ಬಾಲಿವುಡ್ ‌ನ ಖ್ಯಾತ ಹಾಸ್ಯ ನಟ ರಾಜು ಶ್ರೀವತ್ಸವ ಇನ್ನು ನೆನಪು ಮಾತ್ರ. ದೀರ್ಘ ಸಮಯ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ರಾಜು ಶ್ರೀವಾಸ್ತವ ಬುಧವಾರ (ಸೆಪ್ಟಂಬರ್ 21) ಇಹಲೋಕ ತ್ಯಜಿಸಿದರು. ರಾಜು ಶ್ರೀವಾತ್ಸವ ಬಗ್ಗೆ ಕೇಳಿದ್ದಕ್ಕೆ ತಾಪ್ಸಿ ಫುಲ್ ಗರಂ ಆಗಿದ್ದಾರೆ. 

ಬಾಲಿವುಡ್ ‌ನ ಖ್ಯಾತ ಹಾಸ್ಯ ನಟ ರಾಜು ಶ್ರೀವತ್ಸವ ಇನ್ನು ನೆನಪು ಮಾತ್ರ. ದೀರ್ಘ ಸಮಯ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ರಾಜು ಶ್ರೀವಾಸ್ತವ ಬುಧವಾರ (ಸೆಪ್ಟಂಬರ್ 21) ಇಹಲೋಕ ತ್ಯಜಿಸಿದರು. ಅವರ ನಿಧನ ಅಭಿಮಾನಿಗಳಿಗೆ, ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ತೀವ್ರ ನೋವಾಗಿದೆ. 58 ವರ್ಷದ ನಟ ರಾಜು ಶ್ರೀವಾತ್ಸವ ಅವರು 40 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ರಾಜು ಅವರ ಬಗ್ಗೆ ಕೇಳಿದ್ದಕ್ಕೆ ತಾಪ್ಸಿ ಪನ್ನು ಗರಂ ಆಗಿದ್ದಾರೆ. ಪಾಪರಾಜಿಗಳ ವಿರುದ್ಧ ಕೆಂಡ ಕಾರಿದ್ದಾರೆ. ರಾಜು ನಿಧನಕ್ಕೆ ಬಾಲಿವುಡ್ ಸ್ಟಾರ್ ಕಲಾವಿದರಾದ ಅಜಯ್ ದೇವಗನ್, ಹೃತಿಕ್ ರೋಷನ್, ಕಪಿಲ್ ಶರ್ಮ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಹಾಸ್ಯ ನಟನ ನಿಧನಕ್ಕೆ ಕಣ್ಣೀರಾಕಿದ್ದಾರೆ. 

ಬಾಲಿವುಡ್ ಮಂದಿ ಕಂಬನಿ ಮಿಡಿಯುವಾಗ ತಾಪ್ಸಿ ಪನ್ನು ಗರಂ ಆಗಿರುವುದು ನೆಟ್ಟಿಗರ ಕೋಪಕ್ಕೆಕಾರಣವಾಗಿದೆ. ಕ್ಯಾಮರಾ ಮುಂದೆ ಹಾಜರಾದ ತಾಪ್ಸಿಗೆ ರಾಜು ಶ್ರೀವಾತ್ಸವ್ ಬಗ್ಗೆ ಪ್ರಶ್ನೆ ಎದುರಾಗಿದೆ. ಅದೇ ಸಮಯಕ್ಕೆ ಎಲ್ಲರೂ ತಾಪ್ಸಿಯನ್ನು ಮುತ್ತಿಕೊಂಡರು. ಆಗ ನಾನೇನು ಹೇಳ್ಲಿ, ಒಂದು ಸಿನಿಮಾ, ಒಂದು ಸಿನಿಮಾ ಹೇಗೆಲ್ಲಾ ಮಾಡಬೇಡಿ, ಹಿಂದೆ ಹೋಗಿ ಎಂದು ಹೇಳುತ್ತಾ ಪಾಪರಾಜಿಗಳ ವಿರುದ್ಧ ಕಿಡಿ ಕಾರುತ್ತಾ ಅಲ್ಲಿಂದ ಹೊರಟರು. ತಾಪ್ಸಿಯ ಈ ವರ್ತನೆ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. ಅನೇಕರು ನಾನಾರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಕಂಗನಾ ಪಾರ್ಟ್-2 ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಕೋಪಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಆಕೆಯ ಭದ್ರತ ಸಿಬ್ಬಂದಿ ಎಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಈ ವೈರಲ್ ಆಗಿದೆ. 

#BoycottDobaaraa; ಬಾಯ್ಕಟ್ ಮಾಡಿ ಎಂದಿದ್ದ ತಾಪ್ಸಿ ಈಗ ಸಿನಿಮಾ ನೋಡುವಂತೆ ಮನವಿ

ಅಂದಹಾಗೆ ತಾಪ್ಸಿ ಪನ್ನು ಈ ರೀತಿ ವರ್ತನೆ ಮಾಡುವುದು ಇದೇ ಮೊದಲಲ್ಲ. ದೋಬಾರಾ ಸಿನಿಮಾ ಈವೆಂಟ್ ನಲ್ಲೂ ಪಾಪರಾಜಿಗಳ ಜೊತ್ತೆ ಕಿತ್ತಾಡಿಕೊಂಡಿದ್ದರು. ತಾಪ್ಸಿ ಅವರ ಈ ವರ್ತನೆ ಅನೇಕರಿಗೆ ಬೇಸರ ತರಿಸಿದೆ. ಇದೀಗ ನಿಧನಹೊಂದಿದ ರಾಜು ಅವರ ಬಗ್ಗೆ ಕೇಳಿದ್ದಕ್ಕೂ ಈ ರೀತಿ ನಡೆದುಕೊಂಡಿರುವುದು ಬೇಸರದ ಸಂಗತಿ. 

View post on Instagram

ತಾಪ್ಸಿ ಪನ್ನು ಹೊಟ್ಟೆಗೆ ಏನು ತಿನ್ನುತ್ತಾರೆ? ನಟಿಯ ಫಿಟ್‌ನೆಸ್ secrets!

ತಾಪ್ಸಿ ಪನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ತಾಪ್ಸಿ ಕೊನೆಯದಾಗಿ ದೋಬಾರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಅಲ್ಲದೆ ಬಾಯ್ಕಟ್ ಸಮಸ್ಯೆಗೆ ತುತ್ತಾಗಿತ್ತು. ಬಾಯ್ಕಟ್ ಮಾಡಿ ಎಂದಿದ್ದ ತಾಪ್ಸಿ ಬಳಿಕ ಬಾಯ್ಕಟ್ ಮಾಡಬೇಡಿ, ಸಿನಿಾ ನೋಡಿ ಎಂದು ಮನವಿ ಮಾಡಿದ್ದರು, ಆದರೂ ಸಿನಿಮಾ ಹೀನಾಯ ಸೋಲು ಅನುಭವಿಸಿದೆ.