ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ ಅವರು ತುಂಬು ಗರ್ಭಿಣಿಯಾಗಿದ್ದು, ಅದರ ಫೋಟೋ ಶೇರ್​ಮಾಡಿದ್ದಾರೆ. ಧೈರ್ಯ ಇದ್ರೆ ಮಗುವಿಗೆ ಹಿಂದೂ ಹೆಸರು ಇಡಿ ಅಂತಿದ್ದಾರೆ ಫ್ಯಾನ್ಸ್​! 

ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ (Swara Bhaskar) ಅವರು ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmad) ಅವರೊಂದಿಗೆ ಕಳೆದ ಜನವರಿ 6 ರಂದು ಮದುವೆಯಾಗಿದ್ದು, ದಿಢೀರ್​ ಆಗಿ ಈ ಬಗ್ಗೆ ಘೋಷಿಸಿದ್ದರು. ತಾವು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು (Special Marriage Act) ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ (Registered) ತಿಳಿಸಿದ್ದರು. ಸ್ವರಾ ತಮ್ಮ ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದ ಫೋಟೋ ಶೇರ್​ ಮಾಡಿದ್ದರು. ಕೆಲವೊಮ್ಮೆ ಹತ್ತಿರವೇ ಇರುವವರನ್ನು ದೂರೆಲ್ಲೋ ಹುಡುಕುತ್ತೇವೆ. ಆದರೆ ಫಹಾದ್​ ಅವರು ಹತ್ತಿರದಲ್ಲಿಯೇ ಇದ್ದಾಗ ಅವರೇ ನನ್ನ ಪ್ರೀತಿ ಎನ್ನುವುದು ತಿಳಿಯಲು ಹೆಚ್ಚುಹೊತ್ತು ಬೇಕಾಗಲಿಲ್ಲ ಎಂದು ಸ್ವರಾ ಹೇಳಿದ್ದರು. ನಂತರ ಫೆಬ್ರುವರಿ ತಿಂಗಳಿನಲ್ಲಿ ಇವರ ಮದುವೆ ಮುಸ್ಲಿಂ ಸಂಪ್ರದಾಯದಂತೆ ನಡೆದಿತ್ತು. ಇದೀಗ ಸ್ವರಾ ಮತ್ತು ಫಹಾದ್ ಇಬ್ಬರೂ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ ಮತ್ತು ಸಾಕಷ್ಟು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಸ್ವರಾ ಅವರು ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ಮತ್ತು ಅದರ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸ್ವರಾ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಸ್ವರಾ ಭಾಸ್ಕರ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ಪತಿ ಫಹಾದ್ ಅಹ್ಮದ್ ಅವರೊಂದಿಗೆ ತುಂಬಾ ಸುಂದರವಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರಗಳಲ್ಲಿ, ಸ್ವರಾ ಬಿಳಿ ಮತ್ತು ನೀಲಿ ಬಣ್ಣದ ಫ್ಲೋರಲ್ ಪ್ರಿಂಟ್ ಗೌನ್‌ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಫಹಾದ್ ಆಕಾಶ ನೀಲಿ ಬಣ್ಣದ ಶರ್ಟ್ ಮತ್ತು ನೀಲಿ ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಹಸಿರಿನ ನಡುವೆ ರೊಮ್ಯಾಂಟಿಕ್ ಪೋಸ್ ನೀಡುತ್ತಿದ್ದಾರೆ. ಒಂದು ಚಿತ್ರದಲ್ಲಿ, ಇಬ್ಬರೂ ಛತ್ರಿಯ ಕೆಳಗೆ ರೋಮ್ಯಾಂಟಿಕ್ ಆಗಿ ಪೋಸ್ ನೀಡುತ್ತಿದ್ದರೆ, ಒಂದರಲ್ಲಿ, ಸ್ವರಾ ಫಹಾದ್‌ನ ಮಡಿಲಲ್ಲಿ ಮಲಗಿರುವುದು ಕಂಡುಬರುತ್ತದೆ. 'ಕೆಲವೊಮ್ಮೆ ಜೀವನವು ನಿಮ್ಮನ್ನು ಅನಿರೀಕ್ಷಿತವಾಗಿ ಆಶೀರ್ವದಿಸುತ್ತದೆ ಮತ್ತು ನಿಮ್ಮನ್ನು ಸ್ವಯಂ -ಶೋಧನೆ ಮತ್ತು ಒಗ್ಗಟ್ಟಿನ ಪ್ರಯಾಣಕ್ಕೆ ಕರೆದೊಯ್ಯುತ್ತದೆ' ಎಂದು ಸ್ವರಾ ಶೀರ್ಷಿಕೆ ಕೊಟ್ಟಿದ್ದಾರೆ.

ಫಸ್ಟ್​ ನೈಟ್​ ಬೆಡ್​ರೂಂ ಫೋಟೋ ಶೇರ್​ ಮಾಡಿದ ನಟಿ SWARA BHASKAR

ಸ್ವರಾ ಭಾಸ್ಕರ್​ ಮದುವೆಯಾದ ಹೊಸತರದಲ್ಲಿ ಇವರ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಮುಸ್ಲಿಂ ಯುವಕನ ಜೊತೆ ಮದುವೆಯಾಗಿರುವುದಕ್ಕೆ ಈ ಟೀಕೆಗಳು ಎದ್ದಿದ್ದವು. ಸ್ವರಾ ವಿರುದ್ಧ ಸಾಧ್ವಿ ಪ್ರಾಚೀ ಸಿಂಗ್ ವಾಗ್ದಾಳಿ ನಡೆಸಿದ್ದರು. ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ ಹತ್ಯೆಯಂತೆಯೇ ಸ್ವರಾ ಭಾಸ್ಕರ್ ಕೂಡ ಹತ್ಯೆಯಾಗಬಹುದು ಎಂದು ಹೇಳಿದ್ದರು. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವರಾ ಫ್ರಿಡ್ಜ್ ನೋಡಬೇಕಿತ್ತು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಸ್ವರಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮದುವೆಯಾದ ಆರು ತಿಂಗಳಿಗೆ ತಾವು ಗರ್ಭಿಣಿ ಎನ್ನುವ ಫೋಟೋ ಶೇರ್​ ಮಾಡಿಕೊಂಡಿದ್ದರು. ಇದೀಗ ತುಂಬು ಗರ್ಭಿಣಿಯಾಗಿದ್ದು ಅದರ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಹಲವಾರು ರೀತಿಯ ಕಮೆಂಟ್ಸ್​ಗಳು ಬರುತ್ತಿವೆ. ಹಲವರು ಹಾರ್ಟ್​ ಎಮೋಜಿ ಹಾಕಿದ್ದರೆ, ಇನ್ನು ಕೆಲವರು ನೀನು ಹಿಂದೂ ಧರ್ಮಕ್ಕೆ ಕಳಂಕ ಎಂದು ಈಗಲೂ ಟೀಕಿಸುತ್ತಿದ್ದಾರೆ. ನಿಮ್ಮ ಪ್ರೀತಿ ನಿಜವಾಗಿದ್ದರೆ ಮಗುವಿಗೆ ಹಿಂದೂ ಹೆಸರು ಇಡಿ ಎನ್ನುತ್ತಿದ್ದಾರೆ.

ಈ ಹಿಂದೆ ಸಿನಿಮಾ ಸ್ಟೈಲ್​ನಲ್ಲಿಯೇ ಬೆಡ್​ರೂಂ (Bedroom) ಶೃಂಗಾರ ಮಾಡಿರುವುದರ ವಿಡಿಯೋ ಶೇರ್​ ಮಾಡಿದ್ದ ನಟಿ, ತಮ್ಮ ಫಸ್ಟ್​ ನೈಟ್​ ಎಂದಿದ್ದರು. ಇದನ್ನು ಮಾಡಲು ಅಮ್ಮ ತುಂಬಾ ಕಷ್ಟಪಟ್ಟಿದ್ದಾರೆ. ಇದು ತುಂಬಾ ಸುಂದರವಾಗಿದೆ. ಸಿನಿಮಾ ಮಾದರಿಯಲ್ಲಿ ಮೊದಲ ರಾತ್ರಿಯ ಸೀನ್​ ಇರುವ ರೀತಿಯಲ್ಲಿ ಇದನ್ನು ಶೃಂಗಾರ ಮಾಡಲಾಗಿದೆ ಎಂದು ಸ್ವರಾ ಹೇಳಿಕೊಂಡಿದ್ದರು.ಹೀಗೆ ಮೊದಲ ರಾತ್ರಿಯ ಬೆಡ್​ರೂಂ ಚಿತ್ರವನ್ನು ಶೇರ್​ ಮಾಡಿಕೊಂಡಿರುವುದಕ್ಕೆ ಪರ ವಿರೋಧ ನಿಲುವು ವ್ಯಕ್ತವಾಗಿತ್ತು. ಆಗಲೂ ಹಲವರು ಟ್ರೋಲ್​ ಮಾಡಿದ್ದರು.

ಶ್ರದ್ಧಾಳಂತೆ ಇವಳು ಸಾಯಬಹುದು, ಫಹಾದ್ ಮದ್ವೆಯಾದ ಸ್ವರಾ ವಿರುದ್ಧ ಸಾಧ್ವಿ ವಾಗ್ದಾಳಿ

View post on Instagram