ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್ ಜೊತೆಗಿನ ಕ್ವೀನ್ ಕಂಗನಾ ವಾಕ್ಸಮರ ಜೋರಾಗಿರುವಂತೆ ನಟಿಗೆ ಕೇಂದ್ರ ಸರ್ಕಾರ Y+ ಭದ್ರತೆ ನೀಡಿದೆ. ಮುಂಬೈಗೆ ಕಂಗನಾ ಬರುತ್ತಾರೆ ಎಂದಾಗಲೇ ನಟಿಯ ಪೋಸ್ಟರ್‌ಗೆ ಶಿವಸೇನಾ ಮಹಿಳಾ ಕಾರ್ಯಕರ್ತರು ಚಪ್ಪಲಿ ಎಸೆದು ಪ್ರತಿಭಟಿಸಿದ್ದರು.

ಇದೀಗ ನಟಿಗೆ Y+ ಭದ್ರತೆ ನೀಡಿದ ಬಗ್ಗೆ ಬಾಲಿವುಡ್ ನಟಿಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನರ ತೆರಿಗೆ ಹಣ ಇದಕ್ಕೆ ಬಳಸುತ್ತಿರುವುದನ್ನು ಟೀಕಿಸಿದ್ದಾರೆ. ನಟಿ ಕುಬ್ರಾ ಸೇಠ್ ಹಾಗೂ ಸ್ವಾರಾ ಭಾಸ್ಕರ್ ಕಂಗನಾಳಿಗೆ ನೀಡಿದ ವಿಶೇಷ ಭದ್ರತೆಯನ್ನು ಪ್ರಶ್ನಿಸಿದ್ದಾರೆ. ಸುಮ್ಮನೆ ಕಂಗನಾಗೆ ಭದ್ರತೆ ಒದಗಿಸೋ ಸುದ್ದಿ ಹರ ಬೀಳುತ್ತಿದ್ದಂತೆ ಪ್ರತಿಕ್ರಿಯಿಸಿದ ನಟಿ, ಸುಮ್ಮನೆ ಚೆಕ್ ಮಾಡ್ತಿದ್ದೇನೆ, ಇದು ನನ್ನ ಟ್ಯಾಕ್ಸ್ ಪೆಮೆಂಟ್‌ನಲ್ಲಿಯಾ..? ಎಂದು ಪ್ರಶ್ನಿಸಿದ್ದಾರೆ.

ನಟಿ ಕಂಗನಾಗೆ ‘ವೈ’ ಶ್ರೇಣಿ ಭದ್ರತೆ;ದಿನವಿಡೀ 10 ಸಿಆರ್‌ಪಿಎಫ್‌ ಯೋಧರ ಕಾವಲು!

ಇನ್ನ ಸ್ವರಾಗೆ ಭದ್ರತೆ ಒದಗಿಸಬೇಕೆಂಣಬ ಟ್ವಿಟರ್ ಬಳಕೆದಾರರೊಬ್ಬರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸ್ವರಾ, ಥಾಂಕ್ಯೂ ನಜ್ಮಾ, ಆದರೆ ಬೇಡ. ತೆರಿಗೆ ಹಣ ಅಭಿವೃದ್ಧಿ, ಅಪೌಷ್ಟಿಕತೆ ನಿರ್ಮೂಲನೆಗೆ ಬಳಕೆಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಸಿಆರ್‌ಪಿಎಫ್ ಭದ್ರತಾ ಸಿಬ್ಬಂದಿಯಿಂದ ಭದ್ರತೆ ಪಡೆಯಲಿರುವ ಮೊದಲ ನಟಿಯಾಗಲಿದ್ದಾರೆ ಕಂಗನಾ.  ಸಿಆರ್‌ಪಿಎಫ್ ಭದ್ರತೆ ಪಡೆಯುವವರು ಸಾಮಾನ್ಯವಾಗಿ ಸರ್ಕಾರದಿಂದ ಪಡೆಯುವ ಭದ್ರತೆಗೆ ಪಾವತಿ ಮಾಡುತ್ತಾರೆ.

ಕಂಗನಾ ಪೋಸ್ಟರ್‌ಗೆ ಚಪ್ಪಲಿ ಎಸೆದ ಶಿವಸೇನೆ..! ಬಿಜೆಪಿ ವಕ್ತಾರ ಹೇಳಿದ್ದಿಷ್ಟು

ಕಂಗನಾ ಮುಂಬೈನ್ನು ಪಿಒಕೆಗೆ ಹೋಲಿಸಿದ ನಂತರ ಸಂಜಯ್ ರಾವತ್ ನಟಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಟಿ ಮುಂಬೈನಲ್ಲಿ ಇರಲು ಭಯವಾಗುತ್ತೆ ಅಂದಿದ್ದರು. ಇದಕ್ಕೆ ಉತ್ತರಿಸಿದ ರಾವತ್, ನಿಮ್ಮನ್ನು ಮುಂಬೈಗೆ ಬರಲು ಬಿಡುವುದಿಲ್ಲ ಎಂದು  ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ.