Asianet Suvarna News Asianet Suvarna News

'ಮಿಸ್​ ಯೂನಿವರ್ಸ್​'ಗೆ 29ರ ಸಂಭ್ರಮ: ಸುಷ್ಮಿತಾ ಸೇನ್​ ಗೆಲ್ಲಲು ಕಾರಣವಾಗಿತ್ತು ಈ ಉತ್ತರ

ಸುಷ್ಮಿತಾ ಸೇನ್​ ಮಿಸ್​ ಯೂನಿವರ್ಸ್​ ಆಗಿ 29 ವರ್ಷಗಳು ಕಳೆದಿವೆ.  ಈ ಸಂದರ್ಭದಲ್ಲಿ ಅವರು ಹೇಳಿದ್ದೇನು? 
 

Sushmita Sen celebrates 29 years of Miss Universe win actress pens emotional note
Author
First Published May 22, 2023, 11:36 AM IST

1994 ರ ಮೇ 21. ಅಂದರೆ ಇಂದಿಗೆ ಬರೋಬ್ಬರಿ 29 ವರ್ಷಗಳ ಹಿಂದೆ ಇಡೀ ಭಾರತ ಹೆಮ್ಮೆ ಪಡುವ ಘಟನೆಯೊಂದು ನಡೆದಿತ್ತು. ಅದು ಮಿಸ್​ ಯೂನಿವರ್ಸ್​ ಸ್ಪರ್ಧೆಯಲ್ಲಿ ಭಾರತದ ಸುಂದರಿ ಸುಷ್ಮಿತಾ ಸೇನ್ ಮಿಸ್​ ಯೂನಿವರ್ಸ್​ ಕಿರೀಟ ಪಡೆದುಕೊಂಡಿದ್ದರು. ಇದೇ ಕಾರಣಕ್ಕೆ  ಮೇ 21 ನಟಿಯ ಬದುಕಿನಲ್ಲಿ ಬಹು ವಿಶೇಷ ಮಹತ್ವವನ್ನು ಹೊಂದಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ (Instagram) 29 ವರ್ಷಗಳ ಹಿಂದಿನ ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.  ಈ ಚಿತ್ರವು ನಿಖರವಾಗಿ 29 ವರ್ಷ ಹಳೆಯದು, ಇದನ್ನು ಛಾಯಾಗ್ರಾಹಕ  ಪ್ರಬುದ್ಧದಾಸಗುಪ್ತ ಅವರು ಚಿತ್ರೀಕರಿಸಿದ್ದಾರೆ. ಈ ಚಿತ್ರದಲ್ಲಿ ಅವರು 18 ವರ್ಷ ವಯಸ್ಸಿನ ಹುಡುಗಿಯನ್ನು ಸುಂದರವಾಗಿ ಸೆರೆಹಿಡಿದಿದ್ದಾರೆ.  ಇನ್ನು ವಿಶೇಷ ಎಂದರೆ ಪ್ರಬುದ್ಧದಾಸ್​ ಗುಪ್ತಾ  ಅವರು ಅವರ ಛಾಯಾಗ್ರಾಹಕ ವೃತ್ತಿಯಲ್ಲಿ  ಶೂಟ್ ಮಾಡಿದ ಮೊದಲ ವಿಶ್ವ ಸುಂದರಿ ನಾನೇ ಎನ್ನುವುದು. ಆದ್ದರಿಂದ ಈ ಫೋಟೋ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ ಎಂದು ಸುಷ್ಮಿತಾ ಸೇನ್​ ಬರೆದುಕೊಂಡಿದ್ದಾರೆ. 

ಅಂದಹಾಗೆ ಸುಷ್ಮಿತಾ ಸೇನ್​, 1994 ರಲ್ಲಿ ವಿಶ್ವದ 77 ದೇಶಗಳ ಸ್ಪರ್ಧಿಗಳನ್ನು ಬಿಟ್ಟು  ಮಿಸ್​ ಯೂನಿವರ್ಸ್​ (Miss Universal) ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ. ಅದೇ ವರ್ಷ ಐಶ್ವರ್ಯಾ ರೈ ಬಚ್ಚನ್ ಮಿಸ್​ ವರ್ಲ್ಡ್​ ಕಿರೀಟವನ್ನು ಪಡೆದರು. ಈ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಇನ್ನಷ್ಟು ಮಾಹಿತಿ ನೀಡಿರುವ ಸುಷ್ಮಿತಾ,  ನನ್ನ ಮಾತೃಭೂಮಿಯನ್ನು ಪ್ರತಿನಿಧಿಸುವ ಮತ್ತು ಗೆಲ್ಲುವ ಅನುಭೂತಿ ನಿಜಕ್ಕೂ ವರ್ಣಿಸಲು ಸಾಧ್ಯವಾಗದ್ದು. ಅದನ್ನು ನೆನಪಿಸಿಕೊಂಡರೆ  ಇನ್ನೂ ಸಂತೋಷದ ಕಣ್ಣೀರು ಬರುತ್ತದೆ. ನಿನ್ನೆ, ಮೊನ್ನೆ ಎನಿಸುವ ಈ ಘಟನೆ ನಡೆದು  29 ವರ್ಷಗಳೇ ಕಳೆದು ಹೋಗಿವೆ. ನಾನು ಈ ದಿನವನ್ನು ಬಹಳ ಹೆಮ್ಮೆಯಿಂದ ಆಚರಿಸುತ್ತೇನೆ ಮತ್ತು ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ಇತಿಹಾಸವು ಸಾಕ್ಷಿಯಾಗಿದೆ. ಭಾರತವು ಮೊದಲ ಬಾರಿಗೆ 21 ಮೇ 1994 ರಂದು ಮನಿಲಾ  ಫಿಲಿಪ್ಪೀನ್ಸ್​ನಲ್ಲಿ ಮಿಸ್​ ಯೂನಿರ್ಸ್​ ಪ್ರಶಸ್ತಿಯನ್ನು ಗೆದ್ದಿದೆ ಎಂದಿದ್ದಾರೆ.

Taali: ಮಂಗಳಮುಖಿಯಾಗಿ ಸುಷ್ಮಿತಾ ಸೇನ್​: ಚಪ್ಪಾಳೆ ಏಕೆ ಎಂದು ವಿವರಿಸಿದ ನಟಿ

ಎಲ್ಲರಿಗೂ ತಿಳಿದಿರುವಂತೆ ಸೌಂದರ್ಯ ಸ್ಪರ್ಧೆಯಲ್ಲಿ  ಹಲವು ಸುತ್ತುಗಳು ಇರುತ್ತವೆ. ಸೌಂದರ್ಯ ಮಾತ್ರವಲ್ಲದೇ ಸುಂದರಿಯರ ಜಾಣ್ಮೆಯನ್ನೂ ಅಳೆಯಲಾಗುತ್ತದೆ. ಈ ಸುತ್ತುಗಳ  ಪೈಕಿ ಕೊನೆಯ ಸುತ್ತು ಬಹಳ ಮಹತ್ವವನ್ನು ಪಡೆದುಕೊಂಡಿರುತ್ತದೆ. ಒಂದೇ ಒಂದು ಉತ್ತರ ದೊಡ್ಡ ಪಟ್ಟವನ್ನು ಗೆಲ್ಲುವಂತೆ  ಮಾಡುತ್ತದೆ. ಅದೇ ರೀತಿ,   ಮಿಸ್ ಯೂನಿವರ್ಸ್ ಸಮಯದಲ್ಲಿ ಸುಷ್ಮಿತಾ ಸೇನ್ (Sushmitha Sen) ಅವರಿಗೆ ಕೇಳಲಾದ ಕೊನೆಯ ಪ್ರಶ್ನೆ ಹಾಗೂ ಅದಕ್ಕೆ  ಅವರು ಉತ್ತರಿಸಿದ ಉತ್ತರದಿಂದ ಸಂತುಷ್ಟರಾಗಿರುವ ತೀರ್ಪುಗಾರರು ಮಿಸ್​ ಯೂನಿವರ್ಸ್​ ಪಟ್ಟ ಕೊಟ್ಟಿದ್ದಾರೆ.

ಅಷ್ಟಕ್ಕೂ ಆ ಪ್ರಶ್ನೆ ಏನೆಂದರೆ,  ನೀವು ಯಾವುದೇ ಐತಿಹಾಸಿಕ ಘಟನೆಯನ್ನು ಬದಲಾಯಲು ಶಕ್ಯರಾದರೆ ಯಾವ ಘಟನೆಯನ್ನು ಬದಲಿಸುವಿರಿ ಎಂದು. ಅದಕ್ಕೆ ಸುಷ್ಮಿತಾ ಸೇನ್​ ಅವರು  ಇಂದಿರಾ ಗಾಂಧಿಯವರ ಸಾವು ಎಂದು ಹೇಳಿದರು. ಇದು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು. ಮಿಸ್ ಯೂನಿವರ್ಸ್ ಆದ ನಂತರ ಸುಷ್ಮಿತಾ ಚಿತ್ರರಂಗಕ್ಕೆ ಕಾಲಿಟ್ಟರು. 1996ರಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ.  ಅವರ ಮೊದಲ ಚಿತ್ರ ದಸ್ತಕ್, ಇದು ಸೂಪರ್ ಫ್ಲಾಪ್ ಎಂದು ಸಾಬೀತಾಯಿತು. ಆದರೆ, ಅವರ ಬಾಲಿವುಡ್ ವೃತ್ತಿಜೀವನದ ವಿಷಯಕ್ಕೆ ಬಂದರೆ, ಅದು ಕೂಡ ಫ್ಲಾಪ್ ಆಗಿದೆ. ಸ್ವಂತವಾಗಿ ಒಂದೇ ಒಂದು ಹಿಟ್ ಚಿತ್ರವನ್ನು (Hit film) ನಟಿ ಕೊಟ್ಟಿಲ್ಲ. ಆದರೆ ಇತ್ತೀಚೆಗೆ  ಇವರು ಒಂದು ಹೊಸ ವೆಬ್​ ಸೀರಿಸ್​ನಲ್ಲಿ ನಟಿಸಿದರು.  ಇದರಲ್ಲಿ ಅವರು  ಮಂಗಳಮುಖಿ (Transgender) ಪಾತ್ರ ಮಾಡಿದ್ದಾರೆ. ಈ ಸೀರಿಸ್‌ನಲ್ಲಿ ಸುಷ್ಮಿತಾ, ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವ ತೃತೀಯಲಿಂಗಿ ಗೌರಿ ಸಾವಂತ್‌ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಇದು ಸಕತ್​ ಹಿಟ್​ ಆಗಿದೆ.

Wedding Anniversary ದಿನ ಶಾಕಿಂಗ್​ ಹೇಳಿಕೆ ಕೊಟ್ಟ ರಣಬೀರ್​ ಕಪೂರ್​

 

Follow Us:
Download App:
  • android
  • ios