Asianet Suvarna News Asianet Suvarna News

ರ್ಯಾಂಪ್ ವಾಕ್‌ನಲ್ಲಿ ಮಿಂಚಿದ ಸುಶ್ಮಿತಾಗೆ ಬಾಯ್‌ಫ್ರೆಂಡ್ ಸಾಥ್: ತುಂಬಾ ಲಕ್ಕಿ ಎಂದ ಮಾಜಿ ವಿಶ್ವ ಸುಂದರಿ

ಬಾಲಿವುಡ್ ಸ್ಟಾರ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ರ್ಯಾಂಪ್ ವಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

Sushmita Sen ex boyfriend Rohman Shawl assists her after ramp walk video viral sgk
Author
First Published Mar 12, 2023, 1:38 PM IST

ಬಾಲಿವುಡ್ ಸ್ಟಾರ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮತ್ತೆ ಕೆಲಸಕ್ಕೆ ಮರಳಿದ್ದಾರೆ. ಮ್ಯಾಸಿಕ್ ಆರ್ಟ್ ಅಟ್ಯಾಕ್‌ನಿಂದ ಬದುಕುಳಿದ ನಟಿ ಸುಶ್ಮಿತಾ ಸೇನ್ ಇದೀಗ ನಿಧಾನವಾಗಿ ವರ್ಕೌಟ್, ಯೋಗ ಮಾಡುತ್ತಿದ್ದಾರೆ. ಜೊತೆಗೆ ರ್ಯಾಂಪ್ ವಾಕ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೆ ಸುಶ್ಮಿತಾ ಸೇನ್ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಹೆಜ್ಜೆ ಹಾಕಿದರು. ವಿಶೇಷ ಎಂದರೆ ಸುಶ್ಮಿತಾ ಅವರಿಗೆ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಸಾಥ್ ನೀಡಿದರು. ಸುಶ್ಮಿತಾ ಮತ್ತು ರೋಹ್ಮನ್ ಶಾಲ್ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಇತ್ತು. ಆದರೆ ಇಬ್ಬರೂ ಬ್ರೇಕಪ್ ಮಾಡಿಕೊಳ್ಳುವ ಮೂಲಕ ದೂರ ಆಗಿದ್ದರು. ಇದೀಗ ಮತ್ತೆ ಸ್ನೇಹಿತರಾಗಿದ್ದಾರೆ. 

ಈವೆಂಟ್ ನಲ್ಲಿ ಸುಶ್ಮಿತಾ ಹಳದಿ ಬಣ್ಣದ ಲೆಹಂಗಾ ಧರಿಸಿದ್ದರು. ರ್ಯಾಂಪ್ ವಾಕ್ ಬಳಿಕ ಸುಶ್ಮಿತಾ ಪಾಪರಾಜಿಗಳ ಕ್ಯಾಮರಾಗೆ ಸೇರಿಯಾದರು. ಸುಶ್ಮಿತಾ ಜೊತೆ ಬಾಯ್ ಫ್ರೆಂಡ್  ರೋಹ್ಮನ್ ಶಾಲ್ ಕೂಡ ಇದ್ದರು. ಸುಶ್ಮಿತಾ ಅವರನ್ನು ಹುಷರಾಗಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ. ಖ್ಯಾತ ಡಿಸೈನರ್ ಅನುಶ್ರೀ ರೆಡ್ಡಿ ಅವರಿಗಾಗಿ ರ್ಯಾಂಪ್ ವಾಕ್ ಮಾಡಿದೆ. ಇಷ್ಟು ಪ್ರೀತಿ ತೋರಿದ ಎಲ್ಲಾ ಮಾಧಮ ಸದಸ್ಯರಿಗೆ ಧನ್ಯವಾದಗಳು. ನಾನು ತುಂಬಾ ಲಕ್ಕಿ. ಇದನ್ನು ಯಾವಾಗಲೂ ಹೇಳುತ್ತಿರುತ್ತೇನೆ' ಎಂದು ಹೇಳಿದರು.  

'ನಾನು ನಿಜವಾಗಿಯೂ ತುಂಬಾ ಸಂತೋಷವಾಗಿದ್ದೇನೆ, ಅನುಶ್ರೀಗೆ ಧನ್ಯವಾದಗಳು, ಬಂದು ನನ್ನನ್ನು  ವಾಕ್ ಮಾಡುವಂತೆ ಅವರ ಶೋಸ್ಟಾಪರ್ ಆಗಲು ಧೈರ್ಯ ತೋರಿದ್ದಕ್ಕೆ. ನಾನು ನಿಮಗೆ ಹೇಳುತ್ತೇನೆ...ಮಹಿಳೆಯರು...ನಾವು ಒಬ್ಬರಿಗೊಬ್ಬರು ನಿಂತಾಗ ಮತ್ತು ಕಷ್ಟದಲ್ಲೂ ಅತ್ಯುತ್ತಮವಾದದ್ದನ್ನು ಹೊರತರುವುದು ಸುಂದರವಾಗಿರುತ್ತದೆ' ಎಂದು ಹೇಳಿದರು. ಅಷ್ಟೆಯಲ್ಲದೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಶೇರ್ ಮಾಡಿ ಸಂತಸ ಹೊರಹಾಕಿದ್ದಾರೆ.

ಸುಶ್ಮಿತಾ ಮತ್ತೆ ವರ್ಕೌಟ್ ಪ್ರಾರಂಭಿಸಿದ್ದಾರೆ.  ಹೃದ್ರೋಗ ತಜ್ಞರ ಸಲಹೆಯ ಮೇರೆಗೆ ಮತ್ತೆ ವರ್ಕೌಟ್ ಮಾಡಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿ ಕೆಲವೇ ದಿನಗಳಲ್ಲಿ ಸುಶ್ಮಿತಾ ಮತ್ತೆ ಯೋಗ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದರು. ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿರುವ ಸುಶ್ಮಿತಾ ಸೇನ್, 'ಹೃದ್ರೋಗ ತಜ್ಞರ ಸಲಹೆ ಮೇರೆಗೆ.  ಸ್ಟ್ರೆಚಿಂಗ್ ಪ್ರಾರಂಭವಾಗುತ್ತದೆ. ನಂಥ ಫೀಲಿಂಗ್' ಎಂದು ಬರೆದುಕೊಂಡಿದ್ದರು. 

ಹಾರ್ಟ್ ಸರ್ಜರಿ ಬಳಿಕ ಮತ್ತೆ ವರ್ಕೌಟ್ ಆರಂಭಿಸಿದ ಮಾಜಿ ವಿಶ್ವ ಸುಂದರಿ; ಫೋಟೋ ಹಂಚಿಕೊಂಡ ಸುಶ್ಮಿತಾ ಸೇನ್

ವರ್ಕೌಟ್ ಬಗ್ಗೆ  ಸುಶ್ಮಿತಾ ಸೇನ್ ಮಾತು 

ಇತ್ತೀಚೆಗಷ್ಟೆ ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಮಾತನಾಡಿದ್ದ ನಟಿ ಸುಶ್ಮಿತಾ ಸೇನ್ 'ಪ್ರತಿದಿನ ವ್ಯಾಯಮ ಮಾಡಿದರೂ ಆರೋಗ್ಯ ಹಾಳಾಗುತ್ತೆ, ವ್ಯಾಯಾಮದಿಂದ ಏನು ಪ್ರಯೋಜನವಿಲ್ಲ, ವರ್ಕೌಟ್ ಮಾಡಿದ್ರು ಅವಳಿಗೆ ಹಾಗೆ ಆಗಿದೆ ಅಂದ್ಮೇಲೆ ಯಾಕೆ ಮಾಡಬೇಕು ಎಂದು ಜಿಮ್ ಗೆ ಹೋಗುವುದನ್ನೇ ನಿಲ್ಲಿಸುತ್ತೀರಿ. ಹೀಗೆ ಮಾಡ ಬೇಡಿ. ವ್ಯಾಯಾಮ ತುಂಬಾ ಸಹಾಯ ಮಾಡುತ್ತದೆ' ಎಂದು ಹೇಳಿದರು.

95% ಬ್ಲಾಕೇಜ್ ಆಗಿತ್ತು; ಹೃದಯಾಘಾತದ ಬಳಿಕ ಸುಷ್ಮಿತಾ ಸೇನ್ ಮೊದಲ ವಿಡಿಯೋ ಪ್ರತಿಕ್ರಿಯೆ

'ನನಗೆ ವರ್ಕೌಟ್ ಸಹಾಯ ಮಾಡಿದೆ. ನಾನು ಮ್ಯಾಸಿವ್ ಹಾರ್ಟ್ ಅಟ್ಯಾಕ್ ಇಂದ ಬದುಕುಳಿದೆ. 95 ಪರ್ಸೆಂಟ್ ಬ್ಲಾಕೇಜ್ ಇತ್ತು. ನಾನು ಆಕ್ಟೀವ್ ಲೈಫ್‌ಸ್ಟೈಲ್ ಹೊಂದಿದ್ದರಿಂದ ನಾನು ಬದುಕುಳಿದೆ. ಮತ್ತೊಂದೆ ಕಡೆ ನೋಡಿದ್ರೆ ನಾನು ತುಂಬಾ ಲಕ್ಕಿ. ಇದು ನನ್ನಲ್ಲಿ ಭಯವನ್ನು ಉಂಟುಮಾಡುವುದಿಲ್ಲ, ಬದಲಿಗೆ, ನಾನು ಈಗ ಏನನ್ನಾದರೂ ಎದುರುನೋಡುವ ಭರವಸೆಯ ಭಾವನೆಯನ್ನು ಹೊಂದಿದ್ದೇನೆ' ಎಂದು ಹೇಳಿದ್ದರು.
 

Follow Us:
Download App:
  • android
  • ios