ವಿಜಯ್ ವರ್ಮಾ ಜೊತೆ ಬೆಡ್‌ರೂಮ್ ದೃಶ್ಯ ಮಾಡುವಾಗ ಸೇಫ್ ಫೀಲ್ ಆಗ್ತಿತ್ತು: ನಟಿ ತಮನ್ನಾ

ವಿಜಯ್ ವರ್ಮಾ ಜೊತೆ ಬೆಡ್‌ರೂಮ್ ದೃಶ್ಯ ಮಾಡುವಾಗ ಸೇಫ್ ಫೀಲ್ ಆಗ್ತಿತ್ತು ಎಂದು ನಟಿ ತಮನ್ನಾ ಭಾಟಿಯಾ ಬಹಿರಂಗ ಪಡಿಸಿದ್ದಾರೆ. 

Tamannaah Bhatia reveals Vijay Varma made her feel safe in intimate scenes of Lust Stories 2 sgk

ನಟಿ ತಮನ್ನಾ ಭಾಟಿಯಾ ಸದ್ಯ ಲಸ್ಟ್ ಸ್ಟೋರಿ-2 ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಲಸ್ಟ್ ಸ್ಟೋರಿಗಾಗಿ ತಮನ್ನಾ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ಈ ಸೀರಿಸ್‌ಗಾಗಿ ತಮನ್ನಾ ತನ್ನ 18 ವರ್ಷದ ನೋ ಕಿಸ್ಸಿಂಗ್ ದೃಶ್ಯದ ನಿಯಮವನ್ನು ಬ್ರೇಕ್ ಮಾಡಿದ್ದಾರೆ. ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ತಮನ್ನಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬೆಡ್ ರೂಮ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿವೆ. ತಮನ್ನಾ ಅವರನ್ನು ಈ ಪರಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ದೃಶ್ಯಗಳನ್ನು ಮಾಡುವಾಗ ಹೇಗನಿಸಿತು ಎಂದು ತಮನ್ನಾ ಈಗ ಬಹಿರಂಗ ಪಡಿಸಿದ್ದಾರೆ.

ಲಸ್ಟ್ ಸ್ಟೋರಿ 2 ನಟಿಸಿದ ಬಗ್ಗೆ ಮಾತನಾಡಿ, ವಿಜಯ್ ವರ್ಮಾ ತುಂಬಾ ಸೇಫ್ ಫೀಲ್ ನೀಡಿದ್ರು ಎಂದು ಹೇಳಿದ್ದಾರೆ. 'ನಟರ ಜೊತೆ ನಟಿಸುವಾಗ ನನಗೆ ಯಾವಾಗಲೂ ತುಂಬಾ ಸೇಫ್ ಅಂತ ಅನಿಸುತ್ತಿರಲಿಲ್ಲ. ಕಲಾವಿದರಿಗೆ ನಿಜವಾಗಿಯೂ ಇದು ಮುಖ್ಯ. ನೀವು ನಿಜಕ್ಕೂ ಅಂತ ಸುರಕ್ಷತತೆಯನ್ನು ಅನುಭವಿಸಬೇಕು. ಇದು ವಿಶೇಷವಾಗಿ ಇಂತಹ ಚಿತ್ರದಲ್ಲಿ ನೀವು ತೆಗೆದುಕೊಳ್ಳುವ ಜಂಪ್ ಆಗಿದೆ. ನಾನು ಏನನ್ನೂ ಹೇಳಲು, ಏನನ್ನೂ ಮಾಡಲು, ಒಂದು ನಿರ್ದಿಷ್ಟ ರೀತಿಯಲ್ಲಿ ಭಾವೋದ್ರಿಕ್ತನಾಗಲು ಹೆದರಿಲ್ಲ ನನಗೆ ತುಂಬಾ ಸೇಫ್ ಫೀಲ್ ಮಾಡಿದ್ರು. ತುಂಬಾ ಸುಲಭ ಎನ್ನುವ ಭಾವನೆ ಮುಡಿಸಿದ್ರು. ಅದು ತುಂಬಾ ಇಷ್ಟವಾಯಿತು' ಎಂದು ಹೇಳಿದ್ದಾರೆ. 

ತಮನ್ನಾ ತೊಡೆಮೇಲೆ ಬಾಯ್‌ಫ್ರೆಂಡ್ ವಿಜಯ್ ವರ್ಮಾ: ರೊಮ್ಯಾಂಟಿಕ್ ಫೋಟೋ ವೈರಲ್

ವಿಜಯ್ ವರ್ಮಾ ಜೊತೆಗಿನ ಪ್ರೀತಿ ಒಪ್ಪಿಕೊಂಡ ತಮನ್ನಾ 

ಫಿಲ್ಮ್ ಕಂಪ್ಯಾನಿಯನ್ ಜೊತೆ ಮಾತನಾಡಿದ ನಟಿ ತಮನ್ನಾ ಭಾಟಿಯಾ ವಿಜಯ್ ವರ್ಮಾ ಬಗ್ಗೆ ಬಹಿರಂಗ ಪಡಿಸಿದ್ದರು. 'ಅವರು (ವಿಜಯ್ ವರ್ಮಾ) ನಾನು ತುಂಬಾ ಬಾಂಧವ್ಯ ಹೊಂದಿದ ವ್ಯಕ್ತಿ. ಯಾರೋ ಒಬ್ಬರು ನಿಮ್ಮ ಸಹನಟರಾಗಿದ್ದ ಮಾತ್ರಕ್ಕೆ ಅವರೊಡನೆ ಆಕರ್ಷಿತರಾಗಲು ಸಾಧ್ಯವಿಲ್ಲ. ಏಕೆಂದರೆ ನಾನು ಈಗಾಗಲೇ ಹಲವಾರು ನಟರೊಡನೆ ನಟಿಸಿದ್ದೇನೆ. ಯಾರ ಕಡೆಗೂ ನಾನು ಆಕರ್ಷಿತಳಾಗಿಲ್ಲ. ಯಾರ ಬಗ್ಗೆಯಾದರೂ ನೀವು ನಿಜಕ್ಕೂ ಮನಸೋತಿರೆಂದರೆ, ಭಾವನೆಗಳು ಹುಟ್ಟಿದವೆಂದರೆ ಅದು ಬಹಳ ವೈಯಕ್ತಿಕವಾಗಿದೆ. ಆ ವ್ಯಕ್ತಿ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಯಶಸ್ವಿ ವ್ಯಕ್ತಿಯೋ ಎಂಬುದೆಲ್ಲವೂ ಗಣನೆಗೆ ಬರುವುದೇ ಇಲ್ಲ' ಎಂದಿದ್ದಾರೆ.

ಅವರು ನನ್ನ ಖುಷಿಯ ಖಜಾನೆ: ವಿಜಯ್ ವರ್ಮಾ ಜೊತೆಗಿನ ಪ್ರೀತಿ ಒಪ್ಪಿಕೊಂಡ ನಟಿ ತಮನ್ನಾ
 
ಲಸ್ಟ್ ಸ್ಟೋರೀಸ್ 2 ಸೆಟ್‌ಗಳಲ್ಲಿ ವಿಜಯ್‌ ವರ್ಮಾ ಜೊತೆ ಪ್ರೀತಿ ಶುರುವಾಯಿತಾ ಎಂದು ಕೇಳಿದ ಪ್ರಶ್ನೆಗೆ   ತಮನ್ನಾ, 'ಹೌದು' ಎಂದು ಹೇಳಿದರು. ಬಳಿಕ ವಿಜಯ್ ವರ್ಮರನ್ನು ವಿವರಿಸಿದರು. ವಿಜಯ್ ವರ್ಮಾ ನನ್ನ ಖುಷಿಯ ಖಜಾನೆ ಎಂದು ಹೇಳಿದರು. 'ನಮ್ಮ ಸಂಬಂಧ ಬಹಳ ನೈಸರ್ಗಿಕ ರೀತಿಯಲ್ಲಿ ಯಾವುದೇ ಒತ್ತಡಗಳಿಲ್ಲದೆ ಶುರುವಾಯ್ತು' ಎಂದು ಹೇಳುವ ಮೂಲಕ ಮೊದಲ ಬಾರಿಗೆ ಪ್ರೀತಿ ವಿಚಾರ ಬಹಿರಂಗ ಪಡಿಸಿದರು. 

Latest Videos
Follow Us:
Download App:
  • android
  • ios