Sunny Leone : ಸನ್ನಿ ಲಿಯೋನ್ ತುಟಿಗೆ ಗಾಯ: ಬೆಡ್ರೂಮ್ನಿಂದ ವಿಡಿಯೋ ಮಾಡಿದ ನಟಿ
ತುಟಿಗೆ ಗಾಯ ಮಾಡಿಕೊಂಡು ಬೆಡ್ರೂಮ್ನಿಂದಲೇ ವಿಡಿಯೋ ಮಾಡಿ ನಟಿ ಸನ್ನಿ ಲಿಯೋನ್ ಹೇಳಿದ್ದೇನು?
ಬಾಲಿವುಡ್ ತಾರೆ ಸನ್ನಿ ಲಿಯೋನ್ (Sunny leone) ತನ್ನ ಅದ್ಭುತ ಮೈಮಾಟದಿಂದಲೇ ಪ್ರಸಿದ್ಧರಾದವರು. ಸಾಮಾಜಿಕ ಜಾಲತಾಣದಲ್ಲಿ ಸದಾ ಒಂದಿಲ್ಲೊಂದು ವಿಡಿಯೋ, ಫೋಟೋ ಶೇರ್ ಮಾಡಿಕೊಳ್ಳುತ್ತಲೇ ಇತ್ತೀಚಿನ ದಿನಗಳಲ್ಲಿ ಸಕತ್ ಫೇಮಸ್ ಆಗುತ್ತಿದ್ದಾರೆ. ಇವರು ಶೇರ್ ಮಾಡಿಕೊಳ್ಳುವ ವಿಡಿಯೋಗಳಲ್ಲಿ ಹಲವು ತಮಾಷೆಯ ವಿಡಿಯೋಗಳೇ ಇರುತ್ತವೆ. ಆದರೆ ಇದೀಗ ಅವರು ಶೇರ್ ಮಾಡಿಕೊಂಡಿರುವ ವಿಡಿಯೋ ಮಾತ್ರ ಭಯಂಕರವಾಗಿದೆ. ಮುಂಬೈನಲ್ಲಿಯೇ (Mumbai) ಮನೆ ಖರೀದಿಸಿರುವ ಸನ್ನಿ, ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ಅಲ್ಲಿಯೇ ನೆಲೆಸಿದ್ದು, ಈಗ ಮನೆಯ ಬೆಡ್ರೂಮ್ನಿಂದ ವಿಡಿಯೋ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸೌಂಡ್ ಮಾಡುತ್ತಿದೆ.
ಸನ್ನಿ ಲಿಯೋನ್ ಬೆಡ್ರೂಮ್ನಿಂದ (Bedroom) ಶೇರ್ ಮಾಡಿಕೊಂಡಿರುವುವುದು ಅವರ ತುಟಿಯ ಬಗ್ಗೆ. ನಟಿಯ ತುಟಿಗೆ ಗಾಯವಾಗಿದ್ದು, ಆ ಬಗ್ಗೆ ಅವರು ವಿಡಿಯೋ ಮಾಡಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಸಕತ್ ವೈರಲ್ ಆಗಿದ್ದು, ಹಲವರು ಹಲವು ಬಗೆಯ ಕಮೆಂಟ್ ಮಾಡುತ್ತಿದ್ದಾರೆ. ಸನ್ನಿ ಲಿಯೋನ್ ಹಾಗೂ ಆಕೆಯ ತುಟಿಯ (lips) ಗಾಯ ಎಂದಾಕ್ಷಣ ಹಲವರ ಗಮನ ಬೇರೆ ಬೇರೆ ಕಡೆ ಹೋಗಬಹುದು. ಹಾಗೆಂದು ಯಾರೂ ತಪ್ಪು ತಿಳಿದುಕೊಳ್ಳುವುದು ಬೇಡ. ಅಷ್ಟಕ್ಕೂ ಅವಳ ತುಟಿಗೆ ಗಾಯ ಆಗಿರುವುದಕ್ಕೆ ವಿಚಿತ್ರ ಕಾರಣವೂ ಇದೆ.
'ಮೀ ಟೂ' ನಟಿ ತನುಶ್ರೀ ನುಡಿದ ಬಾಲಿವುಡ್ನ ಭಯಾನಕ ಭವಿಷ್ಯ!
ಅಷ್ಟಕ್ಕೂ ಸನ್ನಿ ಲಿಯೋನ್ಗೆ (Sunny Leone) ತುಟಿಗೆ ಗಾಯವಾಗಲು ಕಾರಣ ಬೇರೆ ಏನೂ ಅಲ್ಲ, ಬದಲಿಗೆ ಮೊಬೈಲ್! ಆಗಿದ್ದೇನೆಂದರೆ, ಈಕೆ ಮೊಬೈಲ್ ನೋಡುತ್ತಿದ್ದಾಗ ಅದು ಜಾರಿ ಮುಖದ ಮೇಲೆ ಬಿತ್ತಂತೆ. ತುಟಿಯ ಮೇಲೆ ಬಿದ್ದುದರಿಂದ ಬಲವಾಗಿ ಹೊಡೆತ ಬಿದ್ದಿದ್ದು, ಗಾಯವಾಗಿ ರಕ್ತಬಂದಿದೆಯಂತೆ. ಇದನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ರಕ್ತ ಬಂದರೂ, ತಮ್ಮ ಪತಿ ತುಟಿಯ ಬಗ್ಗೆ ಯಾಕೋ ಕೇರೇ ಮಾಡುತ್ತಿಲ್ಲ ಎಂದು ಸನ್ನಿ ಹುಸಿಗೋಪ ತೋರಿಸಿದ್ದಾರೆ. ತಾವು ವಿಡಿಯೋ ಮಾಡಿ ನೋವು ಅನುಭವಿಸುತ್ತಿದ್ದರೂ ಪತಿ ಡ್ಯಾನಿಯಲ್ (Danniel) ಯಾವುದೇ ಚಿಂತೆಯಿಲ್ಲದೇ ನಿಶ್ಚಿಂತೆಯಿಂದ ಮಲಗಿರುವ ಬಗ್ಗೆ ವಿಡಿಯೋದಲ್ಲಿ ಸನ್ನಿ ತೋರಿಸಿದ್ದಾರೆ.
ಇದನ್ನು ನೋಡಿ ನೆಟ್ಟಿಗರು ನಟಿಗೆ ಬುದ್ಧಿಮಾತು ಹೇಳಲು ಶುರು ಮಾಡಿದ್ದಾರೆ. ಒಮ್ಮೆ ತುಟಿಯ ಮೇಲೆ ಮೊಬೈಲ್ ಬಿದ್ದರೂ, ಈಗ ಪುನಃ ಮುಖದ ಮೇಲೆಯೇ ಇಟ್ಟುಕೊಂಡು ವಿಡಿಯೋ ಮಾಡುತ್ತಿರುವಿರಲ್ಲ, ಏಕೆ ಬುದ್ಧಿ ಬರಲಿಲ್ಲ ಎಂದು ಕೇಳಿದ್ದಾರೆ. ಇನ್ನು ಹಲವರು ತರ್ಲೆ ಕಮೆಂಟಿಗರು, 'ನಿಮ್ಮ ತುಟಿ ಗಾಯವಾಗಲು ಇಷ್ಟೇ ಕಾರಣನಾ? ನಾವು ಏನೋ ಅಂದುಕೊಂಡು ಬಿಟ್ಟಿದ್ದೆವು' ಎಂದಿದ್ದಾರೆ. ನೀಲಿ ತಾರೆಯೆಂದೇ ಕೆಲ ವರ್ಷಗಳ ಹಿಂದಿನವರೆಗೂ ಪರಿಚಿತರಾಗಿದ್ದ ಸನ್ನಿ, ಅದೆಲ್ಲವನ್ನೂ ಹಿಂದಕ್ಕೆ ಸರಿಸಿ ಈಗ ಪತಿ ಮತ್ತು ಮಕ್ಕಳೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾರೆ. ಇವರ ಹಿನ್ನೆಲೆ ಹೇಳುವುದಾದರೆ, ಅಮೆರಿಕದಲ್ಲಿ ಸನ್ನಿ ನೆಲೆಸಿದ್ದರು. ಅವರ ನಿಜವಾದ ಹೆಸರು ಕರೆಂಜಿತ್ ಕೌರ್ ವೋಹ್ರಾ. ಇವರನ್ನು ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದ್ದು ಹಿಂದಿಯ ಬಿಗ್ ಬಾಸ್. 2011ರಲ್ಲಿ ಬಿಗ್ ಬಾಸ್ (Bigg Boss) 5ನೇ ಸೀಸನ್ ನಲ್ಲಿ ಭಾಗವಹಿಸಿದ್ದರು. ನಂತರ ಪೂಜಾ ಭಟ್ ತಮ್ಮ 'ಜಿಸ್ಮ್ 2' (Jism-2) ಚಿತ್ರದಲ್ಲಿ ನಟಿಸಿಲು ಕೇಳಿಕೊಂಡರು. ಅಲ್ಲಿಂದ ಸನ್ನಿ ಲಿಯೋನ್ ಬಾಲಿವುಡ್ಗೆ ಎಂಟ್ರಿ ಕೊಟ್ಟರು.
ಏಕ್ ಪಹೇಲಿ ಲೀಲಾ, ಕುಚ್ ಕುಚ್ ಲೋಚಾ ಹೈ, ರಯೀಸ್, ಕರೆಂಜಿತ್ ಕೌರ್ ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ಮತ್ತು ರಾಗಿಣಿ ಎಂಎಂಎಸ್ ರಿಟರ್ನ್ಸ್ ಸೇರಿ ಹಲವು ಸಿನಿಮಾಗಳು ಮತ್ತು ಜಾಹೀರಾತುಗಳಲ್ಲಿ (Advertise) ಕಾಣಿಸಿಕೊಂಡಿದ್ದಾರೆ.
ರಾಖಿ ಸಾವಂತ್ ಮೈಸೂರಿನ ಸೊಸೆಯೇ! ಅಂತೂ ಮದ್ವೆ ಗಲಾಟೆಗೆ ಬಿತ್ತು ಬ್ರೇಕ್...