ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿ ಡ್ರಗ್ಸ್ ವಿಚಾರವಾಗಿ ಈಗಾಗಲೇ ಎನ್‌ಸಿಬಿ ಕೇಸು ದಾಖಲಿಸಿದೆ. ಎನ್‌ಸಿಬಿ ವಿಚಾರಣೆಯಲ್ಲಿ ಸ್ಯಾಮುವೆಲ್ ತಾನು ಸುಶಾಂತ್‌ಗಾಗಿ ಡ್ರಗ್ಸ್ ಖರೀದಿಸಿದ್ದನ್ನು ಒಪ್ಪಿಕೊಂಡಿದ್ದಾನೆ.

ಎನ್‌ಸಿಬಿ ಅಧಿಕಾರಿಗಳು ಶುಕ್ರವಾರ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಚಕ್ರವರ್ತಿ ಹಾಗೂ ಸ್ಯಾಮುವೆಲ್‌ನನ್ನು ಬಂಧಿಸಿದ್ದಾರೆ. ನಟನ ಸಾವಿಗೆ ಸಂಬಂಧಿಸಿ ಡ್ರಗ್ಸ್ ಜಾಲದ ವಿಚಾರವಾಗಿ ತನಿಖೆ ನಡೆಸುತ್ತಿರುವ ಎನ್‌ಸಿಬಿ ಇಬ್ಬರನ್ನು ಬಂಧಿಸಿದೆ.

ನಟನಿಗಾಗಿ ಡ್ರಗ್ಸ್ ಖರೀದಿಸುತ್ತಿದ್ದೆ

20(ಬಿ) ಕೆನ್ನಾಬೀಸ್ ಉತ್ಪಾದನೆ, ಸಂಸ್ಕರಣೆ, ಸಂಗ್ರಹ, ಮಾರಾಟ, ಖರೀದಿ ಹಾಗೂ ಸಾಗಾಟ, 28(ಅಪರಾಧ ಮಾಡುವ ಪ್ರಯತ್ನಕ್ಕೆ ಶಿಕ್ಷೆ) 29 (
ಅಪರಾಧ ಮತ್ತು ಕ್ರಿಮಿನಲ್ ಪಿತೂರಿ ಮಾಡಿದ್ದಕ್ಕೆ ಶಿಕ್ಷೆ), 27(ಎ) ಅಕ್ರಮ ಸಾಗಾಟಕ್ಕೆ ಹಣಕಾಸು ನೆರವು ಅಪರಾಧಿಗಳಿಗೆ ಆಶ್ರಯ ನೀಡುವುದರ ಅಡಿಯಲ್ಲಿ ಕೇಸು ದಾಖಲಾಗಿದೆ.

ಬಾಲಿವುಡ್‌ ನಟಿ ರಿಯಾಗೆ ಬಂಧನ ಭೀತಿ!

ಎನ್‌ಸಿಬಿ ಶೋವಿಕ್ ಚಕ್ರವರ್ತಿ ಹಾಗೂ ಸ್ಯಾಮವೆಲ್ ಮನೆಯಲ್ಲಿ ರೈಡ್ ನಡೆಸಿತ್ತು. ಡ್ರಗ್ಸ್ ಪೆಡ್ಲರ್ ಝಾಯಿದ್ ವಿಲಾತ್ರನನ್ನು ಎನ್‌ಸಿಬಿ ವಶಕ್ಕೆ ಪಡೆದ ಬೆನ್ನಲ್ಲೇ ಬೆಳಗ್ಗೆ 6.30ಕ್ಕೆ ರೈಡ್ ನಡೆಸಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯಿದೆ 1985ರ ಪ್ರಕಾರ ರೈಡ್ ನಡೆಸಲಾಗಿದೆ.