Asianet Suvarna News Asianet Suvarna News

ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್; ಪಕ್ಕ ಬಾಯ್ ಫ್ರೆಂಡ್‌ ಎಂದ ಫ್ಯಾನ್ಸ್

ನಟಿ ಸ್ವರಾ ಭಾಸ್ಕರ್ ನಿಗೂಢ ವ್ಯಕ್ತಿ ಜೊತೆ ಫೋಟೋ ಹಂಚಿಕೊಂಡಿದ್ದಾರೆ. ನೆಟ್ಟಿಗರು ಪಕ್ಕ ಬಾಯ್ ಫ್ರೆಂಡ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

Swara Bhaskar Shares Picture With Mystery Man With A Caption This Could Be Love sgk
Author
First Published Jan 9, 2023, 4:37 PM IST

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ವಿವಾದಿತ ಹೇಳಿಕೆಗಳ ಮೂಲಕವೇ ಹೆಚ್ಚು ಸದ್ದು ಮಾಡುವ ನಟಿ ಸ್ವರಾ ಭಾಸ್ಕರ್ ಇದೀಗ ನಿಗೂಢ ವ್ಯಕ್ತಿ ಜೊತೆ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಫೋಟೋ ಜೊತೆಗೆ ಲವ್ ಇರಬಹುದಾ ಎಂದು ಕ್ಯಾಪ್ಷನ್ ನೀಡಿದ್ದಾರೆ. ಇತ್ತೀಚಿಗಷ್ಟೆ ನಟಿ ಸ್ವರಾ ಭಾಸ್ಕರ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಸ್ವರಾ ಅವರನ್ನು ವ್ಯಕ್ತಿಯೊಬ್ಬರು ತಬ್ಬಿಕೊಂಡಿದ್ದಾರೆ. ಆದರೆ ಅವರ ಮುಖ ಕಾಣುತ್ತಿಲ್ಲ. ವ್ಯಕ್ತಿಯೊಬ್ಬರ ತೋಳಲ್ಲಿ ಬಂದಿಯಾಗಿರುವ ಸ್ವರಾ ಫೋಟೋಗೆ  ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. 

ಸ್ವರಾ ಹಾಸಿಗೆ ಮೇಲೆ ಮಲಗಿದ್ದು ವ್ಯಕ್ತಿಯೊಬ್ಬ ತೋಳಿನಿಂದ ಬಂಧಿಸಿದ್ದಾರೆ. 'ಇದು ಪ್ರೀತಿ ಆಗಿರಬಹುದು' ಎಂದು ಸ್ವರಾ ಪೋಸ್ಟ್‌ಗೆ ಕ್ಯಾಪ್ಷನ್ ನೀಡಿದ್ದಾರೆ. ಸ್ವರಾ ಭಾಸ್ಕರ್ ಪೋಸ್ಟ್ ಮಾಡಿದ ಕೂಡಲೇ, ಅಭಿಮಾನಿಗಳು ನಿಮ್ಮ ಬಾಯ್ ಪ್ರೆಂಡ್ ಹಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದು ಖಂಡಿತ ಪ್ರೀತಿ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಂದಹಾಗೆ ಸ್ವರಾ ಭಾಸ್ಕರ್ ಈ ಹಿಂದೆ ಖ್ಯಾತ ಬರಹಗಾರ ಹಿಮಾಂಶು ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ 2019ರಲ್ಲಿ ಇಬ್ಬರೂ ದೂರ ದೂರ ಆದರು ಎನ್ನಲಾಗಿದೆ. 

Kashmir Files Controversy; ಅಶ್ಲೀಲ ಚಿತ್ರವೆಂದ ಇಸ್ರೇಲಿ ನಿರ್ದೇಶಕನಿಗೆ ಸ್ವರಾ ಭಾಸ್ಕರ್, ಪ್ರಕಾಶ್ ರಾಜ್ ಬೆಂಬಲ

ಇದೀಗ ಸ್ವರಾ ವ್ಯಕ್ತಿಯೊಬ್ಬರ ಜೊತೆ ಆಪ್ತವಾಗಿರುವ ಫೋಟೋ ಶೇರ್ ಮಾಡುವ ಮೂಲಕ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆದರೆ ಯಾರು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಸದ್ಯದಲ್ಲೇ ಸ್ವರಾ ಈ ಬಗ್ಗೆ ಬಹಿರಂಗ ಪಡಿಸುವ ಸಾಧ್ಯತೆ ಇದೆ. ನೇರ ನುಡಿ, ನಡೆಯ ಮೂಲಕವೇ ಅಭಿಮಾನಿಗಳ ಹೃದಯಗೆದ್ದಿರುವ ಸ್ವರಾ ಸದ್ಯದಲ್ಲೇ ದಾಂಪತ್ಯಕ್ಕೆ ಕಾಲಿಡುವ ಸಾಧ್ಯತೆ ಇದೆ.

 
 
 
 
 
 
 
 
 
 
 
 
 
 
 

A post shared by Swara Bhasker (@reallyswara)

ತನ್ನ ಲವ್‌ಲೈಫ್‌ ಹಾಳಾಗಲು ಶಾರುಖ್ ಖಾನ್‌ ಕಾರಣ: ಸ್ವರಾ ಭಾಸ್ಕರ್‌

ಸ್ವರಾ ಭಾಸ್ಕರ್​ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2009ರಲ್ಲಿ. ‘ತನು ವೆಡ್ಸ್​ ಮನು’, ‘ಪ್ರೇಮ್​ ರಥನ್​ ಧನ್​ ಪಾಯೋ’, ‘ಅನಾರ್ಕಲಿ ಆಫ್​ ಆರಾ’, ‘ವೀರೇ ದಿ ವೆಡ್ಡಿಂಗ್​’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ಕೂಡ ಸ್ವರಾ ಹೇಳಿಕೊಂಡಿದ್ದರು. ಆದರೂ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮೂರ್ನಾಲ್ಕ ಸಿನಿಮಾಗಳು ಸ್ವರಾ ಕೈಯಲ್ಲಿವೆ. ಸಿನಿಮಾ ಜೊತೆಗೆ ಸ್ವರಾ ಕಿರುತೆರೆಯಲ್ಲೂ ಬ್ಯುಸಿಯಾಗಿದ್ದರು.

Follow Us:
Download App:
  • android
  • ios