Asianet Suvarna News Asianet Suvarna News

ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ಕಂಡು ಬೆಚ್ಚಿಬಿದ್ದ ಜನರು, ಕ್ಯಾಮರಾ ನೋಡಿದ ನಟ ಮಾಡಿದ್ದೇನು?

ಸದ್ಯ ರಜನಿಕಾಂತ್ ತಮ್ಮ '170' ಪ್ರಾಜೆಕ್ಟ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಜನಿ ಜತೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ಘಟಾನುಘಟಿ ನಟರುಗಳು ನಟಿಸುತ್ತಿದ್ದಾರೆ. 170 ಚಿತ್ರದ ಶೂಟಿಂಗ್ ಸದ್ಯಕ್ಕೆ ಮುಂಬೈನಲ್ಲಿ ನಡೆಯುತ್ತಿದೆ.

Superstar Rajinikanth walk on mumbai airport photo goes viral srb
Author
First Published Oct 29, 2023, 6:01 PM IST

ಮುಂಬೈ ಏರ್‌ಪೋರ್ಟ್‌ನಲ್ಲಿ ಭಾನುವಾರ ಬೆಳಿಗ್ಗೆ ನಟ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಅವರ ಸಿಂಪ್ಲಿಸಿಟಿಗೆ ಅಲ್ಲಿದ್ದ ಹಲವರು ಬೆಕ್ಕಸ ಬೆರಗಾಗಿದ್ದಾರೆ. ಭಾರತವನ್ನೂ ಮೀರಿಯೂ ಪ್ರಖ್ಯಾತಿ ಪಡೆದಿರುವ ನಟ ರಜನಿಕಾಂತ್ ಮುಂಬೈ ಏರ್‌ಪೋರ್ಟ್‌ನಲ್ಲಿ ಕಪ್ಪು ಟೀ-ಶರ್ಟ್‌, ಪ್ಯಾಂಟ್ ಹಾಕಿಕೊಂಡು, ಕನ್ನಡಕವನ್ನು ಧರಿಸಿ, ಹೆಗಲಿಗೊಂದು ಚೀಲ ಹಾಕಿಕೊಂಡು ಸಾಮಾನ್ಯರಲ್ಲಿ ಸಾಮಾನ್ಯ ಎಂಬಂತೆ ನಡೆದುಕೊಂಡು ಹೋಗುತ್ತಿದ್ದರು. 

ರಜನಿಕಾಂತ್‌ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ನೋಡಿದ ಜನರು ಅವರ ಫೋಟೋ ಕ್ಲಿಕ್ಕಿಸಿದ್ದಾರೆ. ಮೀಡಿಯಾಗಳ ಕ್ಯಾಮೆರಾ ಕಣ್ಣಿಗೆ ಕೂಡ ಬಿದ್ದ ರಜನಿಕಾಂತ್ ತಮ್ಮತ್ತ ನೋಡಿದ ಮೀಡಿಯಾ ಮಂದಿ ಕಡೆ ಸ್ಮೈಲ್ ಬೀರಿ ಮುಂದೆ ನಡೆದಿದ್ದಾರೆ. ಈ ವೇಳೆ ಹಲವರು ಸೂಪರ್ ಸ್ಟಾರ್ ರಜನಿಕಾಂತ್ ಫೋಟೋ ತೆಗೆದಿದ್ದಾರೆ. ಅವರ ಮುಗುಳ್ನಗು ಉಕ್ಕಿಸುತ್ತಿದ್ದ ಮುಖ ನೋಡಿ ಹಲವರು 'ಅಷ್ಟು ದೊಡ್ಡ ನಟರಾದರೂ ಸ್ವಲ್ಪವೂ ಗರ್ವವಿಲ್ಲ' ಎಂದು ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ. 

ಬಿಗ್ ಬಾಸ್ ಮನೆಯಲ್ಲೊಬ್ಬರು ಕರ್ನಾಟಕ ಕ್ರಶ್, ಕಿಚ್ಚ ಸುದೀಪ್ ಸಂಗೀತಾಗೆ ಮಾಡಿದ್ರು ಅಡ್ವೈಸ್!

ಸದ್ಯ ರಜನಿಕಾಂತ್ ತಮ್ಮ '170' ಪ್ರಾಜೆಕ್ಟ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಜನಿ ಜತೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ಘಟಾನುಘಟಿ ನಟರುಗಳು ನಟಿಸುತ್ತಿದ್ದಾರೆ. 170 ಚಿತ್ರದ ಶೂಟಿಂಗ್ ಸದ್ಯಕ್ಕೆ ಮುಂಬೈನಲ್ಲಿ ನಡೆಯುತ್ತಿದ್ದು, ಅದರಲ್ಲಿ ನಟ ರಜನಿಕಾಂತ್ ತೊಡಗಿಸಿಕೊಂಡಿದ್ದರು. ಅಮಿತಾಬ್ ಬಚ್ಚನ್ ಹಾಗೂ ರಜನಿಕಾಂತ್ ಇಬ್ಬರೂ ಬರೋಬ್ಬರಿ 37 ವರ್ಷಗಳ ಬಳಿಕ ಈ ಚಿತ್ರದಲ್ಲಿ ಒಟ್ಟಿಗೇ ನಟಿಸಲಿದ್ದಾರೆ. 

ವಿಜಯ್ ಜೋಡಿಯಾಗಿದ್ದ ರಶ್ಮಿಕಾಗೆ ಗೇಟ್‌ ಪಾಸ್, ಸಾಕ್ಷಿ ವೈದ್ಯ ಹೆಸರು ಫೈನಲ್?

ಅಂದಹಾಗೆ, ನಟ ರಜನಿಕಾಂತ್ ಸರಳತೆಗೆ ಹೆಸರುವಾಸಿ. ಅವರು ಯಾವುದೇ ಕಾರ್ಯಕ್ರಮಕ್ಕೆ ಹೋಗುವಾಗಲೂ ಸಹ ತುಂಬಾ ಸಿಂಪಲ್ ಆಗಿಯೇ ಡ್ರೆಸ್ ಮಾಡಿಕೊಂಡು ಹೋಗುತ್ತಾರೆ. ಅವರನ್ನು ನೋಡಿ ಅನೇಕರು ಈ ಬಗ್ಗೆ ಅಚ್ಚರಿಗೊಂಡಿದ್ದರು. ಈಗಲೂ ಅಷ್ಟೇ, ನಟ ರಜನಿಕಾಂತ್ ಅವರನ್ನು ಏರ್‌ಪೋರ್ಟಿನಲ್ಲಿ ನೋಡಿದ ಅನೇಕರು ಅವರ ಸರಳತೆ ನೋಡಿ ತಮ್ಮ ಮೂಗಿನ ಮೇಲೆ ಬೆರಳು ಇಟ್ಟುಕೊಂಡಿದ್ದಾರೆ. ಜತೆಗೆ ಸಿಕ್ಕಸಿಕ್ಕವರಿಗೆ ಈ ವಿಷಯ ಹೇಳಿ ಅವರೂ ತಲೆದೂಗುವಂತೆ ಮಾಡುತ್ತಿದ್ದಾರೆ.

Follow Us:
Download App:
  • android
  • ios