ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಅಧ್ಯಾತ್ಮ ವೈದ್ಯರೊಬ್ಬರು ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಅಧ್ಯಾತ್ಮ ವೈದ್ಯರೊಬ್ಬರು ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದಾರೆ.

ಶೇ.90ರಷ್ಟು ಸುಶಾಂತ್‌ಗೆ ಚಿಕಿತ್ಸೆ ನೀಡಿದ ಎನ್ನಲಾದ ಅಧ್ಯಾತ್ಮ ವೈದ್ಯರೊಬ್ಬರು ರಿಯಾ ಸುಶಾಂತ್‌ಗಾಗಿ ತನ್ನನ್ನು ಸಂಪರ್ಕಿಸಿರುವುದಾಗಿ ಹೇಳಿದ್ದಾರೆ. ತನ್ನನ್ನು ಭೇಟಿಯಾಗಿ ಸುಶಾಂತ್ ಖಿನ್ನತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು ಎಂದಿದ್ದಾರೆ.

2 ತಿಂಗಳ ನಂತರ ಕಾಣಿಸಿಕೊಂಡ ಕರಣ್ ಜೋಹಾರ್ ಹಾಕಿದ ಪೋಸ್ಟಿದು!

ಕಳೆದ ನವೆಂಬರ್‌ನಲ್ಲಿ ಸುಶಾಂತ್‌ನನ್ನು ಎರಡು ಬಾರಿ ಭೇಟಿ ಮಾಡಿದ್ದೆ. ಬಾಂದ್ರಾ ಪೊಲೀಸರು ಹೇಳಿಕೆ ದಾಖಲಿಸುವುದಕ್ಕಾಗಿ ನನ್ನನ್ನು ಕರೆದಿದ್ದರು. ಆದರೆ ಅನಾರೋಗ್ಯ ಹಾಗೂ ವಯಸ್ಸಾಗಿರುವುದರಿಂದ ಹೋಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ರಿಯಾ ಚಕ್ರವರ್ತಿ ನಟ ಸುಶಾಂತ್‌ಗೆ ಸಂಬಂಧಿಸಿದ ಎಲ್ಲ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದರು ಎಂದು ಸುಶಾಂತ್ ಮ್ಯಾಜೇಜರ್ ಶ್ರುತಿ ಮೋದಿ ಹಾಗೂ ಅಖಿಲೇಶ್ ತಿಳಿಸಿದ್ದಾರೆ.

'ನೀವಿನ್ನೂ ಮನುಷ್ಯರಾಗಿ ಉಳಿದಿದ್ದೀರಾ': ತನ್ನದೇ ಬ್ರ್ಯಾಂಡ್ ಮಾಸ್ಕ್ ಹಾಕಿದ ಸಲ್ಮಾನ್ ಹಿಗ್ಗಾ ಮುಗ್ಗ ಟ್ರೋಲ್

ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಸುಶಾಂತ್ ತಂದೆ ದಾಖಲಸಿದ ಎಫ್‌ಐಆರ್ ನಿಟ್ಟಿನಲ್ಲಿ ಬಿಹಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಈಗಾಗಲೇ ಸಿಬಿಐ ತನಿಖೆಗೆ ಸಮ್ಮತಿ ಸೂಚಿಸಿದ್ದು, ರಿಯಾ ಚಕ್ರವರ್ತಿ ಪ್ರಕರಣ ಮುಂಬೈ ಪೊಲೀಸರಿಗೆ ಹಸ್ತಾಂತರಿಸಬೇಕೆಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.