ನಟ ಗೋವಿಂದಾ ಮತ್ತು ಪತ್ನಿ ಸುನೀತಾ ಬೇರೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿದೆ. ವಕೀಲರ ಪ್ರಕಾರ ಭಿನ್ನಾಭಿಪ್ರಾಯಗಳು ಬಗೆಹರಿದಿವೆ. ಈ ನಡುವೆ, ಸುನೀತಾ ಅವರು ಗೋವಿಂದಾರಿಂದ ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ರಾಜಕೀಯ ಕಾರಣಗಳಿಂದ ಬೇರೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂದಿದ್ದಾರೆ. 1987ರಲ್ಲಿ ವಿವಾಹವಾದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಬಾಲಿವುಡ್ ಸ್ಟಾರ್ ಗೋವಿಂದಾ ಅವರ ಪತ್ನಿ ಸುನೀತಾ ಅಹುಜಾ ಅವರಿಂದ ಡಿವೋರ್ಸ್ ಪಡೆಯಲಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಹರಿದಾಡುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಸುನೀತಾ ಆರು ತಿಂಗಳ ಹಿಂದೆ ಗೋವಿಂದಾಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದರು, ಆದರೆ ನಟನ ವಕೀಲರ ಪ್ರಕಾರ, ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡಿದ್ದಾರೆ. ಈ ಊಹಾಪೋಹಗಳ ನಡುವೆ, ಸುನೀತಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಗೋವಿಂದಾರಿಂದ ಯಾರೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ವಿಶ್ವಾಸದಿಂದ ಹೇಳಿದ್ದಾರೆ.

ಬಾಲಿವುಡ್‌ ನಟ ಗೋವಿಂದಾ-ಸುನೀತಾ 37 ವರ್ಷಗಳ ದಾಂಪತ್ಯ ಅಂತ್ಯ? ಕಾರಣ ಮರಾಠಿ ನಟಿ!

ಸುನೀತಾ ಹೇಳಿದ್ದೇನು?:
ಇತ್ತೀಚೆಗೆ ಗೋವಿಂದಾ ಮತ್ತು ಸುನೀತಾ ಅಹುಜಾ ಡಿವೋರ್ಸ್ ಸುದ್ದಿ ಬಂದಾಗ ಎಲ್ಲರೂ ಶಾಕ್ ಆದರು. ಅಭಿಮಾನಿಗಳಿಗೆ ದೊಡ್ಡ ಆಘಾತವಾಯಿತು, ಆದರೆ ಸುನೀತಾ 6 ತಿಂಗಳ ಹಿಂದೆ ನಟನಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದರು, ಆದರೆ ಈಗ ಇಬ್ಬರ ನಡುವೆ ಎಲ್ಲವೂ ಸರಿಯಾಗಿದೆ ಎಂದು ಗೋವಿಂದಾ ವಕೀಲರು ತಿಳಿಸಿದ್ದಾರೆ. ಇದರ ನಡುವೆ ಸುನೀತಾ ಅವರ ಹಳೆಯ ಸಂದರ್ಶನವೊಂದು ವೈರಲ್ ಆಗಿದ್ದು, ಅದರಲ್ಲಿ ಅವರು ಮತ್ತು ಮಕ್ಕಳು ಗೋವಿಂದಾರಿಂದ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು. ಈಗ ಮತ್ತೊಂದು ವಿಡಿಯೋ ಚರ್ಚೆಯಲ್ಲಿದೆ, ಅದರಲ್ಲಿ ಸುನೀತಾ ಅವರು ಯಾರೂ ಗೋವಿಂದಾರಿಂದ ನನ್ನನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಗೋವಿಂದಾರಿಂದ ದೂರ ಇರೋದಕ್ಕೆ ಕಾರಣವನ್ನೂ ಹೇಳಿದ್ದಾರೆ.

ನಟ ಗೋವಿಂದನ ಪ್ರೇಯಸಿ ಕುರಿತು ಪತ್ನಿ ರಿವೀಲ್​: 6 ತಿಂಗಳ ಹಿಂದೆ ಸಲ್ಲಿಸಿದ್ದ ಡಿವೋರ್ಸ್​ ಅರ್ಜಿ ವಾಪಸ್​!

ಸುನೀತಾ ವಿಡಿಯೋದಲ್ಲಿ, 'ಬೇರೆ ಬೇರೆ ಇರ್ತೀವಿ ಅಂದ್ರೆ ಅವರು ರಾಜಕೀಯಕ್ಕೆ ಸೇರಬೇಕಾದಾಗ ನನ್ನ ಮಗಳು ದೊಡ್ಡವಳಾಗ್ತಿದ್ಲು, ಆಗ ಕಾರ್ಯಕರ್ತರೆಲ್ಲಾ ಮನೆಗೆ ಬರ್ತಿದ್ರು. ಈಗ ಮಗಳು ದೊಡ್ಡವಳಾಗಿದ್ದಾಳೆ, ನಾವು ಇದ್ದೀವಿ, ನಾವು ಶಾರ್ಟ್ಸ್ ಹಾಕೊಂಡು ಮನೆಯಲ್ಲಿ ಓಡಾಡ್ತೀವಿ, ಅದಕ್ಕೆ ನಾವು ಎದುರುಗಡೆ ಆಫೀಸ್ ತಗೊಂಡ್ವಿ. ನನಗೂ, ಗೋವಿಂದಾಗೂ ಈ ಜಗತ್ತಿನಲ್ಲಿ ಯಾರಾದ್ರೂ ಬೇರ್ಪಡಿಸಿದ್ರೆ, ಯಾರಪ್ಪನಿಂದಲೂ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಪುರುಷರನ್ನು ನಂಬ್ಬೇಡಿ, ಮುಂದಿನ ಜನ್ಮದಲ್ಲಿ ಗೋವಿಂದ ಪತಿಯಾಗೋದು ಬೇಡ ಎಂದ ಸುನೀತಾ ಅಹುಜಾ !

1987ರಲ್ಲಿ ಗೋವಿಂದಾ-ಸುನೀತಾ ಮದುವೆ:
ಗೋವಿಂದಾ ಅವರು ಮಾರ್ಚ್ 1987 ರಲ್ಲಿ ಸುನೀತಾ ಅವರನ್ನು ಮದುವೆಯಾದರು. ಈ ದಂಪತಿಗೆ ಟೀನಾ ಮತ್ತು ಯಶವರ್ಧನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸುನೀತಾ ಆಗಾಗ್ಗೆ ಗೋವಿಂದಾ ಮತ್ತು ಮಕ್ಕಳೊಂದಿಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.