ಸುಶಾಂತ್ ಸಿಂಗ್ ಜೊತೆ ಅಂಕಿತಾರ ಮೊದಲ ಭೇಟಿ ಹೇಗಿತ್ತು ನೋಡಿ!
ಪವಿತ್ರಾ ರಿಷ್ತಾ 2 ಹಿಂದಿ ಧಾರವಾಹಿಯ ಕಾರಣ ದಿವಗಂತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಎಕ್ಸ್ ಗರ್ಲ್‌ಫ್ರೆಂಡ್ ಅಂಕಿತಾ ಲೋಖಂಡೆ ಇತ್ತೀಚಿನ ದಿನಗಳಲ್ಲಿ ಸುದ್ದಿಯಾಗಿದ್ದಾರೆ. ಟಿವಿ ನಟಿ ಅಂಕಿತಾ ಲೋಖಂಡೆ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗಿನ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಸುಶಾಂತ್ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರು ಸುಶಾಂತ್ ಸಿಂಗ್ ಅವರ ಮೊದಲ ಭೇಟಿ ಹೇಗಿತ್ತು ಎಂದು ಹೇಳಿದರು.

ಅಂಕಿತಾ ಮತ್ತು ಸುಶಾಂತ್ ಹಿಂದಿ ಡೈಲಿ ಸಿರಿಯಲ್ ಪವಿತ್ರಾ ರಿಷ್ತಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಶೋನ ಪ್ರೋಮೋ ಚಿತ್ರೀಕರಣಕ್ಕಾಗಿ ಅವರು 2009 ರಲ್ಲಿ ಮೊದಲ ಬಾರಿಗೆ ಭೇಟಿಯಾದರು. ಅಂಕಿತ ಲೋಖಂಡೆ ಸಂದರ್ಶನವೊಂದರಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮೊದಲ ಭೇಟಿ ಹೇಗಾಯಿತು ಎಂದು ಹೇಳಿದ್ದಾರೆ.
ಅಂಕಿತಾ ಲೋಖಂಡೆ ಪ್ರಸ್ತುತ ತನ್ನ ಶೋ ಪವಿತ್ರ ರಿಷ್ತಾ -2 ಅನ್ನು ಶಹೀರ್ ಶೇಖ್ ಜೊತೆ ಪ್ರಚಾರ ಮಾಡುತ್ತಿದ್ದಾರೆ. ಅವರ ಮತ್ತು ಸುಶಾಂತ್ ಮೊದಲ ಭೇಟಿ ಬಹಳ ವಿಚಿತ್ರವಾಗಿತ್ತಂತೆ.
ನಾವು ಪ್ರೋಮೋ ಚಿತ್ರೀಕರಣಕ್ಕೆ ಹೋಗಬೇಕಿತ್ತು ಮತ್ತು ಸುಶಾಂತ್ ನನ್ನನ್ನು ನನ್ನ ಮನೆಯಿಂದ ಕರೆದುಕೊಂಡು ಹೋಗಲು ಕೆಳಗೆ ಕಾಯುತ್ತಿದ್ದರು. ನನ್ನ ತಾಯಿ ಕೂಡ ಇದ್ದರು. ನಾನು ಲೇಟ್ ಆಗಿದ್ದೆ. ನನಗೆ ನೆನಪಿದೆ. ನಾನು ಬೆಳಿಗ್ಗೆ 4 ರಿಂದ ನನ್ನ ಕೂದಲು ಮತ್ತು ಮೇಕಪ್ ಮಾಡಿಸಿಕೊಳ್ಳುತ್ತಿದ್ದೆ.
ಸುಶಾಂತ್ ಬೆಳಿಗ್ಗೆ 5 ಗಂಟೆ ಸುಮಾರಿಗೆ ನನ್ನ ಮನೆಗೆ ಬಂದಿದ್ದರು. ನನ್ನಿಂದ ತಡವಾಗಿದೆ ಮತ್ತು ಸುಶಾಂತ್ ಒಂದು ಗಂಟೆಗೂ ಹೆಚ್ಚು ಕಾಲ ಅಂಕಿತಾಗಾಗಿ ಕಾಯಬೇಕಾಯಿತು. ಆದ್ದರಿಂದ ಅವರು ಕೋಪಗೊಂಡರು ಸಂದರ್ಶನವೊಂದರಲ್ಲಿ ಹೇಳಿದ್ದರು.
ನಾನು ಬೆಳಿಗ್ಗೆ 6 ಗಂಟೆಗೆ ಕೆಳಗೆ ಬಂದೆ. ಅವರು ತುಂಬಾ ಕೋಪಗೊಂಡಿದ್ದರು. ಕೆಳಗೆ ಬಂದ ನಂತರ ನಾನು ನನ್ನ ತಾಯಿಯೊಂದಿಗೆ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ನಿದ್ದೆ ಮಾಡಿದೆ. ಇದರಿಂದ ಸುಶಾಂತ್ ಇನ್ನಷ್ಟು ಕೋಪಗೊಂಡರು.
ತಮ್ಮ ಮೊದಲ ಭೇಟಿಯಿಂದಲೇ, ಸುಶಾಂತ್ ನನಗೆ ಹಿರೋಯಿನ್ ಆಟಿಟ್ಯೂಡ್ ಇದೆ ಎಂದು ಭಾವಿಸಿದರು ಎಂದು ಅಂಕಿತಾ ಹೇಳಿದರು. ತನ್ನ ಕೋಪವನ್ನು ತೋರಿಸಲು, ಸುಶಾಂತ್ ಡ್ರೈವರ್‌ನಿಂದ ಕಾರನ್ನು ತೆಗೆದುಕೊಂಡು ವೇಗವಾಗಿ ಓಡಿಸಿದರು.
ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ನನಗೆ ಅರ್ಥವಾಗಲಿಲ್ಲ. ಆಗ ನನ್ನ ತಾಯಿ ಹೇಳಿದರು, ಅವನು ಕೋಪಗೊಂಡಿದ್ದಾನೆ. ಅದೇ ನನ್ನ ಮೊದಲ ಭೇಟಿ ಎಂದು ಅಂಕಿತಾ ಸುಶಾಂತ್ ಸಿಂಗ್ ರಜಪೂತ್ ಅವರ ಮೊದಲ ಭೇಟಿ ಹೇಗಾಯಿತು ಎಂದು ಹೇಳಿದರು.
ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಂಡೆ ಮೊದಲ ಭೇಟಿಯು ಉತ್ತಮವಾಗಿಲ್ಲದಿದ್ದರೂ, ಉತ್ತಮ ಸಂಬಂಧವನ್ನು ಬೆಳೆಸಿಕೊಂಡರು. ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡಿದ ಅವರು ಲೀವ್ ಇನ್ ರಿಲೆಶನ್‌ಶಿಪ್‌ನಲ್ಲಿದ್ದರು. ಆದರೆ ನಂತರ ಇಬ್ಬರೂ ಬೇರೆಯಾಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.