'ಮೀ ಟೂ' ನಟಿ ತನುಶ್ರೀ ನುಡಿದ ಬಾಲಿವುಡ್​ನ ಭಯಾನಕ ಭವಿಷ್ಯ!

ಹಿಂದೊಮ್ಮೆ ಮೀ ಟೂ ಚಳವಳಿಯಿಂದ ಖ್ಯಾತಿ ಪಡೆದಿದ್ದ ನಟಿ ತನುಶ್ರೀ ದತ್ತಾ ಬಾಲಿವುಡ್​ನ ಭಯಾನಕ ಭವಿಷ್ಯ ನುಡಿದಿದ್ದಾರೆ. ಅದೇನು?
 

Bollywood actress Tanushree Dutta had Predicted said many bollywood actors will go bankrupt

ಬಾಲಿವುಡ್ ನಟಿ ತನುಶ್ರೀ ದತ್ತಾ ಎಂದಾಕ್ಷಣ ಕಣ್ಣೆದುರಿಗೆ ಬರುವುದು ಮುದ್ದುಮೊಗದ ಚೆಲುವೆ. ಈಕೆ ಬಹಳ ಪ್ರಸಿದ್ದಿಗೆ ಬಂದದ್ದು, 2018ರಲ್ಲಿ ಚಿತ್ರರಂಗದಲ್ಲಿ ಮೀ ಟೂ ಚಳವಳಿ ಜೋರಾಗಿ ಸದ್ದು ಮಾಡಿದ ಸಂದರ್ಭದಲ್ಲಿ. ಚಿತ್ರರಂಗ ಸೇರಿದಂತೆ ಹಲವು ಕ್ಷೇತ್ರಗಳ ಹೆಣ್ಣುಮಕ್ಕಳು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಲು ಮುಂದೆ ಬಂದಾಗ ನಟಿ ತನುಶ್ರೀ ದತ್ತಾ (Tanushree Dutta)  ಕೂಡ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತು ದನಿ ಎತ್ತಿದ್ದರು.  2008ರಲ್ಲಿ 'ಹಾರ್ನ್ ಓಕೆ ಪ್ಲೀಸ್​' ಸಿನಿಮಾದ ಚಿತ್ರೀಕರಣದ ಸೆಟ್​ನಲ್ಲಿ ನಾನಾ ಪಾಟೇಕರ್ (Nana Patekar)​ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದರು ಎಂದು ತನುಶ್ರೀ ಆರೋಪಿಸಿದ್ದರು. ಯಾವಾಗ ಲೈಂಗಿಕ ದೌರ್ಜನ್ಯದ (Sexual Harassment) ಬಗ್ಗೆ ಈಕೆ ಮಾತನಾಡಿದ್ದರೋ ಆಗಿನಿಂದಲೂ ತಾವು ಪ್ರತಿದಿನ ಹೋರಾಟ ನಡೆಸುವುದೇ ಆಗಿದೆ. ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ತನುಶ್ರೀ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು. ಮೀ ಟೂ MeeToo ಚಳವಳಿಯ ನಾಯಕಿಯೂ ಆಗಿದ್ದ ತನುಶ್ರೀ ಅದಾಗಲೇ ಚಿತ್ರರಂಗದಿಂದ ಕಣ್ಮರೆಯಾದರು.

ತಮ್ಮ ಮೇಲೆ ಪ್ರಾಣ ಬೆದರಿಕೆ (Life Treat) ಇದೆ ಎಂದು ತನುಶ್ರೀ ಆರೋಪಿಸುತ್ತಿರುವಾಗಲೇ ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಈಕೆ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿತ್ತು.  ಉಜ್ಜಯಿನಿಯಲ್ಲಿದ್ದಾಗ ತಮ್ಮ  ಕಾರಿನ ಬ್ರೇಕ್‌ಗಳನ್ನು ಹಲವು ಬಾರಿ ಟ್ಯಾಂಪರ್ ಮಾಡಲಾಗಿತ್ತು. ಇದರಿಂದ  ಅನೇಕ ಅಪಘಾತಗಳನ್ನು ಎದುರಿಸಿರುವುದಾಗಿ ಹೇಳಿದ್ದ ತನುಶ್ರೀ, ಕೊನೆಗೊಮ್ಮೆ ಭಯಾನಕ ಅಪಘಾತಕ್ಕೆ ಒಳಗಾಗಿದ್ದರು.  ಮೈ ಮೂಳೆಗಳು ಪುಡಿಯಾಗಿದ್ದರಿಂದ  ಎರಡು ತಿಂಗಳ ಕಾಲ ಸಂಪೂರ್ಣವಾಗಿ ವಿಶ್ರಾಂತಿ ಪಡೆದಿದ್ದರು.  ಈ ಅಪಘಾತದಲ್ಲಿ ಸಾಕಷ್ಟು ರಕ್ತ ಸೋರಿದ್ದರಿಂದ ಇದರಿಂದ ಗುಣಮುಖರಾಗಲು ಬಹಳಷ್ಟು ಸಮಯ ಹಿಡಿದಿತ್ತು. ಇದಾದ ಮೇಲೆ ಚಿತ್ರರಂಗದಿಂದ ಇವರು ಮರೆಯಾಗುತ್ತಲೇ ಸಾಗಿದರು.

ಸಲಿಂಗಕಾಮ: ಸದ್ಗುರುಗೆ ಉರ್ಫಿ ಜಾವೇದ್ ಹೇಳಿದ್ದೇನು, ಕೇಳಿದ್ದೇನು?

ತನುಶ್ರೀ ತಮ್ಮ ವೃತ್ತಿಜೀವನದಲ್ಲಿ ಮತ್ತೆ ಮುಂದುವರಿಯಬೇಕೆಂಬ ಇಂಗಿತವನ್ನು ಮಾಧ್ಯಮಗಳ ಎದುರು ಅನೇಕ ಬಾರಿ ವ್ಯಕ್ತಪಡಿಸಿದ್ದರು. ಆದರೆ ನಾನಾ ಪಾಟೇಕರ್‌ ವಿರುದ್ಧ ಮಾತನಾಡಿದ ಸಂದರ್ಭದಿಂದ ಯಾವುದೇ ಅವಕಾಶಗಳು ಈಕೆಗೆ ದೊರೆತಿಲ್ಲ.  ಸಿನಿಮಾ ಉದ್ಯಮದಲ್ಲಿ ಕೆಲಸ ಪಡೆಯಲು ಸಾಕಷ್ಟು ಹೆಣಗಾಡುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು.

ಇದೀಗ ಮತ್ತೆ ತನುಶ್ರೀ ದತ್ತಾ ಮುನ್ನೆಲೆಗೆ ಬಂದಿದ್ದಾರೆ. ಅದೇನೆಂದರೆ ಬಾಲಿವುಡ್​ನ (Bollywood) ಬಗ್ಗೆ ತನುಶ್ರೀ ಭಯಾನಕ ಭವಿಷ್ಯ (Prediction) ನುಡಿದಿದ್ದಾರೆ. ಕಳೆದ ನವೆಂಬರ್​ ತಿಂಗಳಿನಲ್ಲಿ ಈಕೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದ ಪೋಸ್ಟ್​ ಇದೀಗ ವೈರಲ್​ ಆಗಿದೆ.  ನಾನಾ ಪಾಟೇಕರ್​ ಅವರ ವಿಷಯ ಮಾತನಾಡಿದಾಗಿನಿಂದ ಚಿತ್ರರಂಗದಲ್ಲಿ ನೆಲೆನಿಲ್ಲಲು ಹೆಣಗಾಡುತ್ತಿರುವ ತನುಶ್ರೀ, ಇಷ್ಟಾದರೂ ತಮ್ಮ ನೇರವಾದ ಮಾತುಗಳನ್ನು ಬಿಡಲಿಲ್ಲ. ಇದೀಗ ಅವರು ಬಾಲಿವುಡ್​ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ.

ರಾಖಿ ಸಾವಂತ್​ ಮೈಸೂರಿನ ಸೊಸೆಯೇ! ಅಂತೂ ಮದ್ವೆ ಗಲಾಟೆಗೆ ಬಿತ್ತು ಬ್ರೇಕ್​...

ಅದರಲ್ಲಿ ಅವರು, ಮುಂದಿನ ವರ್ಷದ ವೇಳೆಗೆ ಅನೇಕ ಬಾಲಿವುಡ್ ನಟರು ಮತ್ತು ಚಲನಚಿತ್ರ ನಿರ್ಮಾಪಕರು ದಿವಾಳಿಯಾಗುತ್ತಾರೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ತನುಶ್ರೀ ಸುದೀರ್ಘ ಪೋಸ್ಟ್  ಹಂಚಿಕೊಂಡಿದ್ದಾರೆ.  ಈ ಪೋಸ್ಟ್‌ನಲ್ಲಿ ನಟಿ ' 2022ರ ಡಿಸೆಂಬರ್ 31 ರ ವೇಳೆಗೆ ಫೈನಾನ್ಷಿಯರ್‌ಗಳು ಬಾಲಿವುಡ್ ಚಲನಚಿತ್ರಗಳು ಮತ್ತು ಯೋಜನೆಗಳಿಗೆ ಹಣ ನೀಡುವುದನ್ನು ನಿಲ್ಲಿಸುತ್ತಾರೆ ಎಂದು ಹೇಳಿದ್ದರು. ಈ ಭವಿಷ್ಯ ಸಾಕಷ್ಟು ಸರಿಯಾಗಿದೆ ಎಂದೇ ಹೇಳಲಾಗುತ್ತಿದೆ. 

ಈಗ ಒಂದು ಹೆಜ್ಜೆ ಮುಂದೆ ಹೋಗಿರುವ ನಟಿ, 2023ರ ಬಾಲಿವುಡ್​ ಭವಿಷ್ಯವನ್ನೂ ನುಡಿದಿದ್ದಾರೆ.  ಅದರಲ್ಲಿ  ಅವರು, ದೊಡ್ಡ ನಿರ್ಮಾಣ ಸಂಸ್ಥೆಗಳು ಮತ್ತು ಕಲಾವಿದರು ಏಪ್ರಿಲ್ 2023 ರ ವೇಳೆಗೆ ದಿವಾಳಿ(bankruptcy)ಯಾಗುತ್ತಾರೆ. ದಿವಾಳಿಯಾದವರ ಈ ಪಟ್ಟಿಯಲ್ಲಿ ಅನೇಕ ಆಘಾತಕಾರಿ ಹೆಸರುಗಳು ಸೇರಿಕೊಳ್ಳುತ್ತವೆ. ಒಟಿಟಿಯಲ್ಲಿ ಬರುವ ಚಿತ್ರಗಳು ಕಡಿಮೆ ಪ್ರೇಕ್ಷಕರನ್ನು ಪಡೆಯುತ್ತವೆ. ಜನರು ಈಗ ಪ್ರಪಂಚದಾದ್ಯಂತದ ಹೆಚ್ಚಿನ ವಿಷಯವನ್ನು ಹಿಂದಿ ಅಥವಾ ಇನ್ನೊಂದು ಪ್ರಾದೇಶಿಕ ಭಾಷೆಗೆ ಡಬ್ (Dubbing) ಮಾಡುತ್ತಾರೆ ಎಂದು ಹೇಳಿದ್ದಾರೆ. 

ಇವರನ್ನು ಈಗ ವಿಶ್ವದ ಭವಿಷ್ಯವನ್ನು ನೂರಾರು ವರ್ಷಗಳ ಮುಂಚೆಯೇ ತಿಳಿಸಿ ಹೋಗಿದ್ದ ಅಂಧ ಮಹಿಳೆ ಬಾಬಾ ವಾಂಗಾ (Baba Wanga) ಅವರಿಗೆ ಹೋಲಿಸಲಾಗುತ್ತಿದೆ. ವಾಂಗಾ ಅವರು ನುಡಿದಿರುವ ಭವಿಷ್ಯವಾಣಿಯಂತೆ ವಿಶ್ವಾದ್ಯಂತ ಹಲವಾರು ಘಟನೆಗಳು ನಡೆಯುತ್ತಿದ್ದು, ಇದೀಗ ಬಾಲಿವುಡ್​ ಕೂಡ ತನುಶ್ರೀ ದತ್ತಾ ಅವರ ಭವಿಷ್ಯವಾಣಿಯಂತೆ ಸಾಗುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇವರ ಭವಿಷ್ಯ ಎಷ್ಟು ನಿಜವಾಗುತ್ತದೆ ಎನ್ನುವುದನ್ನು ಕಾಲವೇ ಉತ್ತರಿಸಬೇಕಿದೆ. 
 

Latest Videos
Follow Us:
Download App:
  • android
  • ios