ಶ್ರದ್ಧಾಳಂತೆ ಇವಳು ಸಾಯಬಹುದು, ಫಹಾದ್ ಮದ್ವೆಯಾದ ಸ್ವರಾ ವಿರುದ್ಧ ಸಾಧ್ವಿ ವಾಗ್ದಾಳಿ

ಇತ್ತೀಚೆಗೆ ಸಮಾಜವಾದಿ ಪಕ್ಷ ಮುಸ್ಲಿಂ  ನಾಯಕ ಫಹದ್ ಅಹ್ಮದ್‌ನನ್ನು ಮದ್ವೆಯಾದ ನಟಿ ಸ್ವರಾ ಭಾಸ್ಕರ್ ವಿರುದ್ಧ ಸಾಧ್ವಿ ಪ್ರಾಚೀ ಸಿಂಗ್ ವಾಗ್ದಾಳಿ ನಡೆಸಿದ್ದು, ದೆಹಲಿಯಲ್ಲಿ ನಡೆದ ಮುಂಬೈನ ಶ್ರದ್ಧಾ ವಾಕರ್ ಹತ್ಯೆಯಂತೆಯೇ ಸ್ವರಾ ಭಾಸ್ಕರ್ ಕೂಡ ಹತ್ಯೆಯಾಗಬಹುದು ಎಂದು ಹೇಳಿದ್ದಾರೆ.

She might die like Shraddha, Sadhvi lashes out at Swara bhaskar on her muslim marriage akb

ಮುಂಬೈ: ಇತ್ತೀಚೆಗೆ ಸಮಾಜವಾದಿ ಪಕ್ಷ ಮುಸ್ಲಿಂ  ನಾಯಕ ಫಹದ್ ಅಹ್ಮದ್‌ನನ್ನು ಮದ್ವೆಯಾದ ನಟಿ ಸ್ವರಾ ಭಾಸ್ಕರ್ ವಿರುದ್ಧ ಸಾಧ್ವಿ ಪ್ರಾಚೀ ಸಿಂಗ್ ವಾಗ್ದಾಳಿ ನಡೆಸಿದ್ದು, ದೆಹಲಿಯಲ್ಲಿ ನಡೆದ ಮುಂಬೈನ ಶ್ರದ್ಧಾ ವಾಕರ್ ಹತ್ಯೆಯಂತೆಯೇ ಸ್ವರಾ ಭಾಸ್ಕರ್ ಕೂಡ ಹತ್ಯೆಯಾಗಬಹುದು ಎಂದು ಹೇಳಿದ್ದಾರೆ. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವರಾ ಫ್ರಿಡ್ಜ್ ನೋಡಬೇಕಿತ್ತು ಎಂದು ಸಾಧ್ವಿ ಪ್ರಾಚಿ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ಆರೋಪಿ ಶ್ರದ್ಧಾಳ ಮುಸ್ಲಿ ಬಾಯ್‌ಫ್ರೆಂಡ್ ಅಫ್ತಾಬ್ ಶ್ರದ್ಧಾಳ ದೇಹವನ್ನು  35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಟ್ಟಿದ್ದ ನಂತರ ಸ್ವಲ್ಪ ಸ್ವಲ್ಪವೇ ದೇಹದ ಭಾಗಗಳನ್ನು ಸಮೀಪದ ಕಾಡಿಗೆ ತೆಗೆದುಕೊಂಡು ಹೋಗಿ ಎಸೆದು ಬಂದಿದ್ದ. 

ಸ್ವರಾ ಭಾಸ್ಕರ್ ಯಾವಾಗಲೂ ಹಿಂದೂ ಧರ್ಮದ (Hindu religion) ವಿರುದ್ಧವೇ ಮಾತನಾಡುತ್ತಿದ್ದಳು. ಅವಳು ಹಿಂದೂ ಧರ್ಮದವರಲ್ಲದವರನ್ನು ಮದುವೆಯಾಗುತ್ತಾಳೆ ಎಂಬುದು ನನಗೆ ಖಚಿತವಾಗಿತ್ತು. ಅದರಂತೆ ಈಗ ನಡೆದಿದೆ. ಆಕೆ ಮುಸಲ್ಮಾನನನ್ನು ಮದುವೆಯಾಗಿದ್ದಾಳೆ ಎಂದು ವಿಶ್ವ ಹಿಂದೂ ಪರಿಷತ್ (VHP) ನಾಯಕಿ ಸಾಧ್ವಿ ಪ್ರಾಚಿ ಹೇಳಿದರು. 

ಮದ್ವೆಯಾಗಿ ಏಕಾಏಕಿ ಶಾಕ್​ ಕೊಟ್ಟ ನಟಿ Swara Bhasker- ಯಾರೀ 'ನಿಗೂಢ' ಗಂಡ?

ಫೆಬ್ರವರಿ 16 ರಂದು ಸ್ವರಾ ಭಾಸ್ಕರ್ ಸಮಾಜವಾದಿ ಪಕ್ಷದ ರಾಜಕಾರಣಿ ಫಹಾದ್ ಅಹ್ಮದ್ ಅವರೊಂದಿಗೆ ಮದುವೆ ಮಾಡಿಕೊಂಡಿದ್ದಾರೆ.  ಸ್ವರಾ ಇಸ್ಲಾಂ ಧರ್ಮವನ್ನು ಸ್ವೀಕರಿಸದೇ ಫಹಾದ್ ಅವರನ್ನು ವಿವಾಹವಾಗಿದ್ದರು. ಹೀಗಾಗಿ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರು ಷರಿಯಾ ಕಾನೂನುಗಳ ಅಡಿಯಲ್ಲಿ ಈ ಮದುವೆಯ ಸಿಂಧುತ್ವವನ್ನು ಪ್ರಶ್ನಿಸುವುದರೊಂದಿಗೆ ಈ ವಿಚಾರವೂ ಸಾಮಾಜಿಕ ಮಾಧ್ಯಮದಲ್ಲಿ (Social Media) ಭಾರೀ ಚರ್ಚೆಯನ್ನು ಉಂಟು ಮಾಡಿತ್ತು.  ಸ್ವರಾ ಮತ್ತು ಫಹಾದ್ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ವಿವಾಹವಾಗಿದ್ದು,  ವಿಶೇಷ ವಿವಾಹ ಕಾಯಿದೆಯೂ ಭಾರತೀಯ ಪ್ರಜೆಗಳು ಅವರ ಧಾರ್ಮಿಕ ನಂಬಿಕೆಗಳನ್ನು ಲೆಕ್ಕಿಸದೆ ಅವರಿಗೆ ಮದುವೆಯಾಗಲು ಅವಕಾಶ ಮಾಡಿಕೊಡುತ್ತದೆ. 

ಇತ್ತ ಸ್ವರಾ ಹಾಗೂ ಫಹಾದ್ (Fahad) ಮದ್ವೆ ಬಗ್ಗೆ ಚಿಕಾಗೋ ಮೂಲದ ಇಸ್ಲಾಮಿಕ್ ವಿದ್ವಾಂಸ ಯಾಸಿರ್ ನದೀಮ್ ಅಲ್ ವಾಜಿದಿ (Yasir Nadeem al Wajidi) ಅವರು ಟ್ವಿಟ್ಟರ್‌ನಲ್ಲಿ ಪೋಸ್ಟೊಂದನ್ನು ಮಾಡಿದ್ದು,  ಸ್ವರಾ ಭಾಸ್ಕರ್ (Swara Bhasker)ಮುಸ್ಲಿಂ ಅಲ್ಲ ಮತ್ತು ಅವರ ಪತಿ ಮುಸ್ಲಿಂ ಆಗಿದ್ದರೆ ಈ ಮದುವೆಗೆ ಇಸ್ಲಾಮಿಕ್ ಪರ ಮಾನ್ಯತೆ ಇಲ್ಲ ಎಂದು ಹೇಳಿದ್ದರು. ಅಲ್ಲಾಹನನ್ನು ಅವರು ನಂಬುವವರೆಗೂ ಬಹುದೇವತಾವಾದಿ ಮಹಿಳೆಯರನ್ನು ಮದುವೆಯಾಗಬೇಡಿ ಎಂದು ಹೇಳುತ್ತಾನೆ. ಅವಳು ಮದುವೆಗಾಗಿ ಮಾತ್ರ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ, ಅದನ್ನು ಅಲ್ಲಾ ಸ್ವೀಕರಿಸುವುದಿಲ್ಲ ಎಂದು ಅವರು  ಹೇಳಿದ್ದರು. 

ನಮ್ಮ ಸರ್ಕಾರದ ಧರ್ಮವನ್ನು ನೆನಪಿಸಿದ್ದಕ್ಕೆ ಗಲ್ಫ್ ರಾಷ್ಟ್ರಗಳಿಗೆ ಥ್ಯಾಂಕ್ಸ್ ಎಂದ ಸ್ವರ ಭಾಸ್ಕರ್!

ಸಹೋದರ ಎಂದವನ ಜೊತೆಯೇ ಮದುವೆಯಾದ ನಟಿ ಸ್ವರಾ ಭಾಸ್ಕರ್ ಸಖತ್ ಟ್ರೋಲ್

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚೆಗೆ ರಾಜಕಾರಣಿ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದಿಢೀರ್ ಮದುವೆಯಾಗುವ ಮೂಲಕ ಸ್ವರಾ ಭಾಸ್ಕರ್ ಅಚ್ಚರಿ ಮೂಡಿಸಿದರು. ಫೆಬ್ರವರಿ 17 ಗುರುವಾರ ಮದುವೆ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸ್ವರಾ ಭಾಸ್ಕರ್ ಅಭಿಮಾನಿಗಳಿಗೆ  ಶಾಕ್ ನೀಡಿದರು. ಅಹ್ಮದ್ ಸಮಾಜವಾದಿ ಪಕ್ಷದ ಯುವ ಘಟಕ ಸಮಾಜವಾದಿ ಯುವಜನ ಸಭಾದ ರಾಜ್ಯಾಧ್ಯಕ್ಷರಾಗಿದ್ದಾರೆ. ಅಹ್ಮದ್ ಮತ್ತು ಸ್ವರಾ ಇಬ್ಬರೂ ರ್ಯಾಲಿಯಲ್ಲಿ ಭೇಟಿಯಾಗಿದ್ದರು ಬಳಿಕ ಸ್ನೇಹಿತರಾಗಿ ಇದೀಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. 

ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವರಾ ಪತಿ ಜೊತೆಗಿನ ಫೋಟೋ ಶೇರ್ ಮಾಡುತ್ತಿದ್ದಂತೆ  ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಕಾರಣ ಅವರ ಹಳೆಯ ಟ್ವೀಟ್. ಹೌದು ಈ ಮೊದಲು ಪತಿ ಅಹ್ಮದ್ ಅವರನ್ನು ಸಹೋದರ ಎಂದು ಕರೆದಿದ್ದರು. ಇದೀಗ ಸಹೋದರ ಎಂದವನ ಜೊತೆಯೇ ಮದುವೆಯಾಗಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸ್ವರಾ ಟ್ರೋಲ್ ಆಗುತ್ತಿರುವುದು ಅದೇ ಮೊದಲ್ಲ. ತನ್ನ ಹೇಳಿಕೆ ಹಾಗೂ ರಾಜಕೀಯ  ದೃಷ್ಟಿಕೋನಗಳಿಗಾಗಿ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು. ಇದೀಗ ಮದುವೆ ವಿಚಾರಕ್ಕೂ ಟ್ರೋಲ್ ಆಗಿದ್ದಾರೆ.  

Latest Videos
Follow Us:
Download App:
  • android
  • ios