ಬಾಲಿವುಡ್‌ ಚಿತ್ರರಂಗದ ಹಿರಿಯ ನಟ ಶೇಖರ್ ಸುಮನ್ ಸುಶಾಂತ್ ಸಾವಿನ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸುಶಾಂತ್ ಪ್ರಕರಣ ಮುಚ್ಚಿ ಹಾಕಲು ಮಾಡುತ್ತಿರುವ ಮತ್ತೊಂದು ಪ್ಲಾನಾ ಇದು? ಎಂಬ ಅನುಮಾನ ಶುರುವಾಗಿದೆ.

ನಟ ಸುಶಾಂತ್ ಸಿಂಗ್ ವ್ಯಾಕ್ಸ್ ಪ್ರತಿಮೆ ಹೀಗಿದೆ ನೋಡಿ..!

ಶೇಖರ್ ಟ್ವೀಟ್: 
'ಡ್ರಗಿಗಳು ಸಾಯಲಿ, ಅವರನ್ನು ಕಂಬಿ ಹಿಂದೆ ನಿಲ್ಲಿಸಿ, ಚಿತ್ರರಂಗದಿಂದ ದೂರವಿಡಿ ಅಥವಾ ದೇಶದಿಂದಲೇ ದೂರ ಹಾಕಿ. ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಮಗೆ ಕಾಳಜಿ ಇರುವುದು ಸುಶಾಂತ್ ಆತ್ಮಹತ್ಯೆ ವಿಚಾರಣೆ ಬಗ್ಗೆ ಮಾತ್ರ.  ಆತನನ್ನು ಕೊಂದವರು ಯಾರೆಂದು  ತಿಳಿಯ ಬೇಕು ಅಷ್ಟೆ. ಇದರ ಹಿಂದೆ ಇರುವವರು ಯಾರೆಂದು ಗೊತ್ತಾಗಲೇ ಬೇಕು. ಸಿದ್ಧಾರ್ಥ್ ಪಿಥಾಣಿ, ನೀರಜ್, ಮಿರಾಂದ, ಇಮ್ತಿಯಾಜ್‌ ಕಾತ್ರಿ, ಅಡುಗೆ ಭಟ್ಟ, ಬೀಗ ತೆಗೆದವರು ಯಾರು? ಆ್ಯಂಬುಲೆನ್ಸ್,  ಮಾಸ್ಕ್‌ ಧರಿಸಿದ ಹುಡುಗಿ...ಎಲ್ಲಿ ಹೋಯ್ತು ಆ ದೊಡ್ಡ ಗ್ಯಾಂಗ್?' ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. 

 

ಜೂನ್ 14ರಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ಸಾವಿನ ವಿಚಾರ ಇತ್ತ ಮುಂಬೈ ಪೊಲೀಸರು ಸಂಪೂರ್ಣ ತನಿಖೆ ಮುಗಿಸಲಿಲ್ಲ. ಅತ್ತ ಪಾಟ್ನಾ ಪೊಲೀಸರೂ ಕೈ ಬಿಟ್ಟು, ಸುಪ್ರೀಂ ಕೋರ್ಟ್‌ ಆದೇಶದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ ವಿಚಾರಣೆ ನಡೆಯುವ ಮಧ್ಯದಲ್ಲಿ ಡ್ರಗ್ಸ್‌ ದಂಧೆ ಬೆಳಕಿಗೆ ಬಂದ ಕಾರಣ, ವಿಚಾರಣೆ ಆ ದಿಕ್ಕಿನಲ್ಲಿ ಸಾಗುತ್ತಿದೆ. ಹಾಗಾದರೆ ಸುಶಾಂತ್‌ದ್ದು ಆತ್ಮಹತ್ಯೆಯೋ, ಕೊಲೆಯೂ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.ಈ ಬಗ್ಗೆ ನೆಟ್ಟಿಗರು ಪ್ರಶ್ನಿಸುತ್ತಲೇ ಇದ್ದಾರೆ.