ಆಗ ಅಣ್ಣ ಈಗ ಪತಿ; ಸಹೋದರ ಎಂದವನ ಜೊತೆಯೇ ಮದುವೆಯಾದ ನಟಿ ಸ್ವರಾ ಭಾಸ್ಕರ್ ಸಖತ್ ಟ್ರೋಲ್

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ರಾಜಕಾರಣಿ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸ್ವರಾ ಪತಿ ಜೊತೆಗಿನ ಫೋಟೋ ಶೇರ್ ಮಾಡುತ್ತಿದ್ದಂತೆ  ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

Swara Bhasker gets trolled for old tweet calling husband Fahad Ahmad bhai sgk

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ರಾಜಕಾರಣಿ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಿಢೀರ್ ಮದುವೆಯಾಗುವ ಮೂಲಕ ಸ್ವರಾ ಭಾಸ್ಕರ್ ಅಚ್ಚರಿ ಮೂಡಿಸಿದರು. ನಿನ್ನೆ (ಫೆಬ್ರವರಿ 17)  ಗುರುವಾರ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ  ಶಾಕ್ ನೀಡಿದರು. ಅಹ್ಮದ್ ಸಮಾಜವಾದಿ ಪಕ್ಷದ ಯುವ ಘಟಕ ಸಮಾಜವಾದಿ ಯುವಜನ ಸಭಾದ ರಾಜ್ಯಾಧ್ಯಕ್ಷರಾಗಿದ್ದಾರೆ. ಅಹ್ಮದ್ ಮತ್ತು ಸ್ವರಾ ಇಬ್ಬರೂ ರ್ಯಾಲಿಯಲ್ಲಿ ಭೇಟಿಯಾಗಿದ್ದರು ಬಳಿಕ ಸ್ನೇಹಿತರಾಗಿ ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. 

ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವರಾ ಪತಿ ಜೊತೆಗಿನ ಫೋಟೋ ಶೇರ್ ಮಾಡುತ್ತಿದ್ದಂತೆ  ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಕಾರಣ ಅವರ ಹಳೆಯ ಟ್ವೀಟ್. ಹೌದು ಈ ಮೊದಲು ಪತಿ ಅಹ್ಮದ್ ಅವರನ್ನು ಅಣ್ಣ ಎಂದು ಕರೆದಿದ್ದರು. ಇದೀಗ ಅಣ್ಣ ಎಂದವನ ಜೊತೆಯೇ ಮದುವೆಯಾಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸ್ವರಾ ಟ್ರೋಲ್ ಆಗುತ್ತಿರುವುದು ಅದೇ ಮೊದಲ್ಲ. ತನ್ನ ಹೇಳಿಕೆ ಹಾಗೂ ರಾಜಕೀಯ  ದೃಷ್ಟಿಕೋನಗಳಿಗಾಗಿ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು. ಇದೀಗ ಮದುವೆ ವಿಚಾರಕ್ಕೂ ಟ್ರೋಲ್ ಆಗಿದ್ದಾರೆ.  

ಸ್ವರಾ ಪತಿಯನ್ನು ಅಣ್ಣ (ಭಾಯ್) ಎಂದು ಕರೆದಿದ್ದ ಹಳೆಯ ಟ್ವೀಟ್ ವೈರಲ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಮದುವೆಗೂ 10 ದಿನಗಳ ಹಿಂದೆ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, ಅಹ್ಮದ್‌ಗೆ ಹುಟ್ಟುಹಬ್ಬದ ವಿಶ್ ಮಾಡಿದ್ದರು. 'ಹುಟ್ಟುಹಬ್ಬದ ಶುಭಾಶಯಗಳು ಫಹಾದ್ ಮಿಯಾನ್. ಸಹೋದರನ ವಿಶ್ವಾಸವು ಹಾಗೇ ಉಳಿಯಲಿ' ಎಂದು ಹೇಳಿದ್ದರು. ನೀವು ಈಗ ಮದುವೆಯಾಗಿ, ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದರು. ಈ ಹಳೆಯ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿ ಸ್ವರಾ ಭಾಸ್ಕರ್ ಕಾಲೆಳೆಯುತ್ತಿದ್ದಾರೆ. ಸಹೋದರ ಮತ್ತು ಸಹೋದರಿ ಇಬ್ಬರಿಗೂ ಸಂತೋಷದ ವೈವಾಹಿಕ' ಎಂದು ಒಬ್ಬ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಕೇವಲ 13 ದಿನಗಳಲ್ಲಿ ಅಣ್ಣ ಪತಿಯಾಗಿದ್ದಾನೆ ಎಂದು ಹೇಳಿದ್ದಾರೆ. ಒಮ್ಮೆ ಅಣ್ಣ ಮತ್ತೊಮ್ಮ ಪ್ರೇಮಿ' ಎಂದು ಮತ್ತೋರ್ವ ಹೇಳಿದ್ದಾರೆ.

ಮದ್ವೆಯಾಗಿ ಏಕಾಏಕಿ ಶಾಕ್​ ಕೊಟ್ಟ ನಟಿ Swara Bhasker- ಯಾರೀ 'ನಿಗೂಢ' ಗಂಡ?

ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದ ಸ್ವರಾ  

ಇತ್ತೀಚಿಗಷ್ಟೆ ಸ್ವರಾ ಭಾಸ್ಕರ್ ನಿಗೂಢ ವ್ಯಕ್ತಿ ಜೊತೆಗೆ ಇರುವ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದರು. ಸ್ವರಾ ಅವರನ್ನು ವ್ಯಕ್ತಿಯೊಬ್ಬರು ತಬ್ಬಿಕೊಂಡಿದ್ದರು. ಆದರೆ ಅವರ ಮುಖ ಕಾಣುತ್ತಿರಲಿಲ್ಲಲ್ಲ. ಸ್ವರಾ ಹಾಸಿಗೆ ಮೇಲೆ ಮಲಗಿದ್ದು ವ್ಯಕ್ತಿಯೊಬ್ಬ ತೋಳಿನಿಂದ ಬಂಧಿಸಿದ್ದರು. 'ಇದು ಪ್ರೀತಿ ಆಗಿರಬಹುದು' ಎಂದು ಸ್ವರಾ ಪೋಸ್ಟ್‌ಗೆ ಕ್ಯಾಪ್ಷನ್ ನೀಡಿದ್ದರು. ಸ್ವರಾ ಭಾಸ್ಕರ್ ಪೋಸ್ಟ್ ಮಾಡಿದ ಕೂಡಲೇ, ಅಭಿಮಾನಿಗಳು ನಿಮ್ಮ ಬಾಯ್ ಪ್ರೆಂಡ್ ಹಾ ಎಂದು ಕಾಮೆಂಟ್ ಮಾಡುತ್ತಿದ್ದರು. ಇದೀಗ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

6 ರಿಂದ 7 ಹಿಟ್‌ ಕೊಟ್ಟರೂ ಕೈಯಲ್ಲಿ ಒಂದೂ ಸಿನಿಮಾವಿಲ್ಲ: Swara Bhasker ಬೇಸರ

ಜನವರಿ 6, 2023 ರಂದು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.  ಸ್ವರಾ ತಮ್ಮ  ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದಾರೆ.  ಫೋಟೋ ಜೊತೆಗೆ ಸ್ವರಾ, 'ಕೆಲವೊಮ್ಮೆ ಹತ್ತಿರವೇ ಇರುವವರನ್ನು ದೂರೆಲ್ಲೋ ಹುಡುಕುತ್ತೇವೆ. ಆದರೆ ಫಹಾದ್​ ಅವರು ಹತ್ತಿರದಲ್ಲಿಯೇ ಇದ್ದಾಗ ಅವರೇ ನನ್ನ ಪ್ರೀತಿ ಎನ್ನುವುದು ತಿಳಿಯಲು ಹೆಚ್ಚುಹೊತ್ತು ಬೇಕಾಗಲಿಲ್ಲ' ಎಂದು ಹೇಳಿದ್ದಾರೆ. ತಮ್ಮಿಬ್ಬರ ಸ್ನೇಹವು ಹಲವಾರು ಪ್ರತಿಭಟನೆಗಳಲ್ಲಿ ಭಾಗಿಯಾಗುವ ಮೂಲಕ ಆಗಿದೆ ಎಂದು ಫಹಾದ್​ ಕೂಡ ತಿಳಿಸಿದ್ದಾರೆ. 

 

Latest Videos
Follow Us:
Download App:
  • android
  • ios