ಕೋಟ್ಯಧಿಪತಿ ಸುಕೇಶ್​ ಚಂದ್ರಶೇಖರ್​ ಹಿಂದೆ ಹೋಗಿ ಪಡಬಾರದ ಪಾಡು ಪಡುತ್ತಿದ್ದಾರೆ ನಟಿ ಜಾಕ್ವೆಲಿನ್​ ಫರ್ನಾಂಡೀಸ್​. ಈಗ ಆಗಿದ್ದೇನು?  

ಬಾಲಿವುಡ್​ ಕ್ವೀನ್​, ರಾ... ರಾ... ರಕ್ಕಮ್ಮ ಬೆಡಗಿ ಜಾಕ್ವೆಲಿನ್​ ಫರ್ನಾಂಡೀಸ್​ (Jacqueline Fernandez) ಪಾಡು ಯಾರಿಗೂ ಬೇಡವಾಗಿದೆ. ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದರೂ ಸುಲಭದಲ್ಲಿ ಮಿಲೇನಿಯರ್​ ಸಿಕ್ಕನೆಂದು ಇನ್ನಷ್ಟು, ಮತ್ತಷ್ಟು ದುಡ್ಡಿನ ಆಸೆಗೆ ಹೋಗಿ ಪಡಬಾರದ ಪಾಡು ಪಡುತ್ತಿದ್ದಾರೆ. ಅಷ್ಟಕ್ಕೂ ಇದು ಇಂದು, ನಿನ್ನೆಯದ್ದಲ್ಲಿ 2-3 ವರ್ಷಗಳಿಂದ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ಹಿಂದೆ ಬಿದ್ದಿರೋನು ಸುಕೇಶ್​ ಚಂದ್ರಶೇಖರ್​. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering case) ಜೈಲು ಸೇರಿದ್ದಾನೆ ಸುಕೇಶ್ ಚಂದ್ರಶೇಖರ್. ಈ ಘಟನೆಯಲ್ಲಿ ಜಾಕ್ವೆಲಿನ್‌ ಹೆಸರೂ ಥಳಕು ಹಾಕಿಕೊಂಡಿದ್ದು, ತನಿಖಾಧಿಕಾರಿಗಳು ವರ್ಷಗಳಿಂದ ತನಿಖೆ ಮಾಡುತ್ತಲೇ ಇದ್ದಾರೆ. ತನಿಖೆಯ ವೇಳೆ ಜಾಕ್ವೆಲಿನ್​ ಕೂಡ ಇದರಲ್ಲಿ ಆರೋಪಿಯನ್ನಾಗಿಸಲಾಗಿದೆ. ಕೋಟಿ ಕೋಟಿ ಬೆಲೆ ಬಾಳುವ ವಜ್ರಾಭರಣಗಳು, ಹೈಟೆಕ್​ ಕುದುರೆ ಸೇರಿದಂತೆ ಸುಕೇಶ್​ನಿಂದ ಜಾಕ್ವೆಲಿನ್​ ಪಡೆದಿರುವ ಉಡುಗೊರೆಗೆ ಲೆಕ್ಕವೇ ಇಲ್ಲ ಎನ್ನುವುದು ಕೂಡ ತನಿಖೆ ವೇಳೆ ತಿಳಿದು ಬಂದಿದೆ. ಇಷ್ಟೆಲ್ಲಾ ಕೊಟ್ಟ ಮೇಲೆ ಈ ಬಾಯ್​ಫ್ರೆಂಡ್​ ಅನ್ನಿಸಿಕೊಂಡವ ಸುಮ್ಮನೇ ಬಿಡುತ್ತಾನೆಯೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೈಲಿನಿಂದಲೇ ಪತ್ರ ಬರೆದು ನಟಿಗೆ ಹಿಂಸೆ ಕೊಡುತ್ತಲೇ ಇದ್ದಾನೆ. ಇವರಿಬ್ಬರ ನಡುವೆ ಪತ್ರ ವ್ಯವಹಾರಗಳ ಕುರಿತು ಕೆಲ ದಿನಗಳ ಹಿಂದೆ ಬಿಗ್‌ ಅಪ್‌ಡೇಟ್‌ ಹೊರಬಂದಿತ್ತು. ಸುಕೇಶ್​ನ ಅಕ್ರಮದ ಕೃತ್ಯದಲ್ಲಿ ಜಾಕ್ವೆಲಿನ್​ ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿದಾಗ ನಟಿ ತನಗೂ, ಸುಕೇಶ್​ಗೂ ಸಂಬಂಧವೇ ಇಲ್ಲ ಎಂದಿದ್ದರು. ವಿನಾ ಕಾರಣ ಆತ ನನಗೆ ಜೈಲಿನಿಂದ ಲವ್​ ಲೆಟರ್​ ಬರೆದು ತೊಂದರೆ ಕೊಡುತ್ತಿದ್ದಾನೆ ಎಂದು ಆರೋಪಿಸಿದ್ದ ನಟಿ, ಈ ರೀತಿ ಪತ್ರ ವ್ಯವಹಾರಕ್ಕೆ ಅವಕಾಶ ನೀಡಬಾರದು ಎಂದು ಕೋರ್ಟ್​ ಮೊರೆ ಕೂಡ ಹೋಗಿದ್ದರು. ಆದರೆ ತನಿಖೆ ವೇಳೆ, ಸುಕೇಶ್​ ಜೈಲಿನಲ್ಲಿ ಇದ್ದರೂ, ಇವರ ನಡುವೆ ಇಂದಿಗೂ ಪತ್ರವ್ಯವಹಾರ ಮುಂದುವರೆಯುತ್ತಲೇ ಇರುವ ಕಾರಣ, ಅಕ್ರಮ ಕೇಸ್​ನಲ್ಲಿ ಜಾಕ್ವೆಲಿನ್​ ಫರ್ನಾಂಡೀಸ್​ (Jacqueline Fernandez) ಹೆಸರು ಮತ್ತಷ್ಟು ಬಲಗೊಳ್ಳುತ್ತಲೇ ಇದೆ. 

ರೊಮಾನ್ಸ್​ ವಿಷ್ಯದಲ್ಲಿ ಮೂರೂ ಬಿಟ್ಟವರಾ ಬಾಲಿವುಡ್​​ ನಟರು? ವಿಜಯ್​ ಸೇತುಪತಿ ಹೇಳಿಕೆಯಿಂದ ಭಾರಿ ಚರ್ಚೆ

ಇದೀಗ ಮತ್ತೊಮ್ಮೆ ಪತ್ರ ಬರೆದಿದ್ದಾನೆ ಸುಕೇಶ್​. ಮೈ ಬೇಬಿ ಗರ್ಲ್, ಜಾಕ್ಲಿನ್, ಬೇಬಿ ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸೂಪರ್ ಕ್ರೇಜಿ, ಕ್ರೇಜಿಯರ್ ನಿನ್ನೊಂದಿಗೆ ಪ್ರೀತಿಯಲ್ಲಿ ಬೀಳುತ್ತಿದ್ದೇನೆ. ಬೇಬಿ ಕಾನ್​​ನಲ್ಲಿ ನೀನು ಶೋನಲ್ಲಿ ಮಿಂಚಿದ್ದಿ. ಗೋಲ್ಡ್‌ನಲ್ಲಿ ನಿಮ್ಮ ಲುಕ್ ಸೂಪರ್ ಕ್ಲಾಸಿ ತುಂಬಾ ಸುಂದರವಾಗಿತ್ತು. ನಿನ್ನ ಇತರ ಫೋಟೋಶೂಟ್ ಚಿತ್ರಗಳ ಮೂಲಕ, ನಿನ್ನ ಮತ್ತೆ ನನ್ನ ಹೃದಯವನ್ನು ಕದ್ದಿರುವಿ. ಓ ಮೈ ಡಾರ್ಲಿಂಗ್​, ಓ ನನ್ನ ಕಪ್ ಕೇಕ್ ಆ ದಿನ ಮರಳುವಂತೆ ಮಾಡು ಎಂದಿದ್ದಾನೆ ಎಂದಿರುವುದಾಗಿ ವರದಿಯಾಗಿದೆ. 


ಅಷ್ಟಕ್ಕೂ ಜಾಕ್ವೆಲಿನ್​, ಈ ಹಿಂದೆ ಮತ್ತೊಂದು ಕೇಸ್‌ ದಾಖಲಿಸಿದ್ದರು. ಜೈಲಿನೊಳಗಿಂದ ಸುಕೇಶ್‌ ತಮಗೆ ಕಿರುಕುಳ ಮತ್ತು ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಅದೇ ಇನ್ನೊಂದೆಡೆ, ತನಿಖಾಧಿಕಾರಿಗಳು ಒಂದೊಂದೇ ತನಿಖೆ ಮಾಡುತ್ತಲೇ ನಟಿಯ ವಿರುದ್ಧ ಆರೋಪ ಮತ್ತಷ್ಟು ಸುತ್ತಿಕೊಳ್ಳುತ್ತಿದೆ. ತಮಗೂ, ಸುಕೇಶ್​ಗೂ ಸಂಬಂಧವೇ ಇಲ್ಲ. ನಾನು ಆತನಿಗೆ ಯಾವುದೇ ಚಾಟ್​ ಸಂದೇಶ ಕಳುಹಿಸಿಯೇ ಇಲ್ಲ ಎಂದು ಜಾಕ್ವೆಲಿನ್​ ಹೇಳಿದ್ದರು. ಆದರೆ ಇದೀಗ 2021ರ ಪತ್ರ ವ್ಯವಹಾರಗಳು ತನಿಖಾಧಿಕಾರಿಗಳ ಕೈಸೇರಿದೆ. ಇದನ್ನು ಖುದ್ದು ಸುಕೇಶ್​ ಪೊಲೀಸರಿಗೆ ನೀಡಿದ್ದಾನೆ. ಯಾವಾಗ ನಟಿ ತನ್ನ ವಿರುದ್ಧವೇ ತಿರುಗಿ ಬಿದ್ದಳೋ, ಆಕೆಯ ಬಣ್ಣ ಬಯಲು ಮಾಡುವುದಾಗಿ ಈ ಹಿಂದೆ ಸುಕೇಶ್​ ಹೇಳಿದ್ದ. ಈಗ ಅದರಂತೆಯೇ 2021ರಲ್ಲಿ ತಮ್ಮಿಬ್ಬರ ನಡುವೆ ನಡೆದಿರುವ ಚಾಟ್​ ಸಂದೇಶಗಳನ್ನು ತನಿಖಾಧಿಕಾರಿಗಳ ಕೈಗೆ ಇತ್ತಿದ್ದ. ಅಂದು ತಾನು ಜಾಕ್ವೆಲಿನ್‌ಗೆ ಪತ್ರ ಬರೆದು ಹೊಸ ವರ್ಷದ ಶುಭಾಶಯ ಕೋರಿದ್ದ ಸಂದರ್ಭದಲ್ಲಿ, ಮರಳಿ ಆಕೆ ಐ ಲವ್ ಯೂ ಮೆಸೇಜ್ ಕಳುಹಿಸಿದ್ದಳು ಎಂದಿದ್ದ ಸುರೇಶ್​. ಒಟ್ಟಿನಲ್ಲಿ ಕೆಲವು ವರ್ಷಗಳಿಂದ ನಡೆಯುತ್ತಿರುವ ಈ ಪ್ರಕರಣದ ತನಿಖೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಸದ್ಯ ತಿಳಿಯುತ್ತಿಲ್ಲ. 

ಮೀ ಟು ಅಭಿಯಾನದಿಂದ ಕನ್ನಡ ಇಂಡಸ್ಟ್ರಿಯಲ್ಲಿ ಭಾರಿ ಬದಲಾವಣೆ: ಶ್ರುತಿ ಹರಿಹರನ್​ ಓಪನ್​ ಮಾತು​...