್ತಿಯೇ ಈ ಸಲವೂ ಮಾಡಿರುವುದಾಗಿ ತಿಳಿದು ಬಂದಿದೆ. ಮೂಲತಃ ಚೆನ್ನೈನ ವಿಲ್ಲುಪುರಂನಲ್ಲಿರುವ ಮರಕ್ಕನಂ ಈತ 21 ವರ್ಷದ ವ್ಯಕ್ತಿ ಎಂದು ಹೇಳಲಾಗಿದೆ. 

ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ, ಪುದುಚರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಪುದುಚರಿ ರಾಜ್ಯಪಾಲರಾದ ಕಿರಣ್ ಬೇಡಿ ಮನೆಯಲ್ಲಿ ಬಾಂಡ್‌ ಇಟ್ಟಿರುವುದಾಗಿ ಈ ಹಿಂದೆಯೂ ಈ ವ್ಯಕ್ತಿ ಕಾಲ್ ಮಾಡಿದ್ದ ಎನ್ನಲಾಗಿದೆ. ಪ್ರತೀ  ಪ್ರಕರಣದ ಹಿಂದೆಯೂ ಈತನಿದ್ದು, ಪೊಲೀಸರು ವಾರ್ನಿಂಗ್ ಕೊಟ್ಟು ಕಳುಹಿಸುತ್ತಿದ್ದರು. 

#HappyBirthDay Vijay; ತಲಪತಿಗೆ 46ನೇ ಹುಟ್ಟಿದ ಹಬ್ಬ

' ಆತ ಮಾನಸಿಕವಾಗಿ ಸರಿ ಇಲ್ಲದ ಕಾರಣ ಪೋಷಕರು ಅತನಿಗೆ  ಪೋನ್ ನೀಡಿಲ್ಲ ಆದರೂ ಆತ ಕುಟುಂಬಸ್ಥರ ಪೋನ್ ಬಳಸಿ ಇಂತಹ  ಪ್ರ್ಯಾಂಕ್ ಕಾಲ್ ಮಾಡುತ್ತಾನೆ. ಮಾನಸಿಕವಾಗಿ ಸ್ಥಿರವಿಲ್ಲದ ಕಾರಣ ನಾವು ಯಾವುದೇ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲು  ಸಾಧ್ಯವಿಲ್ಲ' ಎಂದು ಚೆನ್ನೈ ಪೊಲೀಸರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.