ನಟ ನಟಿಯರ ಫಿಟ್ನೆಸ್ ಗುಟ್ಟು ತಿಳಿಯಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರ, ವ್ಯಾಯಾಮ, ಬಹಳ ಮುಖ್ಯ. ಈ ಸಾಲಿನಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ದೈನಂದಿನ ಫಿಟ್ನೆಸ್ ಸೀಕ್ರೆಟ್ ಹೇಳಿಕೊಂಡಿದ್ದಾರೆ.

ಇಂದಿನ ಜನರೇಷನ್‌ಗೆ ಬಹುತೇಕರಿಗೆ ಸ್ಟಾರ್ ನಟ ನಟಿಯರೇ ಪ್ರೇರಣೆ ಎಂದರೆ ತಪ್ಪಾಗಲಾರದು. ಅದು ಗುರಿ ಸಾಧನೆ ಇರಲಿ ಆರೋಗ್ಯದ ವಿಷಯದಲ್ಲಿರಲಿ. ನಟ ನಟಿಯರನ್ನು ಅನುಸರಿಸುವುದೇ ಹೆಚ್ಚು. ಫಿಟ್ನೆಸ್ ವಿಚಾರದಲ್ಲೂ ಅಷ್ಟೇ. ಬಾಲಿವುಡ್ ನಟಿ ತಾಪ್ಸಿ ಪನ್ನು ಸಹ ತಮ್ಮ ಫಿಟ್ನೆಸ್‌ನಿಂದ ಆರೋಗ್ಯದ ಗುಟ್ಟನ್ನು ತಮ್ಮ ಫ್ಯಾನ್ಸ್ಗಳಿಗೆ ತಿಳಿಸಿದ್ದಾರೆ. ಅವರು ಅನುಸರಿಸುವ ಐದು ಸೂತ್ರಗಳನ್ನು ತಿಳಿಸಿದ್ದಾರೆ. 

ತಾಪ್ಸಿ ಪನ್ನು ಫಿಟ್ನೆಸ್ ದಿನಚರಿ ಇಲ್ಲಿವೆ

ಬೆಳಗ್ಗೆ ಉತ್ತಮ ವ್ಯಾಯಾಮ 
ತಾಪ್ಸಿ ಪನ್ನು ದಿನವೂ ಬೆಳಗ್ಗೆ ಸೂರ್ಯ ನಮಸ್ಕಾರ ಮಾಡುವುದು ಮಿಸ್ ಮಾಡುವುದಿಲ್ಲ. ಏಕೆಂದರೆ ಸೂರ್ಯ ನಮಸ್ಕಾರ ಮಾಡುವುದರಿಂದ ಚಯಾಪಚಯ ಮತ್ತು ರಕ್ತ ಪರಿಚಲನೆ ಸುಧಾರಿಸುವುದರ ಜೊತೆಗೆ ಈ ವ್ಯಾಯಾಮದಿಂದ ಬೆವರುವುದರಿಂದ ಚರ್ಮಕ್ಕೆ ತೇಜಸ್ಸು ನೀಡುವುದಲ್ಲದೆ ಆರೋಗ್ಯಕರವಾಗಿರಿಸುತ್ತದೆ. ಇದು ವಯಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಬೆಳಗಿನ ಈ ವ್ಯಾಯಾಮ ದಿನವಿಡೀ ಹೆಚ್ಚಿನ ಶಕ್ತಿ ಮತ್ತು ಆಶಾವಾದವನ್ನು ಹೆಚ್ಚಿಸುವಂತೆ ಮಾಡುತ್ತದೆ. ವ್ಯಾಯಾಮದ ನಂತರ ಆಗಾರ ಸೇವಿಸುವುದರಿಂದ ದಿನವಿಡೀ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.

ಶ್ರೀನಿಧಿ ಶೆಟ್ಟಿ ಹೊಟ್ಟೆಗೆ ಏನು ತಿಂತಾರಂತೆ? ಫಿಟ್ನೆಸ್ ಸೀಕ್ರೇಟ್ಸ್ ಏನು?

ಹೊರಾಂಗಣದಲ್ಲಿ ವ್ಯಾಯಾಮ 
ತಾಪ್ಸಿ ಪನ್ನು ಲಾಕ್‌ಡೌನ್ ಸಮಯದಲ್ಲಿ ಶಭಾಶ್ ಮಿಥು ಸಿನಿಮಾಗಾಗಿ ತರಬೇತಿ ಪಡೆಯುತ್ತಿದ್ದರು. ಅದನ್ನೇ ಮುಂದುವರೆಸಿರುವ ಅವರು ಹೊರಗಡೆ ಅಂದರೆ ವಾತಾವರಣಕ್ಕೆ ದೈಹಿಕ ಚಟುವಟಿಕೆಯ ವ್ಯಾಯಾಮ ಮಾಡುವುದು ಬಹಳ ಒಳ್ಳೆಯದು ಎಂದಿದ್ದಾರೆ. ಹೀಗೆ ಮಾಡುವುದರಿಂದ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡುತ್ತದೆ ಮತ್ತು ಪಾರ್ಶ್ವಬವಾಯು ಮತ್ತು ಇತರೆ ಹೃದಯ ಸಂಬAಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಸುಸ್ಥಿರ ಆಹಾರ 
ವ್ಯಾಯಾಮ ಮಾಡುವುದರೊಂದಿಗೆ ಕೇವಲ ದೇಹಕ್ಕಷ್ಟೇ ಅಲ್ಲ, ಸೇವಿಸುವ ಆಹಾರದಲ್ಲೂ ಎಚ್ಚರವಹಿಸಬೇಕು. ತಾಪ್ಸಿಯ ತರಬೇತುದಾರರಾದ ಪೌಷ್ಠಿಕತಜ್ಞರಾದ ಮುನ್ಮುನ್ ಗನೇರಿವಾಲ್ ತಾಪ್ಸಿಯ ಆಹಾರದ ಮೆನುವಿನಲ್ಲಿ ಬದಲಾವಣೆ ತಂದಿದ್ದರು. ಸಾಮಾನ್ಯ ಆಹಾರದ ಜೊತೆಗೆ ಅವರು ಕೊಬ್ಬನ್ನು ಕರಗಿಸುವ ಕಚ್ಚಾ, ಫಿಲ್ಟರ್ ಮಾಡದ ಆಪಲ್ ಸೈಡರ್, ಮೆಂತ್ಯ, ಅರಿಶಿಣ ಮತ್ತು ಶುಂಠಿ ಸೇವನೆ ಕಡ್ಡಾಯ. ಕೆಲವೊಮ್ಮೆ ಒಂದೇ ರೀತಿಯ ಆಹಾರ ಕ್ರಮ ಮೆಂಟೇನ್ ಮಾಡುವುದು ಒಳ್ಳೆಯದು.

ಜಾಗಿಂಗ್‌ನಲ್ಲಿ
ತಾಪ್ಸಿ ಪನ್ನು ತಮ್ಮ ಫ್ರೀ ಟೈಂ ದಿನಗಳಲ್ಲಿ ಜಾಗಿಂಗ್ ಅಥವಾ ಫಾಸ್ಟ್ ವಾಕಿಂಗ್ ಮಾಡುವುದು ಮಿಸ್ ಮಾಡುವುದಿಲ್ಲವಂತೆ. ಈ ಮೂಲಕ ತಮ್ಮ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತಾರೆ. ಓಡುವುದರಿಂದ ಸ್ನಾಯು ಮತ್ತು ಮೂಳೆಗಳ ಬಲವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಅಲ್ಲದೆ ದೇಹದ ಟೆಕ್ಸಚರ್ ಸಹ ಕಾಯ್ದುಕೊಳ್ಳುತ್ತದೆ. ದೇಹದ ಎಲ್ಲಾ ಎಂಟು ಪ್ರಮುಖ ಸ್ನಾಯುಗಳ ಗುಂಪನ್ನು ಗುರಿಯಾಗಿಸುವ ಜೊತೆಗೆ, ಜಾಗಿಂಗ್ ಗ್ಲುಟ್ಸ್, ಕ್ವಾಡ್ರೈಸ್ಪ್ಸ್, ಹ್ಯಾಮ್ಸ್ಟ್ರಿಂಗ್ಸ್, ಎಬಿಎಸ್ ಅನ್ನು ಗುರಿಯಾಗಿಸುತ್ತದೆ.

ತೂಕ ಇಳಿಸಿಕೊಳ್ಳುವ ಆತುರದಲ್ಲಿ ಆರೋಗ್ಯ ಹಾಳು ಮಾಡ್ಕೊಳ್ಳಬೇಡಿ

ಲಘು ಆಹಾರ
ತಾಪ್ಸಿ ಪನ್ನು ರಶ್ಮಿ ರಾಕೆಟ್ ಸಿನಿಮಾ ಮಾಡುವಾಗ ಕಡಿಮೆ ಕಾರ್ಬ್ ಅಥವಾ ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸುತ್ತಿರಲಿಲ್ಲ. ಬದಲಾಗಿ ಅವರು ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳ ಉತ್ತಮ ಮಿಶ್ರಣವಾದ ಖಿಚಡಿಯನ್ನು ಸೇವಿಸುತ್ತಿದ್ದರಂತೆ. ಪನ್ನು ಓಟ್ಸ್ ಮತ್ತು ಕ್ವಿನೋವಾ ಬದಲಿಗೆ ಬಾರ್ಲಿ, ಬಜ್ರಾ ಮತ್ತು ಜೋಳವನ್ನು ಸೇವಿಸುತ್ತಿದ್ದರು. ಇದು ಅವರ ಪೌಷ್ಟಿಕತಜ್ಞರ ಪ್ರಕಾರ, ಪನ್ನುಗೆ ಸಾಮಾನ್ಯ ಊಟ. ಪ್ರೋಟೀನ್ ಬಾರ್, ಇಷ್ಟವಾದ ಆಹಾರ ಸೇವಿಸುವುದರ ಬದಲಿಗೆ ಹಿಟ್ಟು, ಕಡಲೆಕಾಯಿ, ಬೇಸನ್ ಲಡ್ಡುಗಳಂತಹ ಲಘು ಆಹಾರಗಳನ್ನು ಸೇವಿಸಬೇಕು ಎನ್ನುತ್ತಾರೆ. ಲಘು ಆಹಾರ ಸೇವಿಸುವುದರಿಂದ ವ್ಯಾಯಾಮ ಮಾಡುವಾಗ ದೇಹವೂ ಹಗುರಾಗಿರುತ್ತದಲ್ಲದೆ, ಎನರ್ಜಿ ಲೆವೆಲ್ ಕಡಿಮೆ ಆಗದಂತೆ ನೋಡಿಕೊಳ್ಳುತ್ತದೆ.