ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರದ್ದು ಬತ್ತರ ಉತ್ಸಾಹ. ಸದಾ ಚಟುವಟಿಕೆಯಿಂದ ಇರುವ ಅವರು, 83ನೇ ವಯಸ್ಸಿನಲ್ಲೂ ನಿರಂತರ ಕೆಲ್ಸ ಮಾಡ್ತಿದ್ದಾರೆ. ಇದ್ರ ಬಗ್ಗೆ ಅಮಿತಾಬ್ ಬಚ್ಚನ್ ತಮ್ಮ ಫ್ಯಾನ್ಸ್ ಗೆ ಅಪ್ ಡೇಟ್ ನೀಡಿದ್ದಾರೆ.

ಅಮಿತಾಬ್ ಬಚ್ಚನ್ ವಯಸ್ಸು ಈಗ 83 ವರ್ಷ. ಈ ವಯಸ್ಸಿನಲ್ಲಿ ಅನೇಕರು ಹಾಸಿಗೆ ಹಿಡಿದ್ರೆ ಮತ್ತೆ ಕೆಲವರು ಮನೆಯಿಂದ ಹೊರಗೆ ಬರಲು ಕಷ್ಟಪಡ್ತಾರೆ. ಆದ್ರೆ ಅಮಿತಾಬ್ ಬಚ್ಚನ್ ಈಗ್ಲೂ ಕೆಲ್ಸ ಮುಂದುವರೆಸಿದ್ದು, ಯುವಕರಿಗೆ ಸೆಡ್ಡು ಹೊಡೆಯುವಂತೆ ಕೆಲ್ಸ ಮಾಡ್ತಿದ್ದಾರೆ.

24 ಗಂಟೆ ಕೆಲ್ಸ 

ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ , ಕೌನ್ ಬನೇಗಾ ಕರೋಡ್ ಪತಿಯ ಹೊಸ ಸೀಸನ್ಗೆ ಸಿದ್ಧರಾಗಿದ್ದಾರೆ. ಕೆಬಿಸಿಯ ಹೊಸ ಸೀಸನ್ ಪ್ರೋಮೋ ಇತ್ತೀಚಿಗೆ ಬಿಡುಗಡೆಯಾಗಿದೆ. ಕ್ವಿಜ್ ರಿಯಾಲಿಟಿ ಶೋ "ಕೌನ್ ಬನೇಗಾ ಕರೋಡ್ಪತಿ" ಯ ಸೀಸನ್ಗಾಗಿ ಅಮಿತಾಬ್ ಬಚ್ಚನ್ 24 ಗಂಟೆಗಳ ಕಾಲ ನಿರಂತರ ಕೆಲಸ ಮಾಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.

ಬಿಗ್ ಬಿ ಹೇಳಿದ್ದೇನು? 

ತಮ್ಮ ನಿಯಮಿತ ಬ್ಲಾಗ್ನಲ್ಲಿ, ಮೊದಲ ದಿನ ಬೆಳಿಗ್ಗೆ 7 ಗಂಟೆಯಿಂದ ಎರಡನೇ ದಿನ ಬೆಳಿಗ್ಗೆ 7 ಗಂಟೆಯವರೆಗೆ ನಿರಂತರವಾಗಿ ಕೆಲಸ ಮಾಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಕೆಲ್ಸ ಎಷ್ಟು ಮುಖ್ಯವಾದುದೆಂದರೆ ಅದನ್ನು ಮುಂದೂಡಲು ಸಾಧ್ಯವಿರಲಿಲ್ಲ ಎಂದಿದ್ದಾರೆ. ಆಹ್... ಕೊನೆಗೂ ಸಮಯ ಸಿಕ್ಕಿತು... ಇಂದು ಬೆಳಿಗ್ಗೆ 7 ಗಂಟೆಗೆ ಕೆಲಸ ಮುಗಿಸಿತು... ನಿನ್ನೆ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿತ್ತು. ಆದರೆ ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಬಹಳ ಮುಖ್ಯವಾಗಿತ್ತು... ಹಾಗಾಗಿ ನಾನು ಅದನ್ನು ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಕೆಲಸ ಮುಗಿಸಿದ್ಮೇಲೆ ಅವರು ನಿರಾಳರಾಗಿದ್ದಾರೆ. ತಮ್ಮ ದೈನಂದಿನ ಬ್ಲಾಗ್ ಮತ್ತು ಅಭಿಮಾನಿಗಳೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಅಂತ ಬರೆದುಕೊಂಡಿದ್ದಾರೆ. ಈಗ ನಾನು ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ತಿಂದು ಮಲಗ್ತೇನೆ. ನಾಳೆ, ಆಗಸ್ಟ್ 6 ರಂದು, ನಾನು ಬೆಳಿಗ್ಗೆ ಬೇಗನೆ ಕೆಲಸಕ್ಕೆ ಹೋಗಬೇಕು ಅಂತ ತಮ್ಮ ದಿನಚರಿ ಅಪ್ಡೇಟ್ ಮಾಡಿದ್ದಾರೆ.

ಕೆಲ್ಸ ಕಳೆದುಕೊಳ್ಳುವ ಭಯ ! 

ಅಷ್ಟೇ ಅಲ್ಲ ಬಿಗ್ ಬಿ ಅಮಿತಾಬ್ ತಮಾಷೆಯಾಗಿ ಕೆಲ್ಸ ಕಳೆದುಕೊಳ್ಳುವ ಭಯ ಹಂಚಿಕೊಂಡಿದ್ದಾರೆ. ಒಂದ್ವೇಳೆ ನಾನು ಸಮಯಕ್ಕೆ ಸರಿಯಾಗಿ ಕೆಲ್ಸ ಮುಗಿಸದೆ ಹೋಗಿದ್ರೆ ನನ್ನ ಸ್ಥಾನವನ್ನು ಬೇರೆಯವರು ತೆಗೆದುಕೊಳ್ತಿದ್ದರು ಅಂತ ಬಿಗ್ ಬಿ ತಮಾಷೆ ಮಾಡಿದ್ದಾರೆ.

ಕೌನ್ ಬನೇಗಾ ಕರೋಡ್ಪತಿ ಕೌನ್ ಬನೇಗಾ ಕರೋಡ್ಪತಿಯ 18 ನೇ ಸೀಸನ್ ಇದು. ಈ ಶೋ ಆಗಸ್ಟ್ 10 ರ ಸೋಮವಾರ ರಾತ್ರಿ 9 ಗಂಟೆಗೆ ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ಮತ್ತು ಸೋನಿ ಲಿವ್ನಲ್ಲಿ ಪ್ರಸಾರವಾಗಲಿದೆ.