Asianet Suvarna News Asianet Suvarna News

'ತ್ರಿದೇವ್'​ ಬಳಿಕ 34 ವರ್ಷಗಳಾದರೂ ಮಾಧುರಿ-ಸನ್ನಿ ಒಟ್ಟಿಗೇ ನಟಿಸಲಿಲ್ಲವೇಕೆ?

1989ರಲ್ಲಿ ತೆರೆ ಕಂಡ ಸೂಪರ್​ಹಿಟ್​ ಚಲನಚಿತ್ರ ತ್ರಿದೇವ್​ ಬಳಿಕ ಸನ್ನಿ ಡಿಯೋಲ್​ ಮತ್ತು ಮಾಧುರಿ ದೀಕ್ಷಿತ್​ ಒಟ್ಟಿಗೆ ನಟಿಸಲಿಲ್ಲವೇಕೆ? 
 

Sunny Deol was paired with Madhuri Dixit film Tridev never worked together again in 33 years
Author
First Published Apr 15, 2023, 6:02 PM IST

ನಟ-ನಟಿಯರ ಜೋಡಿ ತೆರೆಯ ಮೇಲೆ ಹಿಟ್ ಆಗಿದ್ದರೆ, ಚಿತ್ರ ನಿರ್ಮಾಪಕರು ನಿರಂತರವಾಗಿ ಆ ಜೋಡಿಯನ್ನು ತಮ್ಮ ಚಿತ್ರಗಳಲ್ಲಿ ಹಾಕಿಕೊಳ್ಳುವುದು  ಬಾಲಿವುಡ್‌ನಲ್ಲಿ ಮಾತ್ರವಲ್ಲದೇ ಎಲ್ಲಾ ಸಿನಿ ಇಂಡಸ್ಟ್ರಿಯಲ್ಲಿ ಮಾಮೂಲು. ಒಂದು ಜೋಡಿಯ ಚಿತ್ರದ ಸೂಪರ್​ಹಿಟ್​ ಆಯಿತು ಎಂದರೆ ಅದೇ ಜೋಡಿಯನ್ನೇ ಇಟ್ಟುಕೊಂಡು ಹಲವಾರು ಚಿತ್ರಗಳು ಬರುತ್ತವೆ.  ಬಾಲಿವುಡ್​ ಮಟ್ಟಿಗೆ ಹೇಳುವುದಾದರೆ ಹಿಂದೆಲ್ಲಾ ಜೀತೇಂದ್ರ-ಶ್ರೀದೇವಿ ಆಗಿರಬಹುದು,  ಅನಿಲ್ ಕಪೂರ್-ಶ್ರೀದೇವಿಯೇ ಇರಬಹುದು ಅಥವಾ  ಮಾಧುರಿ ದೀಕ್ಷಿತ್-ಸಂಜಯ್ ದತ್ ಇರಬಹುದು.  ಇಂಥ ಹಲವು  ಸೂಪರ್‌ಹಿಟ್ ಡೂಪರ್​ಜೋಡಿಗಳು ತೆರೆಯ ಮೇಲೆ ಮೋಡಿ ಮಾಡಿದ್ದು ಇವೆ. ಇಂಥ ಜೋಡಿಗಳು ಬ್ಲಾಕ್​ಬಸ್ಟರ್​ ಸಿನಿಮಾ ಕೊಡುತ್ತಿದ್ದಂತೆಯೇ ಒಂದರ ಹಿಂದೊಂದು ಅವರದ್ದೇ ಜೋಡಿಯ ಚಿತ್ರಗಳು ತೆರೆ ಕಾಣುತ್ತವೆ. ಆದರೆ ಇಲ್ಲಿ ಹೇಳಹೊರಟಿರುವುದು ಕುತೂಹಲದ ಕಥೆ. ಅದೇನೆಂದರೆ ಸೂಪರ್​ ಡೂಪರ್​ (Super) ಚಿತ್ರ ಕೊಟ್ಟಿದ್ದ ಜೋಡಿಯೊಂದು ಒಂದೇ ಚಿತ್ರಕ್ಕೆ ಜೈ ಎಂದಿದ್ದು, 34 ವರ್ಷಗಳ ಬಳಿಕವೂ ಜೋಡಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಈ ಚಿತ್ರದ ನಾಯಕಿ ಮತ್ತು ನಾಯಕ ಇಬ್ಬರೂ ಇಂದು ಬೇರೆ ಬೇರೆ ಚಿತ್ರಗಳಲ್ಲಿ ಬಿಜಿಯಾಗಿದ್ದರೂ ಅಲ್ಲಿಂದ ಇಲ್ಲಿಯವರೆಗೂ ಎರಡನೆಯ ಚಿತ್ರದಲ್ಲಿ ಈ ಜೋಡಿ ಕಾಣಿಸಿಕೊಂಡಿಯೇ ಇಲ್ಲ.

ಹೌದು. ಇಲ್ಲಿ ಹೇಳಹೊರಟಿದ್ದು, ನಟಿ  ಮಾಧುರಿ ದೀಕ್ಷಿತ್ ಮತ್ತು ಸನ್ನಿ ಡಿಯೋಲ್ ಜೋಡಿ.  ಈ ಜೋಡಿ  1989 ರಲ್ಲಿ ಬಿಡುಗಡೆಯಾದ 'ತ್ರಿದೇವ' (Tridev) ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು.  ಪ್ರೇಕ್ಷಕರನ್ನು ಮೋಡಿ ಮಾಡಿದ್ದರು ಈ ತಾರೆಯರು. ಇವರ ಕೆಮೆಸ್ಟ್ರಿಯನ್ನು ಫ್ಯಾನ್ಸ್​ ಕೊಂಡಾಡಿದ್ದರು. ಇನ್ನಷ್ಟು ಚಿತ್ರಗಳು ಇವರದ್ದು ಬರಲಿ ಎಂದು ಆಶಿಸಿದ್ದರು. ಸಾಲದು ಎಂಬುದಕ್ಕೆ  'ತ್ರಿದೇವ' ಆ ವರ್ಷದ ಅತ್ಯಂತ ದೊಡ್ಡ ಹಿಟ್ (Hit) ಚಿತ್ರ ಎಂದು ಸಾಬೀತಾಗಿತ್ತು. ಅಂದಿನ ಕೆಲವು ದಾಖಲೆಗಳನ್ನೂ ಮುರಿಯಿತು.  ಆದರೆ ಇದರ ಹೊರತಾಗಿಯೂ ಸನ್ನಿ ಡಿಯೋಲ್ (Sunny Deol) ಮತ್ತು ಮಾಧುರಿ ದೀಕ್ಷಿತ್ ಮತ್ತೆ ಯಾವುದೇ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿಯೇ ಇಲ್ಲ. ಅಷ್ಟಕ್ಕೂ ಅವರ  ಮಧ್ಯೆ ಆದದ್ದೇನು ಎನ್ನುವ ಚಿಂತೆ ಕೆಲವರನ್ನು ಕಾಡಿದ್ದುಂಟು. ಈಗಾಗಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಗಾಸಿಪ್​ಗಳೇ ಹಬ್ಬುತ್ತಿದ್ದವೇನೋ.  ಆದರೆ ಅಂದು ಡಿಜಿಟಲ್​ ಯುಗ ಈಗಿನಷ್ಟು ವೇಗವಾಗಿಲ್ಲದ ಕಾರಣ ಗಾಸಿಪ್​ಗಳು ಇಷ್ಟೆಲ್ಲಾ ಹರಡದಿದ್ದರೂ ಇವರಿಬ್ಬರು ಮತ್ತೆ ಒಟ್ಟಿಗೇ ಕಾಣಿಸಿಕೊಳ್ಳದೇ ಇದ್ದುದಕ್ಕೆ ತಮ್ಮದೇ ಆದ ರೀತಿಯಲ್ಲಿ ಕೆಲವರು ವಿಶ್ಲೇಷಿಸಿದ್ದರೂ ಉಂಟು.

Aryan Khan: ಶಾರುಖ್​ ಪುತ್ರನ ಅಸಲಿ ಸ್ವಭಾವ ಬಹಿರಂಗಗೊಳಿಸಿದ ಪಾಲಕ್​ ತಿವಾರಿ

ಆದರೆ ಅಸಲಿ ಸುದ್ದಿ ಇಲ್ಲಿದೆ. ವಾಸ್ತವವಾಗಿ, ಸನ್ನಿ ಡಿಯೋಲ್ ಬಾಲಿವುಡ್‌ನಲ್ಲಿ (Bollywood) ವಿಭಿನ್ನವಾದ ಗುರುತನ್ನು ಹೊಂದಿದವರು. ಅವರು ಹೆಚ್ಚಾಗಿ ಆಕ್ಷನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರೊಮಾನ್ಸ್​ ಪಾತ್ರಕ್ಕೆ ಇವರು ಸೈ ಎನ್ನಿಸಿದರೂ, ಅವರ ವ್ಯಕ್ತಿತ್ವಕ್ಕೆ ಹೆಚ್ಚು ಸೂಟ್​ ಆಗುತ್ತಿದ್ದುದು ಆ್ಯಕ್ಷನ್​ ಚಿತ್ರಗಳು. ಸನ್ನಿ ಡಿಯೋಲ್ ಅವರ ಚಲನಚಿತ್ರ ವೃತ್ತಿಜೀವನವನ್ನು ಗಮನಿಸಿದರೆ, ಅವರ ಹೆಚ್ಚಿನ ಚಿತ್ರಗಳು ಆ್ಯಕ್ಷನ್ (Action) ಚಿತ್ರಗಳೋ ಇಲ್ಲವೇ ವಿಪರೀತ ಸಿಡುಕುತನದ ಪಾತ್ರಗಳೋ ಇರುವುದನ್ನು ನೋಡಬಹುದು. ಆದರೆ ಮಾಧುರಿ (Madhuri Dixit) ಹಾಗಲ್ಲವಲ್ಲ. ಈಕೆ ಸದಾ ನೃತ್ಯ, ಪ್ರಣಯ, ಹಾಸ್ಯ ಮತ್ತು ಕೌಟುಂಬಿಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವರು. ಆ್ಯಕ್ಷನ್​, ಥ್ರಿಲ್ಲರ್​, ಸಿಡುಕುತನ ಇದಾವುದೂ ಇವರಿಗೆ ಅಷ್ಟು ಸೂಟ್​ ಆಗುತ್ತಿರಲಿಲ್ಲ. ಇವರದ್ದು ಏನಿದ್ದರೂ ರೊಮಾಂಟಿಕ್​ ಚಿತ್ರಗಳು. 

ಇದೇ ಕಾರಣದಿಂದ ಈ ಎರಡು ವಿಭಿನ್ನ ಕ್ಯಾರೆಕ್ಟರ್​ಗಳು ಒಬ್ಬರಿಗೊಬ್ಬರು ಸೂಟ್​ ಆಗುವುದಿಲ್ಲ ಎನ್ನುವ ಕಾರಣಕ್ಕೆ ಈ ಜೋಡಿ ಮತ್ತೆಂದೂ ತೆರೆಯ ಮೇಲೆ ಒಟ್ಟಿಗೇ ಕಾಣಿಸಿಕೊಂಡಿದ್ದೇ ಇಲ್ಲ. 'ತ್ರಿದೇವ' ಚಿತ್ರ ಬಿಡುಗಡೆಯಾಗಿ 34 ವರ್ಷಗಳು ಕಳೆದರೂ ಇಬ್ಬರೂ ಒಟ್ಟಿಗೇ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳಲಿಲ್ಲ. ಇಬ್ಬರೂ ಕೇವಲ ಒಂದೇ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರೂ, ಇಂದಿಗೂ ಇಬ್ಬರೂ ಒಬ್ಬರಿಗೊಬ್ಬರು ತುಂಬಾ ಒಳ್ಳೆಯ ಸ್ನೇಹಿತರು. ಮಾಧುರಿ ದೀಕ್ಷಿತ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್, ಸಂಜಯ್ ದತ್, ಶಾರುಖ್ ಖಾನ್ ಅವರಂತಹ ಅನೇಕ ನಟರೊಂದಿಗೆ ಕೆಲಸ ಮಾಡಿದ್ದಾರೆ.

'ಶ್ರೀರಾಮ'ನೇ ಸ್ಮೋಕ್​ ಮಾಡಿದಾಗ... ಕಹಿ ಘಟನೆ ನೆನಪಿಸಿಕೊಂಡ ನಟ Arun Govil

Follow Us:
Download App:
  • android
  • ios