Asianet Suvarna News Asianet Suvarna News

Aryan Khan: ಶಾರುಖ್​ ಪುತ್ರನ ಅಸಲಿ ಸ್ವಭಾವ ಬಹಿರಂಗಗೊಳಿಸಿದ ಪಾಲಕ್​ ತಿವಾರಿ

ಶಾರುಖ್​ ಪುತ್ರ ಆರ್ಯನ್​ ಖಾನ್​ ಕುರಿತು ಕೇಳಿದ ಪ್ರಶ್ನೆಗೆ ಅವರ ವ್ಯಕ್ತಿತ್ವದ ಬಗ್ಗೆ ನಟಿ ಪಾಲಕ್​ ತಿವಾರಿ ಹೇಳಿದ್ದೇನು?
 

Palak Tiwari Breaks Down Aryan Khan's Mysterious Personality Says he is a Man of Few Words
Author
First Published Apr 15, 2023, 4:09 PM IST | Last Updated Apr 15, 2023, 4:09 PM IST

ಪಾಲಕ್ ತಿವಾರಿ (Palak Tiwari) ಬಾಲಿವುಡ್‌ನ ಉದಯೋನ್ಮುಖ ಸ್ಟಾರ್ ಮಕ್ಕಳಲ್ಲಿ ಒಬ್ಬರು. ಇವರು ಖ್ಯಾತ ಟಿವಿ ತಾರೆ ಶ್ವೇತಾ ತಿವಾರಿ ಅವರ ಪುತ್ರಿ. 22 ವರ್ಷದ ಪಾಲಕ್ ತಮ್ಮ ಅತ್ಯಾಕರ್ಷಕ ನೋಟದಿಂದಾಗಿ ಚಲನಚಿತ್ರ ನಿರ್ಮಾಪಕರನ್ನು ಆಕರ್ಷಿಸುತ್ತಿದ್ದಾರೆ. ಈಕೆ  ಸ್ಟೈಲಿಶ್ ಬಟ್ಟೆಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿದ್ದಾರೆ. ಸದ್ಯ ಪಾಲಕ್​, ತಮ್ಮ ಅಮ್ಮ ಕಿರುತೆರೆ ನಟಿ ಶ್ವೇತಾ ತಿವಾರಿ ಅವರಿಗಿಂತಲೂ  ಫೇಮಸ್ ಆಗುತ್ತಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿರೋ ಪಾಲಕ್​,  ವಿವಿಧ ಬ್ರಾಂಡ್‌ಗಳಿಗೆ ಶೂಟ್ ಮಾಡುತ್ತಾರೆ.  ಸದ್ಯ, ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi Ki Jaan) ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ ಪಾಲಕ್​. ಇದಕ್ಕಾಗಿ ಅವರು ಸಕಲ ರೀತಿಯಲ್ಲಿ ಸಿದ್ಧರಾಗಿದ್ದಾರೆ. ಬಾಲಿವುಡ್ ನ ಸುಲ್ತಾನ್  ಸಲ್ಮಾನ್ ಖಾನ್ ಜೊತೆಗಿನ ಶೂಟಿಂಗ್ ಅನುಭವವನ್ನು ನಟಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ಅದೀಗ ಭಾರಿ ಸುದ್ದಿಯಾಗಿತ್ತು. ಈಕೆಯ ಸಂದರ್ಶನ ಸುದ್ದಿಯಾಗುತ್ತಿಲ್ಲ. ಬದಲಿಗೆ ಸಂದರ್ಶನದಲ್ಲಿ (Interview)ಸಲ್ಮಾನ್​ ಖಾನ್​ ಅವರನ್ನು ಅಪ್ಪನಂತೆ ಎಂದು ಸಂಬೋಧಿಸಿರುವುದು ಈಗ ಸುದ್ದಿಯಾಗಿದ್ದು, ನೆಟ್ಟಿಗರು ನಟಿ ಮತ್ತು ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎನಿಸಿಕೊಂಡಿರೋ ಸಲ್ಲುಭಾಯಿ ಕಾಲೆಳೆಯುತ್ತಿದ್ದರು. ಇದೀಗ ಅವರು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಅವರ ಜೊತೆ ಲವ್​ನಲ್ಲಿದ್ದಾರೆ, ಇಬ್ಬರೂ ರಿಲೇಷನ್​ನಲ್ಲಿ ಇದ್ದಾರೆ ಎನ್ನುವ ಸುದ್ದಿ ಬಹಳ ಹರಿದಾಡುತ್ತಿತ್ತು. ಆದರೆ ಇದುವರೆಗೂ ಇಬ್ಬರು ಇದರ ಬಗ್ಗೆ ಚಕಾರ ಎತ್ತಲಿಲ್ಲ. ಆದರೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಪ್ರಮೋಷನ್​ ಸಮಯದಲ್ಲಿ  ಖುದ್ದು ಸಲ್ಮಾನ್​ ಖಾನ್​ ಈ ಬಗ್ಗೆ ಹಿಂಟ್​ ನೀಡಿದ್ದರು.

ಆದರೆ ಇದೀಗ ಪಾಲಕ್​ ಅವರನ್ನು ಇಬ್ರಾಹಿಂ ಬದಲು ಶಾರುಖ್​ ಪುತ್ರ ಆರ್ಯನ್​ ಖಾನ್ (Aryan Khan) ಅವರ ಬಗ್ಗೆ ಪ್ರಶ್ನಿಸಲಾಗಿದೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi Ki Jaan) ಚಿತ್ರದ ಪ್ರಮೋಷನ್​ ಸಮಯದಲ್ಲಿ  ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಬಗ್ಗೆ  ಅವರ ಬಳಿ ಪ್ರಶ್ನೆ ಕೇಳಲಾಗಿದೆ.  ಸ್ಟಾರ್​​ ಕಿಡ್ಸ್​ ಪಾಲಕ್ ಮತ್ತು ಆರ್ಯನ್ ಖಾನ್ ಅನೇಕ ಬಾರಿ ಅನೇಕ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಆರ್ಯನ್ ಜೊತೆಗಿನ ಸಮೀಕರಣದ ಬಗ್ಗೆ ಪಾಲಕ್ ಅವರನ್ನು ಪ್ರಶ್ನೆ ಮಾಡಿದಾಗ ಅವರ ಬಗ್ಗೆ ಮಾತನಾಡಿದ್ದಾರೆ.  

'ಮಗಳ' ಲವ್​ ಗುಟ್ಟು ರಟ್ಟು ಮಾಡಿಯೇ ಬಿಟ್ರು ನಟ ಸಲ್ಮಾನ್​ ಖಾನ್​!

'ಆರ್ಯನ್  ಹೇಗೆ ಇದ್ದಾನೋ ಹಾಗೆಯೇ ಇದ್ದಾನೆ. ಹೊರಗಿನಿಂದ ಹೇಗೆ ಕಾಣಿಸುತ್ತಾನೋ, ಒಳಗೂ ಅದೇ ರೀತಿ ಇದ್ದಾನೆ. ಹೊರಗೊಂದು, ಒಳಗೊಂದು ರೀತಿ ಇಲ್ಲ. ಆತ  ಮಾತನಾಡುವುದು ತುಂಬಾ ಕಡಿಮೆ, ಆದರೆ ಅವರು ಏನು ಹೇಳುತ್ತಾನೋ ಅದು ತುಂಬಾ ಉಪಯುಕ್ತವಾಗಿರುತ್ತಾರೆ. ಸ್ವಲ್ಪವೇ ಮಾತನಾಡುತ್ತಾನೆ. ನಂತರ ತನ್ನ ಕೆಲಸದಲ್ಲಿ ನಿರತರಾಗುತ್ತಾನೆ' ಎಂದಿದ್ದಾರೆ. 'ಆತನ ವ್ಯಕ್ತಿತ್ವ ತುಂಬಾ ಸ್ವೀಟ್ (Sweet)​. ಶಾಂತಿಪ್ರಿಯ ಈಗ.  ಪಾರ್ಟಿಗಳಿಗೆ ಬಂದರೆ  ಬ್ಯುಸಿ ಇರುತ್ತಾನೆ.  ನೀವು ಆತನೊಂದಿಗೆ  ಮಾತನಾಡಿದರೆ ಮಾತ್ರ ಅವನು ನಿಮ್ಮೊಂದಿಗೆ ಮಾತನಾಡುತ್ತಾನೆ. ಅದನ್ನು ಬಿಟ್ಟು ಹೆಚ್ಚಿಗೆ ಮಾತನಾಡುವುದಿಲ್ಲ. ಎಲ್ಲರನ್ನೂ ಪ್ರೀತಿಸುತ್ತಾನೆ' ಎಂದಿದ್ದಾರೆ ಪಾಲಕ್​ (Palak Tiwari). 

ಸೂಪರ್‌ಸ್ಟಾರ್ ಶಾರುಖ್ ಮತ್ತು ಅವರ ಪತ್ನಿ ಇಂಟೀರಿಯರ್ ಡಿಸೈನರ್ ಗೌರಿ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ತಮ್ಮ ಚೊಚ್ಚಲ ನಿರ್ದೇಶನವನ್ನು ಮಾಡಲು ಸಿದ್ಧರಾಗಿದ್ದಾರೆ. ಆರ್ಯನ್ ಖಾನ್ ಕೂಡ ಕೆಲವು ತಿಂಗಳ ಹಿಂದೆ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಘೋಷಿಸಿದ್ದರು. ಬರವಣಿಗೆಯ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ರೆಡ್ ಚಿಲ್ಲೀಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶೀಘ್ರದಲ್ಲೇ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವುದಾಗಿ ಆರ್ಯನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅಂದಹಾಗೆ, ಡ್ರಗ್ಸ್​ ಕೇಸ್​ನಲ್ಲಿ (Drugs case) ಕಳೆದ ವರ್ಷ ಆರ್ಯನ್​ ಖಾನ್​ ಜೈಲು ಪಾಲಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ. 

ಸಲ್ಮಾನ್‌ ಖಾನ್‌ ನನ್ನ ಅಪ್ಪನಂತೆ ಎಂದ ನಟಿ ಪಾಲಕ್​: ಬಿಡ್ತಾರೆಯೇ ಟ್ರೋಲಿಗರು?

Latest Videos
Follow Us:
Download App:
  • android
  • ios