Asianet Suvarna News Asianet Suvarna News

ಬಿಗ್ ಬಾಸ್ ಮನೆಯಲ್ಲೊಬ್ಬರು ಕರ್ನಾಟಕ ಕ್ರಶ್, ಕಿಚ್ಚ ಸುದೀಪ್ ಸಂಗೀತಾಗೆ ಮಾಡಿದ್ರು ಅಡ್ವೈಸ್!

ಕಾರ್ತಿಕ್-ಸಂಗೀತಾ ಲವ್ ಬಿಗ್ ಬಾಸ್ ಮನೆಗಷ್ಟೇ ಸೀಮಿತವೋ ಅಥವಾ ಹೊರಬಂದ ಮೇಲೂ ಕೂಡ ಕಂಟಿನ್ಯೂ ಆಗುತ್ತಾ ಎಂಬುದು ಅವರಿಬ್ಬರಿಗೇ ಗೊತ್ತು. ಆದರೆ, ಬಿಗ್ ಬಾಸ್ ವೀಕ್ಷಕರು ಮಾತ್ರ ಅವರಿಬ್ಬರೂ ಅಲ್ಲಿ ಮಾತ್ರ ಅಲ್ಲ, ಹೊರಗಡೆ ಬಂದಮೇಲೂ ಲವರ್ಸ್ ಆಗಿರುತ್ತಾರೆ ಎಂದೇ ಮಾತನಾಡಿಕೊಳ್ಳುತ್ತಿರುವುದು ಕನ್ಫರ್ಮ್. 

Kiccha Sudeep advices Sangeetha Sringeri in bigg boss kannada season 10 srb
Author
First Published Oct 29, 2023, 3:43 PM IST

ಬಿಗ್ ಬಾಸ್ ಕನ್ನಡದ ಮೂರನೇ ವಾರದ ವೀಕೆಂಡ್‌, ಕಿಚ್ಚನ ಪಂಚಾಯಿತಿ ತುಂಬಾ ಸ್ಪೆಷಲ್ ಸಂಚಿಕೆ ಎಂಬಂತಿತ್ತು. ಕಾರಣ, ಬಿಗ್ ಬಾಸ್ ವೀಕ್ಷಕರು ಮನೆಯೊಳಗೆ ಇರುವ ಸ್ಪರ್ಧಿಗಳಿಗೆ ಅವರಿಗೆ ಹೊಂದುವಂತಹ ಗಿಫ್ಟ್ ಹಾಗೂ ಲೆಟರ್ ಕೊಟ್ಟರು. ಹಲವರು ಹಲವು ತರದ ಗಿಫ್ಟ್ ಪಡೆದರು. ಆದರೆ, ಸ್ಪರ್ಧಿಗಳಲ್ಲೊಬ್ಬರಾದ ಸಂಗೀತ ಶೃಂಗೇರಿಗೆ 'ಕ್ರಶ್ಡ್‌ ಹಾರ್ಟ್‌' ಪೇಪರ್ ಸಿಂಬಲ್ ಕಳಿಸಲಾಗಿತ್ತು. ಇದನ್ನು ನೋಡಿ ಸ್ವತಃ ಸಂಗೀತಾ ಶಾಕ್ ಆದರಾದರೂ ಜತೆಗೆ ಸಖತ್ ಖುಷಿ ಕೂಡ ಅನುಭವಿಸಿದರು. 

ಸಂಗೀತಾ ಬಿಗ್ ಬಾಸ್‌ ಮನೆಯಲ್ಲಿ ಕಾರ್ತಿಕ್ ಮಹೇಶ್‌ಗೆ ಬೆಸ್ಟ್ ಫ್ರಂಡ್‌ ಎಂಬುದು ಬಿಗ್ ವೀಕ್ಷಕರೆಲ್ಲರಿಗೂ ಗೊತ್ತು. ಮೊದಲ ವಾರದಲ್ಲೇ ಕಾರ್ತಿಕ್-ಸಂಗೀತಾ ಸ್ನೇಹಿತರಾಗಿ ಬಳಿಕ ಲವರ್ ಆಗಿದ್ದಾರೆ. ಅವರಿಬ್ಬರನ್ನು ಬಿಗ್ ಬಾಸ್ ಈ 10ನೆಯ ಸಂಚಿಕೆ ಬೆಸ್‌ಟ ಜೋಡಿ ಎಂದೇ ಎಲ್ಲರೂ ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗೂ ಅಷ್ಟೇ, ಸಂಗೀತಾ-ಕಾರ್ತಿಕ್ ಯಾವಾಗಲೂ ಹೆಚ್ಚುಕಡಿಮೆ ಅಂಟಿಕೊಂಡೇ ಇರುತ್ತಾರೆ. ಕಾರ್ತಿಕ್ ಮತ್ತು ಸಂಗೀತಾ ಅಲ್ಲಿಂದ ಹೊರಬಂದ ಮೇಲೂ ಲವ್ ಮುಂದುವರಿಸಿ ಚಂದನ್ ಶೆಟ್ಟಿ-ನಿವೇದಿತಾ ರೀತಿಯಲ್ಲೇ ಖಂಡಿತ ಮದುವೆಯಾಗುತ್ತಾರೆ ಎಂದೇ ಸುದ್ದಿಯಾಗುತ್ತಿದೆ.

ಕಾರ್ತಿಕ್-ಸಂಗೀತಾ ಲವ್ ಬಿಗ್ ಬಾಸ್ ಮನೆಗಷ್ಟೇ ಸೀಮಿತವೋ ಅಥವಾ ಹೊರಬಂದ ಮೇಲೂ ಕೂಡ ಕಂಟಿನ್ಯೂ ಆಗುತ್ತಾ ಎಂಬುದು ಅವರಿಬ್ಬರಿಗೇ ಗೊತ್ತು. ಆದರೆ, ಬಿಗ್ ಬಾಸ್ ವೀಕ್ಷಕರು ಮಾತ್ರ ಅವರಿಬ್ಬರೂ ಅಲ್ಲಿ ಮಾತ್ರ ಅಲ್ಲ, ಹೊರಗಡೆ ಬಂದಮೇಲೂ ಲವರ್ಸ್ ಆಗಿರುತ್ತಾರೆ ಎಂದೇ ಮಾತನಾಡಿಕೊಳ್ಳುತ್ತಿರುವುದು ಕನ್ಫರ್ಮ್. ಆದರೆ, ಸುದೀಪ್ ಈ ಬಗ್ಗೆ ಸಂಗೀತಾಗೆ ಅಡ್ವೈಸ್ ಮಾಡಿದ್ದಾರೆ. 'ನೀನು ನೀನಾಗಿರಲು ಪ್ರಯತ್ನಿಸು ಸಂಗೀತಾ' ಎಂದು ಕಿಚ್ಚ ಅಡ್ವೈಸ್ ಮಾಡಿದ್ದಾರೆ. 

ಬಿಗ್ ಬಾಸ್ ಮನೆಯಾಯ್ತು ಸೈಲೆಂಟ್ ಝೋನ್, ಕಿಚ್ಚನ ಪಂಚಾಯಿತಿಯಲ್ಲಿ ಯಾಕೆ ಆತಂಕದ ಕಾರ್ಮೋಡ?

ಆದರೆ, ಸುದೀಪ್ ಮಾತಿನ ಅರ್ಥವೇನು ಎಂಬುದು ಅವರವರ ಊಹೆಗೆ ಬಿಟ್ಟಿದ್ದು. ಏಕಂದರೆ, ಸುದೀಪ್ ಸಂಗೀತಾಗೆ ಕಾರ್ತಿಕ್ ಲವ್ ಮಾಡಬೇಡ ಎಂದೇನೂ ಹೇಳಿಲ್ಲ. ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಏನೇನೋ ನಡೆಯುತ್ತಿದೆ. ಇಂದಿನ ಸಂಚಿಕೆಯಲ್ಲಿ ಹಲವು ಆಸಕ್ತಿಕರ ಸಂಗತಿಗಳು ರಿವೀಲ್ ಆಗಬಹುದು. ಹಾಗೇ ಒಬ್ಬರು ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರಬರುವುದಂತೂ ಗ್ಯಾರಂಟಿ.

ತುಕಾಲಿ ಸಂತು ಮೀಟರ್ ಆಫ್ ಓಕೆ, ಡ್ರೋನ್ ಪ್ರತಾಪ್ ವಿಷಯಕ್ಕೆ ಮೈಕ್ ಆಫ್ ಆಗಿದ್ದೇಕೆ?

ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ಏನೇನೆಲ್ಲ ನಡೆಯುತ್ತಿದೆ ಎಂಬುದೆಲ್ಲವನ್ನೂ ತಿಳಿಯಲು 'JioCinema'ದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.

Follow Us:
Download App:
  • android
  • ios