ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಪ್ರಾರ್ಥನೆಗೆ ಮಹಾಕಾಳೇಶ್ವರ ವರ ನೀಡಿದ್ದಾನೆ. 20 ದಿನಗಳಲ್ಲಿ ಎರಡನೇ ಬಾರಿ ಉಜ್ಜಯನಿಗೆ ಭೇಟಿ ನೀಡಿದ ಸುನೀಲ್ ಶೆಟ್ಟಿ ದೇವರಲ್ಲಿ ಏನು ಪ್ರಾರ್ಥನೆ ಸಲ್ಲಿಸಿದ್ರು?
ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ (Sunil Shetty) ಹೊಸ ವರ್ಷದ ಆರಂಭದಲ್ಲಿ ಎರಡು ಬಾರಿ ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಜನವರಿ 21 ರಂದು ಮೊದಲ ಬಾರಿ ಭೇಟಿ ನೀಡಿದ್ದ ಸುನೀಲ್ ಶೆಟ್ಟಿ ಕುಟುಂಬದ ಆರೋಗ್ಯ ಹಾಗೂ ಮುಂಬರುವ ಸಿನಿಮಾ ಯಶಸ್ಸು ಕೋರಿ ಪ್ರಾರ್ಥನೆ ಸಲ್ಲಿಸಿದ್ದರು. ಅವರ ಪ್ರಾರ್ಥನೆಗೆ ಮಹಾಕಾಳನ ಆಶೀರ್ವಾದ ಸಿಕ್ಕಿದೆ. ಸುನೀಲ್ ಶೆಟ್ಟಿ ಆಸೆಯನ್ನು ಮಹಾಕಾಳೇಶ್ವರ ಈಡೇರಿಸಿದ್ದಾನೆ. ಇದೇ ಕಾರಣಕ್ಕೆ ಸುನೀಲ್ ಶೆಟ್ಟಿ ಮತ್ತೆ ಉಜ್ಜೈನಿಗೆ ಭೇಟಿ ನೀಡಿ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ.
20 ದಿನದಲ್ಲಿ ಎರಡನೇ ಬಾರಿ ಭೇಟಿ
ಸುನೀಲ್ ಶೆಟ್ಟಿ, ಮಂಗಳವಾರ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮಹಾಕಾಳೇಶ್ವರ ದೇವಾಲಯದಲ್ಲಿ ಶುದ್ಧ ಮನಸ್ಸಿನಿಂದ, ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಬಾಬಾ ಮಹಾಕಾಲ್ ಅವರಿಂದ ಆಶೀರ್ವಾದ ಪಡೆದರು. ದರ್ಶನದ ನಂತ್ರ ಕೆಲ ಕಾಲ ದೇವಸ್ಥಾನದಲ್ಲಿ ಕುಳಿತಿದ್ದ ಸುನೀಲ್ ಶೆಟ್ಟಿ ಆಧ್ಯಾತ್ಮಿಕ ಶಾಂತಿಯನ್ನು ಅನುಭವಿಸಿದರು.
ಸಲ್ಮಾನ್ ಖಾನ್ ಯಾವ ವರ್ಷದಲ್ಲಿ ಮದುವೆ ಆಗ್ತಾರೆ? ಈ ಸೀಕ್ರೆಟ್ 'ಯಾರಿಗೆ ಗೊತ್ತು' ಅನ್ನೋದು ಹೇಳಿದ ಕತ್ರಿನಾ ಕೈಫ್!
ಮಾಧ್ಯಮಗಳ ಜೊತೆ ಮಾತನಾಡಿದ ಸುನೀಲ್ ಶೆಟ್ಟಿ, ಶಿವ ಮಹಾರಾತ್ರಿ ಮಹೋತ್ಸವದ ಸಂದರ್ಭದಲ್ಲಿ ನಾನು ದೇವಸ್ಥಾನಕ್ಕೆ ಬಂದಿದ್ದೇನೆ. ದೇವಸ್ಥಾನಕ್ಕೆ ಬರುವ ಯಾವುದೇ ಪ್ಲಾನ್ ಇರಲಿಲ್ಲ. 20 ದಿನಗಳೊಳಗೆ ಬರ್ತೇನೆ ಅಂತ ನಾನು ಅಂದ್ಕೊಂಡಿರಲಿಲ್ಲ. ಕುಟುಂಬಸ್ಥರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ನಾವು ಆರೋಗ್ಯವಾಗಿದ್ರೆ ಅದಕ್ಕಿಂತ ದೊಡ್ಡದು ಏನೂ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಮಗ ಅಹಾನ್ ಶೆಟ್ಟಿ ಸಿನಿಮಾ ಬಾರ್ಡರ್ 2 ಯಶಸ್ಸಿಗೆ ಧನ್ಯವಾದ ಹೇಳಲು ಬಂದಿದ್ದೆ. ಆಗಾಗ ಬರ್ತಿರುತ್ತೇನೆ, ದೇವರ ಕಣ್ಮುಂದಿರಬೇಕು, ಒಳ್ಳೆ ಕೆಲ್ಸ ಮಾಡ್ತಿರಬೇಕು ಅಂತ ಸುನೀಲ್ ಶೆಟ್ಟಿ ಹೇಳಿದ್ದಾರೆ. ಸುನೀಲ್ ಶೆಟ್ಟಿ ಮಗ ಅಭಿನಯದ ಬಾರ್ಡರ್ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿದೆ. 350 ಕೋಟಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಜನವರಿ 20 ರಂದು ಸುನೀಲ್ ಶೆಟ್ಟಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ತಮ್ಮ ಕುಟುಂಬ ಸದಸ್ಯರ ಯೋಗಕ್ಷೇಮಕ್ಕಾಗಿ ಮತ್ತು ಮಗ ಅಹಾನ್ ಶೆಟ್ಟಿ ನಟಿಸಿರುವ ಬಾರ್ಡರ್ 2 ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದರು. ಕುಟುಂಬದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ್ದೇನೆ, ಸೈನಿಕರ ಕಥೆ ಆಧರಿಸಿದ ಬಾರ್ಡರ್ 2 ಚಿತ್ರ ಬಿಡುಗಡೆಯಾಗಲಿದೆ, ಚಿತ್ರದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದಿದ್ದರು. ಮಹಾಕಾಳೇಶ್ವರ ದೇವಸ್ಥಾನದ ನಂತ್ರ ಕಾಲ ಭೈರವ ದೇವಸ್ಥಾನಕ್ಕೂ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ ಭಗವಂತನ ಆಶೀರ್ವಾದವನ್ನು ಕೋರಿದ್ದರು.
ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಗೆಳತಿ ಜೊತೆಗಿನ ಫೋಟೋ ಲೀಕ್
ಮಹಾಕಾಳೇಶ್ವರನ ವಿಶೇಷ
ಉಜ್ಜಯಿನಿಯ ಮಹಾಕಾಳೇಶ್ವರ ದೇಶಾದ್ಯಂತ ಮತ್ತು ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಲಕ್ಷಾಂತರ ಜನರು ಪ್ರತಿ ದಿನ ಮಹಾಕಾಳನ ದರ್ಶನ ಪಡೆಯುತ್ತಾರೆ. ಮಹಾಕಾಳೇಶ್ವರ ಭಕ್ತರ ಆಸೆಗಳನ್ನು ಈಡೇರಿಸುತ್ತಾನೆ ಎಂದು ನಂಬಲಾಗಿದೆ. ತಮ್ಮ ಆಸೆ ಈಡೇರಿದ ನಂತ್ರ ಭಕ್ತರು ಮತ್ತೆ ದೇವಸ್ಥಾನಕ್ಕೆ ಬಂದು ಕೃತಜ್ಞತೆ ಸಲ್ಲಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾಲ ಭೈರವನನ್ನು ಬಾಬಾ ಮಹಾಕಾಳನ ದೈವಿಕ ಸೇನಾಧಿಪತಿ ಎಂದು ಪರಿಗಣಿಸಲಾಗುತ್ತದೆ. ಪವಿತ್ರ ನಗರಕ್ಕೆ ಭೇಟಿ ನೀಡುವ ಭಕ್ತರಿಗೆ ಈ ದೇವಾಲಯವು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಮಹಾಕಾಳೇಶ್ವರ ಜ್ಯೋತಿರ್ಲಿಂಗದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಕಾಲ ಭೈರವ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಆಧ್ಯಾತ್ಮಿಕ ತೃಪ್ತಿ ಮತ್ತು ಆಶೀರ್ವಾದಗಳನ್ನು ಪಡೆಯುತ್ತಾರೆ.


