ಬಾಲಿವುಡ್‌ ನಟ ಗೋವಿಂದಾ ಹಾಗೂ ಸುನೀತಾ ಅಹುಜಾ ಬೇರೆಯಾಗ್ತಿದ್ದಾರೆ ಎನ್ನುವ ಸುದ್ದಿ ಮಧ್ಯೆ ಸುನೀತಾ ಹಳೆ ಮಾತೊಂದು ವೈರಲ್‌ ಆಗಿದೆ. ಇದ್ರಲ್ಲಿ ಸುನೀತಾ ಪುರುಷರನ್ನು ಊಸರವಳ್ಳಿಗೆ ಹೋಲಿಕೆ ಮಾಡಿದ್ದಾರೆ. ಪುರುಷರನ್ನು ನಂಬಬೇಡಿ ಅಂತ ಮಹಿಳೆಯರಿಗೆ ಸಲಹೆ ನೀಡಿದ್ದಲ್ಲದೆ ಗೋವಿಂದ ಮುಂದಿನ ಜನ್ಮದಲ್ಲೂ ತಮ್ಮ ಪತಿಯಾಗೋದು ಬೇಡ ಎಂದಿದ್ದಾರೆ. 

ಬಾಲಿವುಡ್ (Bollywood) ಹಿರಿಯ ಜೋಡಿ ಗೋವಿಂದ ಹಾಗೂ ಸುನಿತಾ ಅಹುಜಾ (Govinda and Sunita Ahuja)ಸದ್ಯ ಚರ್ಚೆಯಲ್ಲಿದ್ದಾರೆ. ಗೋವಿಂದ ಹಾಗೂ ಸುನಿತಾ ಬೇರೆಯಾಗ್ತಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಶೀಘ್ರವೇ ಅವರಿಬ್ಬರು ವಿಚ್ಛೇದನ (divorce) ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಗೋವಿಂದ ಹಾಗೂ ಸುನಿತಾ ಬೇರೆಯಾಗಲು ಮರಾಠಿ ನಟಿಯೊಬ್ಬಳು ಕಾರಣ ಅನ್ನೋದ್ರಿಂದ ಹಿಡಿದು ಗೋವಿಂದ ಹಾಗೂ ಸುನೀತಾ ಬೇರೆ ಮನೆಯಲ್ಲಿ ವಾಸವಾಗಿದ್ದಾರೆ ಎನ್ನುವವರೆಗೆ ಅನೇಕ ವಿಷ್ಯಗಳು ಒಂದೊಂದಾಗಿ ಹೊರಗೆ ಬರ್ತಿವೆ. ಇದೇ ವೇಳೆ, ಸುನಿತಾ ಅಹುಜಾ, ಪುರುಷರ ಬಗ್ಗೆ ಹಾಗೂ ಗೋವಿಂದ ಬಗ್ಗೆ ಮಾತನಾಡಿದ್ದ ವಿಡಿಯೋ ಒಂದು ವೈರಲ್ ಆಗಿದೆ.

ನಟ ಗೋವಿಂದ, 1987ರಲ್ಲಿ ಸುನಿತಾ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ದಾಂಪತ್ಯ ಶುರುವಾಗಿ 37 ವರ್ಷ ಕಳೆದಿದೆ. ಆರಂಭದಲ್ಲಿ ಸುಖ ದಾಂಪತ್ಯ ನಡೆಸಿದ್ದ ಜೋಡಿ ಮಧ್ಯೆ ಹೀರೋಯಿನ್ ಎಂಟ್ರಿ ಎಲ್ಲವನ್ನು ಹಾಳ್ಮಾಡಿದೆ ಎಂಬ ಮಾತು ಕೇಳಿ ಬಂದಿದೆ. ಈ ಬಗ್ಗೆ ಈ ಹಿಂದೆ ಸುನೀತಾ ಪರೋಕ್ಷವಾಗಿ ಹೇಳಿಕೆ ಕೂಡ ನೀಡಿದ್ದಾರೆ.

ನಟ ಗೋವಿಂದ ಡಿವೋರ್ಸ್​ ಬೆನ್ನಲ್ಲೇ ಹರಿದಾಡ್ತಿದೆ ಸೊಸೆಯ ಮತಾಂತರ ಸುದ್ದಿ! ಏನಿದು ಖಾಸ್​ ಬಾ

ಮುಂದಿನ ಜನ್ಮದಲ್ಲಿ ಪತಿಯಾಗೋದು ಬೇಡ : ಸಂದರ್ಶವೊಂದರಲ್ಲಿ ಸುನೀತಾ ಅಹುಜಾ, ಪುರುಷರನ್ನು ಹೆಚ್ಚು ನಂಬಬಾರದು ಅಂತ ಸಲಹೆ ನೀಡಿದ್ರು. ಪುರುಷರನ್ನು ಊಸರವಳ್ಳಿಗಳು ಎಂದು ತಮಾಷೆಯಾಗಿ ಹೇಳಿದ್ದ ಸುನೀತಾ, ಮಹಿಳೆಯರು ಬಾಯ್ ಫ್ರೆಂಡ್ ಅಥವಾ ಪತಿಯನ್ನು ಅತಿಯಾಗಿ ನಂಬಬೇಡಿ ಎಂದಿದ್ದರು. ಪತಿ ಗೋವಿಂದ ಹಾಗೂ ತಮ್ಮ ಬಗ್ಗೆಯೂ ಮಾತನಾಡಿದ್ದ ಸುನೀತಾ, ಕಳೆದ ಕೆಲವು ವರ್ಷಗಳಿಂದ ತನ್ನ ಅಭದ್ರತೆ ಹೆಚ್ಚಾಗಿದೆ. ಹಿಂದೆ, ಗೋವಿಂದ ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರ ನಿಷ್ಠೆಯನ್ನು ತಾನು ಎಂದಿಗೂ ಅನುಮಾನಿಸಿರಲಿಲ್ಲ. ಈಗ, ನಟನ ವಯಸ್ಸು 60 ವರ್ಷ ದಾಟುತ್ತಿದ್ದಂತೆ, ನಾನು ಅಸುರಕ್ಷಿತನಾಗಿದ್ದೇನೆ. ಗೋವಿಂದ ನಿಷ್ಠೆ ಬಗ್ಗೆ ನನಗೆ ಯಾವಾಗಲೂ ಅಸುರಕ್ಷಿತ ಭಾವನೆ ಕಾಡ್ತಿದೆ. ಮುಂದಿನ ಜನ್ಮದಲ್ಲಿ ಗೋವಿಂದ ನನ್ನ ಗಂಡನಾಗುವುದು ನನಗೆ ಇಷ್ಟವಿಲ್ಲ ಎಂದಿದ್ದರು. 

ಇಷ್ಟೇ ಅಲ್ಲ ಒಬ್ಬ ಸ್ಟಾರ್ ಪತ್ನಿಯಾಗಿ ಏನೆಲ್ಲ ಸಮಸ್ಯೆಗಳನ್ನು ಎದುರಿಸಬೇಕು ಎಂಬುದನ್ನು ಹೇಳಿದ್ದ ಸುನಿತಾ, ಸ್ಟಾರ್ಸ್ ಜೊತೆ ಪ್ರತಿ ದಿನ ಒಬ್ಬರಲ್ಲ ಒಬ್ಬರ ಹೆಸರು ಥಳುಕು ಹಾಕಿಕೊಳ್ಳುತ್ತದೆ. ಅದನ್ನು ಸಹಿಸೋದು ಕಷ್ಟ ಎಂದಿದ್ದರು. ಈಗ ಸುನೀತಾ ಈ ಮಾತು ವೈರಲ್ ಆಗಿದ್ದು, ಅವರಿಬ್ಬರ ಮಧ್ಯೆ ಗಲಾಟೆಗೆ ಇನ್ನೊಬ್ಬಳ ಪ್ರವೇಶವೇ ಕಾರಣ ಎಂದು ಜನರು ಮಾತನಾಡಿಕೊಳ್ತಿದ್ದಾರೆ. 

ಡಿವೋರ್ಸ್ ಕಾರಣಕ್ಕೆ ಸುದ್ದಿಯಲ್ಲಿರುವ ಗೋವಿಂದ್‌ ಆಸ್ತಿ ಮೌಲ್ಯ ಇಷ್ಟೊಂದಾ?

ವಿಚ್ಛೇದನದ ಬಗ್ಗೆ ಗೋವಿಂದ ಕುಟುಂಬದ ಪ್ರತಿಕ್ರಿಯೆ ಏನು? : ಕರ್ವಾಚೌತ್ ನಲ್ಲಿ ಇಬ್ಬರು ಒಟ್ಟಿಗೆ ನಿಂತಿರುವ ಫೋಟೋವನ್ನು ಗೋವಿಂದ ಹಂಚಿಕೊಂಡಿದ್ದರು. ಇದು ಎಂದೂ ಮುರಿಯದ ಪ್ರೀತಿ ಎಂದು ಶೀರ್ಷಿಕೆ ಹಾಕಿದ್ದರು. ಆದ್ರೆ ಅವ್ರ ಕುಟುಂಬ ಮಾತ್ರ, ಗೋವಿಂದ ಹಾಗೂ ಸುನೀತಾ ಬೇರೆಯಾಗೋದನ್ನು ಪರೋಕ್ಷವಾಗಿ ದೃಢಪಡಿಸಿದೆ. ಕೆಲ ದಿನಗಳ ಹಿಂದೆ ಸುನೀತಾ ಬೇರ್ಪಡುವಿಕೆ ನೋಟಿಸ್ ಕಳುಹಿಸಿದ್ದರು. ಆದ್ರೆ ಅದ್ರ ನಂತ್ರ ಯಾವುದೇ ವಿಶೇಷ ಬೆಳವಣಿಗೆ ಆಗಿಲ್ಲ ಎಂದಿದ್ದಾರೆ. ನಟ ಗೋವಿಂದ ಕೂಡ ವಿಚ್ಛೇದನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವರದಿಗಾರರು ಕೇಳಿದ ವಿಚ್ಛೇದನದ ಪ್ರಶ್ನೆಗೆ ಬ್ಯುಸಿನೆಸ್ ಉತ್ತರ ನೀಡಿದ್ದಾರೆ. ನಮ್ಮಿಬ್ಬರ ಮಧ್ಯೆ ಬ್ಯುಸಿನೆಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಹೊಸ ಸಿನಿಮಾದಲ್ಲಿ ಬ್ಯುಸಿಯಿದ್ದೇನೆ. ಅದ್ರ ಓಡಾಟದಲ್ಲಿದ್ದೇನೆ ಎಂದು ಗೋವಿಂದ ಹೇಳಿದ್ದಾರೆ. ಗೋವಿಂದ ಹಾಗೂ ಸುನೀತಾ ಆಪ್ತರು ಕೂಡ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.