Asianet Suvarna News Asianet Suvarna News

6 ರಿಂದ 7 ಹಿಟ್‌ ಕೊಟ್ಟರೂ ಕೈಯಲ್ಲಿ ಒಂದೂ ಸಿನಿಮಾವಿಲ್ಲ: Swara Bhasker ಬೇಸರ

ಮೊದಲ ಬಾರಿ ವೃತ್ತಿ ಜೀವನದ ಬಗ್ಗೆ ಕಾಮೆಂಟ್ ಮಾಡಿದ ಸ್ವರಾ ಬಾಸ್ಕರ್. ಯಾವುದೇ ಕಾಂಪಿಟೆಂಟ್‌ ನಟರಿಗೂ ಕಡಿಮೆ ಇಲ್ಲ ನನ್ನ ಜೀವನ ಎಂದ ನಟಿ...

Despite 7 block buster not getting enough work says Actress Swara Bhasker vcs
Author
First Published Dec 6, 2022, 9:23 AM IST

ಬಾಲಿವುಡ್ ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಸ್ವರಾ ಬಾಸ್ಕರ್ ಮೊದಲ ಬಾರಿಗೆ ತಮ್ಮ ವೃತ್ತಿ ಜೀವನದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ರಿಸ್ಕ್‌ ತೆಗೆದುಕೊಂಡು ಕೆಲಸ ಮಾಡುತ್ತಿರುವುದಕ್ಕೆ ದೊಡ್ಡ ನಷ್ಟವೇ ಆಗಿದೆ ಎಂದು ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಸ್ವರಾ ಹೇಳಿದ್ದಾರೆ. 6 ರಿಂದ 7 ಬ್ಲಾಕ್‌ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದ್ದರೂ ಕೈಯಲ್ಲಿ ಒಂದು ಸಿನಿಮಾವಿಲ್ಲ ಇದೆಲ್ಲಾ ನನಗೆ ವೆಬ್‌ ಸೀರಿಸ್‌ ಮಾಡಿದ ರೀತಿ ಅನಿಸುತ್ತಿದೆ  ಎಂದು ಹೇಳಿರುವ ಮಾತು ಅಭಿಮಾನಿಗಳ ಮನಸ್ಸು ಮುಟ್ಟಿದೆ. 

2009ರಲ್ಲಿ  drama Madholal Keep Walking ಸಿನಿಮಾದ ಮೂಲಕ ಡೆಬ್ಯೂ ಮಾಡಿದ ಸ್ವರಾ ಬಾಸ್ಕರ್ 2011ರಲ್ಲಿ ತನು ವೆಡ್ಸ್‌ ಮನು, 2013ರಲ್ಲಿ ರಾಂಜನಾ, 2015ರಲ್ಲಿ ಪ್ರೇಮ್ ರತನ್ ಧನುಪಾಯೋ,2016ರಲ್ಲಿ ನಿಲ್ ಬತ್ತೆ ಸಣ್ಣಾಟ, 2017ರಲ್ಲಿ ಆರಾಹ್ ನ ಅನಾರ್ಕಲಿ, 2018ರಲ್ಲಿ ವೀರ್‌ ಕೀ ವೆಡ್ಡಿಂಗ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

Despite 7 block buster not getting enough work says Actress Swara Bhasker vcs

'ಪ್ರಜ್ಞಾಪೂರ್ವಕವಾಗಿ ಒಂದು ವಿಚಾರದ ಬಗ್ಗೆ ರಿಸ್ಕ್‌ ತೆಗೆದುಕೊಳ್ಳುತ್ತಿರುವೆ ಅಂದ್ರೆ ಅದು ನನ್ನ ವೃತ್ತಿ ಜೀವನ ಎನ್ನಬಹುದು. ಇದರ ಪರಿಣಾಮ ದೊಡ್ಡದಾಗಿದೆ ಹಾಗೂ ಪರ್ಸನಲಿ ಮತ್ತು ಎಮೋಷನಲಿ ಆ ನೋವು ಗೊತ್ತಾಗುತ್ತಿದೆ. ಏನೇ ಇರಲಿ ನಾನು ಇಷ್ಟ ಪಟ್ಟು ಮಾಡುತ್ತಿರುವ ಕೆಲಸ ಇದಾಗಿರುವ ಕಾರಣ ಸದಾ ಅಭಿನಯಿಸುವೆ. ಸಾಕು ಅಂತ ಎಂದಿಗೂ ಅನಿಸುವುದಿಲ್ಲ' ಎಂದು ಟೈಮ್ಸ್‌ ಆಫ್ ಇಂಡಿಯಾ ಸಂದರ್ಶನದಲ್ಲಿ ಸ್ವರಾ ಮಾತನಾಡಿದ್ದಾರೆ. 

'ನಾನು ಅದ್ಭುತ ನಟಿ ಹಾಗೂ ಇನ್ನಿತ್ತರರಿಗೆ ಕಾಂಪಿಟೇಷನ್‌ ಕೊಡುವೆ. ನನಗೆ ಸಿಕ್ಕಿರುವ ಅವಕಾಶಗಳಿಗಿಂತ ನಾನು ಅದ್ಭುತ ಎಂದು ಸಾಭೀತು ಮಾಡಲು ನಾನು ರೆಡಿಯಾಗಿರುವೆ. ನನ್ನ ವೃತ್ತಿ ಜೀವನದ ಬಗ್ಗೆ ಸರಿಯಾಗಿರುವ ರೆಕಾರ್ಡ್‌ ಟ್ರ್ಯಾಕ್ ಮಾಡಿರುವೆ. ಸುಮಾರು 6 ರಿಂದ 7 ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಲ್ಲಿ ನಾನು ಅಭಿನಯಿಸಿರುವೆ ಆದರೆ ಅದೆಲ್ಲಾ ವೆಬ್‌ ಸೀರಿಸ್‌ ರೀತಿಯಲ್ಲಿ ಜನರಿಗೆ ಕಾಣಿಸಿದೆ. ಇದುವರೆಗೂ ಯಾರೂ ಕೆಟ್ಟ ವಿಮರ್ಶೆ ಕೊಟ್ಟಿಲ್ಲ. ನನಗೆ ಸರಿಯಾಗಿ ಕೆಲಸವೂ ಸಿಕ್ಕಿಲ್ಲ ಒಂದು ಸಿನಿಮಾನೂ ಕೈಯಲ್ಲಿಲ್ಲ' ಎಂದು ಸ್ವರಾ ಬಾಸ್ಕರ್ ಹೇಳಿದ್ದಾರೆ. 

Kashmir Files Controversy; ಅಶ್ಲೀಲ ಚಿತ್ರವೆಂದ ಇಸ್ರೇಲಿ ನಿರ್ದೇಶಕನಿಗೆ ಸ್ವರಾ ಭಾಸ್ಕರ್, ಪ್ರಕಾಶ್ ರಾಜ್ ಬೆಂಬಲ

ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾಜದ ಹಿತಾಸಕ್ತಿ ಬಗ್ಗೆಯೂ ಧ್ವನಿ ಎತ್ತುವ ಸ್ವರಾ ಬಾಸ್ಕರ್ ಕೆಲವು ದಿನಗಳ ಹಿಂದೆ ಭಾರತ್ ಜೋಡೋ ಯಾತ್ರೆದಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್‌ ಪಾರ್ಟಿ ಲೀಡರ್ ರಾಹುಲ್ ಗಾಂಧಿ ಜೊತೆ ಮಧ್ಯಪ್ರದೇಶದಲ್ಲಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಕಾಲ್ನಡಿಗೆಯಲ್ಲಿ ಭಾಗಿಯಾಗಿದ್ದು ಮನಸ್ಸಿಗೆ ಖುಷಿ ಕೊಟ್ಟಿದೆ ಎಂದು ಟ್ವೀಟ್‌ ಮಾಡಿದ್ದರು. 

ಲವ್‌ ಲೈಫ್‌  ಹಾಳು ಮಾಡಲು ಶಾರುಖ್ ಕಾರಣ:

34 ವರ್ಷ ಆದರೂ ಸ್ವರಾ ಬಾಸ್ಕರ್ ಸಿಂಗಲ್ ಆಗಿರಲು ಕಾರಣವೇ ಶಾರುಖ್ ಖಾನ್ ಮತ್ತು ಆದಿತ್ಯಾ ಚೋಪ್ರಾ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದರು. 'ಶಾರುಖ್ ಖಾನ್ ಮತ್ತು ಆದಿತ್ಯ ಚೋಪ್ರಾ ಅವರ ಪ್ರೇಮ ಜೀವನವನ್ನು ಹಾಳಾಗಲು ಕಾರಣ ಎಂದು ನಾನು ಅವರನ್ನು ದೂಷಿಸುತ್ತೇನೆ.ನಾನು ಚಿಕ್ಕವಯಸ್ಸಿನಲ್ಲಿ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರವನ್ನು ನೋಡಿದ್ದೆ, ಅದರಲ್ಲಿ ಶಾರುಖ್ ರಾಜ್ ಪಾತ್ರದಲ್ಲಿ ನಟಿಸಿದ್ದರು. ಅಂದಿನಿಂದ ನಾನು ನನ್ನ ಜೀವನದಲ್ಲಿ ರಾಜ್‌ನಂತಹ ಸಂಗಾತಿಯನ್ನು ಪಡೆಯಬೇಕೆಂದು ಕನಸು ಕಂಡೆ.ಆದರೆ ಸ್ವಲ್ಪ ಸಮಯದ ನಂತರ ನನ್ನ ಭ್ರಮೆಯು ಛಿದ್ರವಾಯಿತು. ನಿಜ ಜೀವನದಲ್ಲಿ ಅಂತಹ ಸ್ವಾರಸ್ಯವಿಲ್ಲ ಎಂದು ಅರ್ಥಮಾಡಿಕೊಂಡಿದ್ದೇನೆ. ಈ ಕಾರಣಕ್ಕಾಗಿ ಈ ಸಂಬಂಧದ ವಿಷಯದಲ್ಲಿ ಚೆನ್ನಾಗಿಲ್ಲ ಮತ್ತು ಒಬ್ಬಂಟಿಯಾಗಿರುವುದು ಸರಿ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಸಂಗಾತಿಯನ್ನು ಹುಡುಕುವುದು ಕಸ ತೆಗೆದಂತೆ ಎಂದಿದ್ದರು ಸ್ವರಾ.
 

Follow Us:
Download App:
  • android
  • ios