ರಿಯಾ ಚಕ್ರವರ್ತಿಯೂ ಡ್ರಗ್ಸ್ ಬಳಸುತ್ತಿದ್ದಳು. ನಟಿ ಡ್ರಗ್ಸ್ ಖರೀದಿಸುವುದರ ಜೊತೆ ಮಾರಾಟವನ್ನೂ ಮಾಡುತ್ತಿದ್ದಳು ಎಂದು ರಿಯಾಳ ವಾಟ್ಸಾಪ್ ಚಾಟ್ ಅನಲೈಸ್ ಮಾಡಿದ ತಂಡ ತನ್ನ ವರದಿಯಲ್ಲಿ ತಿಳಿಸಿದೆ.

ರಿಯಾ ಚಕ್ರವರ್ತಿಯ ಮನೆಗೆ ಎನ್‌ಸಿಬಿ ಅಧಿಕಾರಿಗಳು ಶುಕ್ರವಾರ ರೈಡ್ ಮಾಡಿದ್ದಾರೆ. ರೈಡ್‌ನ ನಂತರ ಎನ್‌ಸಿಬಿ ರಿಯಾಳ ಸಹೋದರ ಶೋವಿಕ್ ಚಕ್ರವರ್ತಿ ಹಾಗೂ ಸುಶಾಂತ್ ಮನೆಯ ಮ್ಯಾನೆಜರ್ ಸ್ಯಾಮುವೆಲ್ ಮಿರಂಡನನ್ನು ಎನ್‌ಸಿಬಿ 9ಗಂಟೆ ವಿಚಾರಣೆ ನಡೆಸಿದೆ. ನಂತರ ಶುಕ್ರವಾರ ಸಂಜೆ ಅವರನ್ನು ಬಂಧಿಸಲಾಗಿದೆ.

ಸುಶಾಂತ್‌ಗಾಗಿ ಡ್ರಗ್ಸ್ ಖರೀದಿಸ್ತಿದ್ದೆ ಎಂದ ಮ್ಯಾನೇಜರ್

ವಾಟ್ಸಾಪ್ ಚಾಟ್ ನೋಡಿದಾಗ ನಟಿ ಇತರರೊಂದಿಗೆ ಸೇರಿ ಪಿತೂರಿ ಮಾಡಿರುವುದು ಬಯಲಾಗಿದೆ. ಖರೀದಿ, ಸಂಗ್ರಹ, ಮಾರಾಟ, ಬಳಕೆ, ಸಾಗಾಟವನ್ನು ಮಾಡಿದ ಸಂಬಂಧ ದೂರು ದಾಖಲಿಸಲಾಗಿದೆ.

ರಿಯಾಳನ್ನು ಭಾನುವಾರ ವಿಚಾರಣೆ ನಡೆಸಲಿದ್ದು, ನಂತರ ಆಕೆಯನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶೋವಿಕ್ ಹಾಗೂ ಸ್ಯಾಮುವೆಲ್‌ನನ್ನು ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದೆ. ಶೋವಿಕ್ ಹಾಗೂ ಸ್ಯಾಮುವೆಲ್‌ನ ಡ್ರಗ್ಸ್ ಟೆಸ್ಟ್ ಇನ್ನೂ ಮಾಡಿಲ್ಲ.

ಟಿವಿ ಶೋನಲ್ಲಿ ಡ್ಯಾನ್ಸ್ ಮಾಡದಂತೆ ಪತ್ನಿಯ ತಡೆದ ಎಆರ್ ರಹಮಾನ್..!

ರಿಯಾಳ ಪ್ರತಿನಿಧಿಯಾಗಿ ಡ್ರಗ್ಸ್ ಖರೀದಿಸುತ್ತಿದ್ದೆ ಎಂದು ಶೋವಿಕ್ ಒಪ್ಪಿಕೊಂಡಿದ್ದಾನೆ. ಶೋವಿಕ್ ಸುಶಾಂತ್ ಮಾತ್ರವಲ್ಲದೆ ಬಾಲಿವುಡ್‌ನ ಇತರ ಕೆಲವು ಸ್ಟಾರ್ಸ್‌ಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂದು ಎನ್‌ಸಿಬಿ ತಿಳಿಸಿದೆ.