ನಟ ಅಕ್ಷಯ್ ಖನ್ನಾ ಧುರಂಧರ್ ಮೂಲಕ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದಾರೆ. ಇಷ್ಟು ದಿನ ಬಾಲಿವುಡ್ ನಿಂದ ದೂರವಿದ್ದ ನಟನ ಬಗ್ಗೆ ಈಗ ಇಂಟರೆಸ್ಟಿಂಗ್ ವಿಷ್ಯಗಳು ಹೊರ ಬರ್ತಿವೆ. ಅಕ್ಷಯ್ ಖನ್ನಾ ಯಾಕೆ ಮದುವೆ ಆಗಿಲ್ಲ, ಕರೀಷ್ಮಾ ಜೊತೆ ಇದ್ದ ನಂಟೇನು ಎನ್ನುವ ಚರ್ಚೆ ವೇಗ ಪಡೆದಿದೆ.

 ಧುರಂಧರ್ ಸಿನಿಮಾ ಮೂಲಕ ಮತ್ತೆ ಚರ್ಚೆಗೆ ಬಂದವರು ಅಕ್ಷಯ್ ಖನ್ನಾ. ಧುರಂಧರ್ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಎಂಟ್ರಿ ಸಾಂಗ್, ಆಕ್ಟಿಂಗ್, ಲುಕ್ ಫ್ಯಾನ್ಸ್ ಗೆ ಇಷ್ಟವಾಗಿದೆ. ಅಕ್ಷಯ್ ಖನ್ನಾಗೆ ಸಂಬಂಧಿಸಿದ ವಿಡಿಯೋ, ವಿಷ್ಯಗಳನ್ನು ಫ್ಯಾನ್ಸ್ ಮತ್ತೆ ವೈರಲ್ ಮಾಡ್ತಿದ್ದಾರೆ. ಅಕ್ಷಯ್ ಖನ್ನಾಗೆ ಈಗ 50 ವರ್ಷ. ಈಗ್ಲೂ ಸಿಂಗಲ್ ಆಗಿರುವ ಅವರು ಅದಕ್ಕೆ ಕಾರಣ ಏನು ಎಂಬುದನ್ನು ಹೇಳಿದ್ದಾರೆ.

50 ಆದ್ರೂ ಮದುವೆ ಆಗಿಲ್ಲ ಅಕ್ಷಯ್ ಖನ್ನಾ

ಧುರಂಧರ್ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಪತ್ನಿಯಾಗಿ ಸೌಮ್ಯ ಟಂಡನ್ ಆಕ್ಟಿಂಗ್ ಮಾಡಿದ್ದಾರೆ. ಎಷ್ಟೋ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಪತಿ ಪಾತ್ರ ನಿಭಾಯಿಸಿದ್ರೂ ನಿಜ ಜೀವನದಲ್ಲಿ ಸಿಂಗಲ್. ಧುರಂಧರ್ ಚಿತ್ರದ ರೆಹಮಾನ್ ಡಕಾಯಿತ ಅಕ್ಷಯ್ ಖನ್ನಾ ಮದುವೆಯಾಗದಿರಲು ಅನೇಕ ಕಾರಣಗಳಿವೆ. ಅಕ್ಷಯ್ ಖನ್ನಾ, 90ರ ದಶಕದಲ್ಲಿ ಮದುವೆಯ ನಿರ್ಧಾರಕ್ಕೆ ಬಂದಿದ್ದರು. ಮಹಿಳೆಯೊಬ್ಬರಿಗೆ ಹತ್ತಿರವಾಗಿದ್ದರು. ಆದ್ರೆ ಕೊನೆ ಹಂತದಲ್ಲಿ ಮದುವೆ ಮುರಿದು ಬಿದ್ದಿತ್ತು.

ಅಂಗವೈಕಲ್ಯ ಮೆಟ್ಟಿ ನಿಂತು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದ ನಟ-ನಟಿಯರು

ಕರೀಷ್ಮಾ ಕೈಗೆ ಮುತ್ತಿಟ್ಟ ನಟ

ಅಕ್ಷಯ್ ಖನ್ನಾ ಹಾಗೂ ಕರೀಷ್ಮಾ ಕಪೂರ್ ಮದುವೆ ಆಗ್ತಾರೆ ಎನ್ನುವ ಸುದ್ದಿ ಕೂಡ ಹರಡಿತ್ತು. ರಣಧೀರ್ ಕಪೂರ್ ಮತ್ತು ವಿನೋದ್ ಖನ್ನಾ ತುಂಬಾ ಒಳ್ಳೆಯ ಸ್ನೇಹಿತರು. ಇಬ್ಬರೂ ತಮ್ಮ ಸ್ನೇಹವನ್ನು ಸಂಬಂಧವಾಗಿ ಬದಲಿಸುವ ಪ್ರಯತ್ನ ಮಾಡಿದ್ದರು. ರಣಧೀರ್ ಕಪೂರ್ ತಮ್ಮ ಮಗಳು ಕರೀಷ್ಮಾ ಜೊತೆ ಅಕ್ಷಯ್ ಮದುವೆಗೆ ಏರ್ಪಾಡು ಮಾಡಿದ್ರು. ಆದ್ರೆ ಇವರಿಬ್ಬರ ಸಂಬಂಧ ಮುಂದುವರೆಯಲಿಲ್ಲ. ಅಕ್ಷಯ್ ಖನ್ನಾ, ಕರೀಷ್ಮಾ ಕಪೂರ್ ಮದುವೆಗೆ ಹೋಗಿದ್ದಲ್ದೆ ಅವರ ಕೈಗೆ ಮುತ್ತಿಟ್ಟಿದ್ದರು. ಈ ವಿಡಿಯೋ ಈಗ ಮತ್ತೆ ವೈರಲ್ ಆಗ್ತಿದೆ. ಆದ್ರೆ ಮದುವೆ ಬಗ್ಗೆ ಅಕ್ಷಯ್ ಖನ್ನಾ ಆಗ್ಲಿ ಕರೀಷ್ಮಾ ಆಗ್ಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ತಾಲ್ ಮತ್ತು ಆ ಅಬ್ ಲೌಟ್ ಚಲೇ ಸಿನಿಮಾ ನಂತ್ರ ಅಕ್ಷಯ್ ಹಾಗೂ ಐಶ್ವರ್ಯ ಮಧ್ಯೆ ಪ್ರೀತಿ ಚಿಗುರಿದೆ ಎನ್ನುವ ಮಾತು ಕೇಳಿ ಬಂದಿತ್ತು. ಸಂದರ್ಶನವೊಂದರಲ್ಲಿ ಐಶ್ವರ್ಯ ಅವರನ್ನು ನೋಡ್ತಿದ್ದರೆ ಕಣ್ಣನ್ನು ಬೇರೆ ಕಡೆ ಹೊರಳಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದ್ದರು. ಇದಲ್ದೆ ಇನ್ನೂ ಇಬ್ಬರು ನಟಿಯರ ಜೊತೆ ಅಕ್ಷಯ್ ಖನ್ನಾ ಹೆಸರು ಥಳುಕು ಹಾಕಿಕೊಂಡಿತ್ತು.

ಆ್ಯಂಕರ್ ಸುಮಾ-ರಾಜೀವ್ ವಿಚ್ಛೇದನ: ತಂದೆ-ತಾಯಿ ಡಿವೋರ್ಸ್ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಮಗ ರೋಶನ್

ಒಂಟಿಯಾಗಿರಲು ಇದು ಕಾರಣ

ಸಂದರ್ಶನವೊಂದರಲ್ಲಿ ಅಕ್ಷಯ್ ಖನ್ನಾ, ತಾವು ಒಂಟಿಯಾಗಿರಲು ಕಾರಣ ಏನು ಎಂಬುದನ್ನು ಹೇಳಿದ್ದರು. ತಮ್ಮ ಜೀವನವನ್ನು ಸಂಪೂರ್ಣವಾಗಿ ಬದುಕಲು ಅಕ್ಷಯ್ ಖನ್ನಾ ಇಷ್ಟಪಡುತ್ತಾರೆ. ಅವರಿಗೆ ಅವರೇ ಸಂಗಾತಿ. ಅವರು ಎಂದಿಗೂ ಒಂಟಿಯಾಗಿಲ್ಲ. ತನ್ನೊಳಗೆ ನಾನು ತುಂಬಾ ಸಂತೋಷವಾಗಿದ್ದೇನೆ. ತನ್ನ ಜೀವನದಲ್ಲಿ ಯಾರೂ ಹಸ್ತಕ್ಷೇಪ ಮಾಡುವುದನ್ನು ನಾನು ಬಯಸುವುದಿಲ್ಲ ಎಂದಿದ್ದರು. ನಾನು ಮದುವೆಗೆ ಎಂದಿಗೂ ಸಿದ್ಧವಿಲ್ಲ ಎಂದು ಅಕ್ಷಯ್ ಖನ್ನಾ ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಸಿಟಿಯಿಂದ ಸಂಪೂರ್ಣ ದೂರ ಇರುವ ಅಕ್ಷಯ್ ಖನ್ನಾ ತಮ್ಮ ಖಾಸಗಿ ಬದುಕನ್ನು ಎಂಜಾಯ್ ಮಾಡ್ತಿದ್ದಾರೆ. ಅವರಿಗೆ ಮದುವೆ ಮೇಲೆ ನಂಬಿಕೆ ಇಲ್ಲ. ಪ್ರತಿಯೊಬ್ಬರು ಮದುವೆ, ಕುಟುಂಬವನ್ನು ಭಿನ್ನವಾಗಿ ನೋಡ್ತಾರೆ. ನನ್ನ ಪ್ರಕಾರ ಒಂಟಿಯಾಗಿರುವುದು ಶಾಂತಿಯನ್ನು ನೀಡುತ್ತದೆ. ಮದುವೆ ಕೇವಲ ಬದ್ಧತೆಯಲ್ಲ, ಇದು ಜೀವನಶೈಲಿಯನ್ನು ಬದಲಾಯಿಸುವ ಅನುಭವ ಎಂದು ಅಕ್ಷಯ್ ಖನ್ನಾ ನಂಬಿದ್ದಾರೆ.

ತುಂಬಾ ವರ್ಷಗಳ ಕಾಲ ಬಾಲಿವುಡ್ ನಿಂದ ದೂರವಿದ್ದ ಅಕ್ಷಯ್ ಖನ್ನಾ ಈಗ ಬಾಂಬ್ ನಂತೆ ಸಿಡಿದಿದ್ದಾರೆ. ಧುರಂಧರ್ ಚಿತ್ರದ ನಂತ್ರ ಎಲ್ಲ ಕಡೆ ಅಕ್ಷಯ್ ಖನ್ನಾ ಸುದ್ದಿಯಾಗ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್, ಸಂಜಯ್ ದತ್, ರಣವೀರ್ ಸಿಂಗ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಕಾಣಿಸಿಕೊಂಡಿದ್ದಾರೆ.

View post on Instagram