95% ಬ್ಲಾಕೇಜ್ ಆಗಿತ್ತು; ಹೃದಯಾಘಾತದ ಬಳಿಕ ಸುಷ್ಮಿತಾ ಸೇನ್ ಮೊದಲ ವಿಡಿಯೋ ಪ್ರತಿಕ್ರಿಯೆ

ನಟಿ ಸುಶ್ಮಿತಾ ಸೇನ್ ಹಾರ್ಟ್ ಆಟ್ಯಾಕ್ ಬಳಿಕ ಮೊದಲ ಬಾರಿಗೆ ವಿಡಿಯೋ ಪ್ರತಿಕ್ರಿಯೆ ನೀಡಿದ್ದು 95% ಬ್ಲಾಕೇಜ್ ಆಗಿತ್ತು ಎಂದು ಹೇಳಿದ್ದಾರೆ. 

It was massive heart attack, I had 95% blockage says Sushmita Sen sgk

ಬಾಲಿವುಡ್ ಸ್ಟಾರ್, ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಅವರಿಗೆ ಕಳೆದ ಕೆಲವು ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಆ ವಿಚಾರವನ್ನು ಸುಶ್ಮಿತಾ ಸೇತ್ ತಡವಾಗಿ ಬಹಿರಂಗ ಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಫಿಟ್ ಅಂಡ್ ಫೈನ್ ಆಗಿದ್ದ ನಟಿ ಸುಶ್ಮಿತಾ ಸೇತ್ ಅವರಿಗೆ ಹೃದಯಾಘಾತವಾದ ವಿಚಾರ ಅಭಿಮಾನಿಗಳಲ್ಲಿ ಶಾಕ್ ನೀಡಿತ್ತು. ಇದೀಗ ಮೊದಲ ಬಾರಿಗೆ ಸುಶ್ಮಿತಾ ಸೇತ್ ಅವರಿಗೆ ವಿಡಿಯೋ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ತನಗೆ ಮಾಸಿವ್ ಆರ್ಟ್ ಆಟ್ಯಾಕ್ ಆಗಿತ್ತು, 95 % ಬ್ಲಾಕೇಜ್ ಇತ್ತು ಎಂದು ಹೇಳಿದ್ದಾರೆ. ಪ್ರತಿದಿನ ವರ್ಕೌಟ್, ಯೋಗ  ಮಾಡುತ್ತಿದ್ದ ಸುಷ್ಮಿತಾ ಸೇನ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದು ಅನೇಕರಿಗೆ ಶಾಕ್ ನೀಡಿದೆ. 

ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಮಾತನಾಡಿದ ನಟಿ ಸುಷ್ಮಿತಾ ಸೇನ್ 'ಪ್ರತಿದಿನ ವ್ಯಾಯಮ ಮಾಡಿದರೂ ಆರೋಗ್ಯ ಹಾಳಾಗುತ್ತೆ, ವ್ಯಾಯಾಮದಿಂದ ಏನು ಪ್ರಯೋಜನವಿಲ್ಲ, ವರ್ಕೌಟ್ ಮಾಡಿದ್ರು ಅವಳಿಗೆ ಹಾಗೆ ಆಗಿದೆ ಅಂದ್ಮೇಲೆ ಯಾಕೆ ಮಾಡಬೇಕು ಎಂದು ಜಿಮ್ ಗೆ ಹೋಗುವುದನ್ನೇ ನಿಲ್ಲಿಸುತ್ತೀರಿ. ಹೀಗೆ ಮಾಡ ಬೇಡಿ. ವ್ಯಾಯಾಮ ತುಂಬಾ ಸಹಾಯ ಮಾಡುತ್ತದೆ' ಎಂದು ಹೇಳಿದರು.

'ನನಗೆ ವರ್ಕೌಟ್ ಸಹಾಯ ಮಾಡಿದೆ. ನಾನು ಮಾಸಿವ್ ಹಾರ್ಟ್ ಆಟ್ಯಾಕ್ ಇಂದ ಬದುಕುಳಿದೆ. 95 ಪರ್ಸೆಂಟ್ ಬ್ಲಾಕೇಜ್ ಇತ್ತು. ನಾನು ಆಕ್ಟೀವ್ ಲೈಫ್‌ಸ್ಟೈಲ್ ಹೊಂದಿದ್ದರಿಂದ ನಾನು ಬದುಕುಳಿದೆ. ಮತ್ತೊಂದೆ ಕಡೆ ನೋಡಿದ್ರೆ ನಾನು ತುಂಬಾ ಲಕ್ಕಿ. ಇದು ನನ್ನಲ್ಲಿ ಭಯವನ್ನು ಉಂಟುಮಾಡುವುದಿಲ್ಲ, ಬದಲಿಗೆ, ನಾನು ಈಗ ಏನನ್ನಾದರೂ ಎದುರುನೋಡುವ ಭರವಸೆಯ ಭಾವನೆಯನ್ನು ಹೊಂದಿದ್ದೇನೆ' ಎಂದು ಹೇಳಿದರು. 

ಹಾರ್ಟ್ ಅಟ್ಯಾಕ್‌ ಆದ್ರೂ ಆಂಜಿಯೋಪ್ಲಾಸ್ಟಿ ಸರ್ಜರಿಯಿಂದ ಬದುಕುಳಿದ ಸುಶ್ಮಿತಾ ಸೇನ್‌, ಹಾಗಂದ್ರೇನು?

ಸರ್ಜರಿ ಬಳಿಕ ಸುಶ್ಮಿತಾ ಸೇನ್ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಮಾಜಿ ವಿಶ್ವ ಸುಂದರಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಸುಶ್ಮಿತಾ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಕಾಳಜಿ ತೋರಿಸಿದ್ದಾರೆ. ಬೇಗ ಗುಣಮುಕರಾಗಿ, ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂದು ಹೇಳಿದ್ದಾರೆ. ತಾನು ನಿಮ್ಮೊಗೆ ಬಂದು ಮಾತನಾಡುತ್ತಿದ್ದೇನೆ, ಎಲ್ಲವನ್ನೂ ಹೇಳುತ್ತಿದ್ದೇನೆ ನಾನು ಎಷ್ಟು ಲಕ್ಕಿ ಎಂದು ಸುಷ್ಮಿತಾ ಹೇಳಿ ಕೊಂಡಿದ್ದಾರೆ.

ವಿಶ್ವ ಸುಂದರಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ; ತಂದೆಯ ಭಾವುಕ ಸಾಲುಗಳನ್ನು ಬರೆದುಕೊಂಡ ನಟಿ

ಸುಷ್ಮಿತಾ 2015ರ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. 2015ರಲ್ಲಿ ಬೆಂಗಾಳಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಬಳಿಕ ಅನೇಕ ವೆಬ್ ಸೀರಿಸ್ ಗಳಲ್ಲಿ ಮಿಂಚಿದ್ದಾರೆ. ಆರ್ಯ, ತಾಲಿ ಸೀರಿಸ್ ನಲ್ಲಿ ಸುಶ್ಮಿತಾ ಮಿಂಚಿದ್ದಾರೆ. 
 

Latest Videos
Follow Us:
Download App:
  • android
  • ios