ದಿನಕ್ಕೊಂದು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿರೋ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ ಸಾವಿನ ಪ್ರಕರಣದಲ್ಲಿ ಮಹತ್ವದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಈ ಮೂಲಕ ಪ್ರಕರಣದಲ್ಲಿ ಮಿಸ್ಟರಿ ಮಹಿಳೆ ಎಂಟ್ರಿಯಾಗಿದ್ದು, ಯಾರೆಂಬುದು ಸ್ಪಷ್ಟವಾಗಿಲ್ಲ.

ಸುಶಾಂತ್ ವಾಸವಾಗಿದ್ದ ಕಟ್ಟಡದ ಸಿಸಿಟಿವಿ ದೃಶ್ಯಾವಳಿ ಇಂಟರ್‌ನೆಟ್‌ನಲ್ಲಿ ಲೀಕ್ ಆಗಿದ್ದು, ಸುಶಾಂತ್ ಮೃತದೇಹವನ್ನು ಆಂಬುಲೆನ್ಸ್ ಸಿಬ್ಬಂದಿ ಹಾಗೂ ಪೊಲೀಸರು ಮನೆಯಿಂದ ಹೊರ ತರುವಾಗ ಅಜ್ಞಾತ ಮಹಿಳೆಯೊಬ್ಬರು ಮನೆಯೊಳಗೆ ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಸುಶಾಂತ್‌ ಚಿಕಿತ್ಸೆಗೆ ಅಧ್ಯಾತ್ಮ ವೈದ್ಯನ ಸಂಪರ್ಕಿಸಿದ್ದ ರಿಯಾ ಚಕ್ರವರ್ತಿ

ಸ್ಟ್ರೈಪ್‌ ಟೀಶರ್ಟ್‌ ಧರಿಸಿ ಗ್ಔಸ್ ಹಾಕಿದ್ದ ಮಹಿಳೆ ಮನೆಯೊಳಗೆ ಪ್ರವೇಶಿಸಿದ್ದಾರೆ. ಉಳಿದವರಲ್ಲಿ ದೂರ ನಿಲ್ಲಲು ಪೊಲೀಸರು ಸೂಚಿಸಿದ್ದರೂ ಆಕೆ ಮಾತ್ರ ಕ್ರೈಂ ಸೀನ್ ಒಳಗೆ ಪ್ರವೇಶಿಸಿದ್ದಾರೆ. ನಂತರ ಈಕೆ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದ ಯುವಕನೊಂದಿಗೆ ಮಾತನಾಡಿ ಏನನ್ನೋ ಬದಲಾಯಿಸುವುದು ಕಂಡು ಬಂದಿದೆ. ಸಂಶಯಾಸ್ಪದವಾಗಿ ಕಂಡು ಬಂದ ವ್ಯಕ್ತಿ ಏನ್ನೋ ಕಪ್ಪು ಬ್ಯಾಗ್ ಒಳಗೆ ತುಂಬಿಸುವುದು ಕಂಡು ಬಂದಿದೆ.

ಇಲ್ಲಿ ಕಂಡು ಬಂದವರನ್ನು ಮುಂಬೈ ಪೊಲೀಸರು ಯಾಕೆ ವಿಚಾರಣೆ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ರೀತಿ ಆಗುತ್ತದೆ ಎಂಬುದು ಮುಂಬೈ ಪೊಲೀಸರಿಗೆ ಗೊತ್ತಿತ್ತು. ಆದರೂ ಸಂದರ್ಭವನ್ನು ಗೋಜಲು ಮಾಡಿ ಹಾಕಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸುಶಾಂತ್‌ ಖಾತೆಯಿಂದ 15 ಕೋಟಿ ವರ್ಗ ಸತ್ಯ: ರಿಯಾ ಖಾತೆಗೆ ಹೋಗಿಲ್ಲ!

ಈ ಹಿಂದೆ ಸುಬ್ರಮಣಿಯನ್ ಸ್ವಾಮಿ ಸುಶಾಂತ್ ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರು, ಸಿಬ್ಬಂದಿಯನ್ನು ಸಿಬಿಐ ವಿಚಾರಣೆ ನಡೆಸಬೇಕೆಂದು ಹೇಳಿದ್ದರು. ಸುಶಾಂತ್ ಸಾವು ನಡೆದು 62 ದಿನಗಳಾಗಿದ್ದರೂ ಮುಂಬೈ ಪೊಲೀಸರು ಒಂದೇ ಒಂದು ಎಫ್‌ಐಆರ್ ದಾಖಲಿಸಿಲ್ಲ.

ಹೀಗಾಗಿಯೇ ನೆಟ್ಟಿಗರ ಕೋಪ ನ್ಯಾಯಯುತ ಎನಿಸುತ್ತಿದೆ ಎಂದಿದ್ದಾರೆ. ಮುಂಬೇನ ಅಪಾರ್ಟ್‌ಮೆಂಟ್‌ನಲ್ಲಿ ಜೂನ್ 14ರಂದು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.