ತಮ್ಮಿಂದ ಶುರುವಾಗಿರುವ ಮೀ ಟು ಅಭಿಯಾನದಿಂದ ಕನ್ನಡ ಇಂಡಸ್ಟ್ರಿಯಲ್ಲಿ ಆಗಿರುವ  ಬದಲಾವಣೆ ಕುರಿತು ನಟಿ ಶ್ರುತಿ ಹರಿಹರನ್​​ ಹೇಳಿದ್ದೇನು?  

2018ರಲ್ಲಿ ನಟಿ ಶ್ರುತಿ ಹರಹರನ್​ ಅವರು, ನಟ ಅರ್ಜುನ್​ ಸರ್ಜಾ ಅವರ ವಿರುದ್ಧ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪ ಮೀ-ಟು ಅಭಿಯಾನದ ಮೂಲಕ ಹೇಗೆಲ್ಲಾ ಬಿರುಗಾಳಿಯನ್ನೇ ಸೃಷ್ಟಿಸಿತ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಶ್ರುತಿ ಅವರು ಈ ವಿಷಯವನ್ನು ಹೇಳಿದ ಬಳಿಕ, ಸಿನಿ ಇಂಡಸ್ಟ್ರಿಯಲ್ಲಿ ಅದರಲ್ಲಿಯೂ ಬಾಲಿವುಡ್​ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ನಟಿಯರು ತಮಗಾಗಿರುವ ದೌರ್ಜನ್ಯದ ಕುರಿತು ಹೇಳಿಕೊಂಡರು. ಸಿನಿಮಾ ಮಾತ್ರವಲ್ಲದೇ ವಿಭಿನ್ನ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆಯರೂ ತಮ್ಮ ಕಾರ್ಯಕ್ಷೇತ್ರಗಳಲ್ಲಿ ತಮಗಾಗಿರುವ, ಆಗುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಮಾತನಾಡಿದರು. ಮೀ ಟೂ ಅಭಿಯಾನ ಕೆಲ ವರ್ಷ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತು.

ಇದೀಗ ಇದಕ್ಕೆ ಕಾರಣೀಭೂತರಾಗಿರುವ ನಟಿ ಶ್ರುತಿ ಹರಿಹರನ್​ ರ್ಯಾಪಿಡ್​ ರಶ್ಮಿ ಷೋನಲ್ಲಿ ಈ ಕುರಿತು ಮಾತನಾಡಿದ್ದಾರೆ. ನಾನು ಹಿಂದಿರುಗಿ ನೋಡಿದಾಗ ಅಂದು ಮಾಡಿರುವುದು ಕಂಡು ತುಂಬಾ ಖುಷಿಯಾಗುತ್ತಿದೆ. ಅವತ್ತು ನಾನು ಹೇಳಿದ ವಿಷಯದಿಂದಲೇ ಇಂದು ಕನ್ನಡ ಇಂಡಸ್ಟ್ರಿಯಲ್ಲಿ ಬದಲಾವಣೆ ಆಗುತ್ತಿದೆ ಎಂದು ಹೇಳಿದ್ದಾರೆ. ಇದು ಕೇವಲ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೇ ಸಿನಿಮಾ ಇಂಡಸ್ಟ್ರಿಯ ಕಥೆಯೂ ಹೌದು. ಇದರ ಬಗ್ಗೆ ಮಾತನಾಡುತ್ತಾ ಹೋದರೆ ಬಹಳ ಗಂಟೆಗಳೇ ಬೇಕಾಗಬಹುದು ಎಂದಿರುವ ಶ್ರುತಿ ಹರಿಹರನ್​ ಅವರು, ತಾವು ಅಂದು ಲೈಂಗಿಕ ದೌರ್ಜನ್ಯದ ಕುರಿತು ಬಾಯಿ ಬಿಟ್ಟಿರುವ ಕಾರಣದಿಂದ ಇಂದು ಅಗಾಧ ಬದಲಾವಣೆ ಆಗಿದೆ ಎಂದಿದ್ದಾರೆ. 

ಮದುವೆ, ಸಂಬಂಧದ ಕುರಿತು ಬಿಗ್​ಬಾಸ್​ ಖ್ಯಾತಿಯ ನಮ್ರತಾ ಗೌಡ ಓಪನ್​ ಮಾತಿದು...

 ಅಂದು ನಾನು ಈ ವಿಷಯವನ್ನು ಎತ್ತಿರಲಿಲ್ಲ ಎಂದಿದ್ದರೆ, ಇಂದು ಕನ್ನಡ ಇಂಡಸ್ಟ್ರಿಯಲ್ಲಿ ಬದಲಾವಣೆ ಆಗುತ್ತಿರಲಿಲ್ಲ. ಇಂದು ಬಹಳ ಚೇಂಜಸ್​ ಆಗಿದೆ. ಹೆಣ್ಣುಮಕ್ಕಳ ವಿಷಯಕ್ಕೆ ಬರುವ ಮೊದಲು ನೂರು ಬಾರಿ ಯೋಚನೆ ಮಾಡುವ ಹಾಗಾಗಿದೆ. ಕೊನೆಯ ಪಕ್ಷ ತಮಾಷೆಗಾದರೂ ಬೇಡಪ್ಪ ಬಿಡ್ರೋ ಮೀ ಟೂ ಹಾಕಿಬಿಡುತ್ತಾಳೆ ಎಂದು ಜೋಕ್​ ಮಾಡುವ ಮಟ್ಟಿಗಾದರೂ ಪುರುಷರು ಯೋಚನೆ ಮಾಡುತ್ತಿದ್ದಾರೆ ಎಂದರೆ ಈ ಚಿಕ್ಕ ಚಿಕ್ಕ ಬದಲಾವಣೆಯೇ ದೊಡ್ಡ ಮಟ್ಟದ ಬದಲಾವಣೆ ತರಲು ಸಾಧ್ಯ ಎಂದಿದ್ದಾರೆ. ಈ ಮೊದಲಾದರೆ ಇಟ್​ ಈಸ್​ ಓಕೆ ಎನ್ನುವ ಸ್ಥಿತಿಯಿತ್ತು. ಆದರೆ ಈಗ ಚಿಕ್ಕಮಟ್ಟದಲ್ಲಾದರೂ ಭಯ ಪಡುವ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಅಂದು ಶುರು ಮಾಡಿರುವ ಮೀ-ಟು ಅಭಿಯಾನವೇ ಕಾರಣ ಎಂದಿದ್ದಾರೆ ಶ್ರುತಿ.

ಚಿತ್ರೋದ್ಯಮ ಸೇಫ್​ ಅಲ್ಲ ಎನ್ನುವ ಹಣೆ ಪಟ್ಟಿಯಿಂದ ಈಗ ದೂರ ಸರಿಯುತ್ತಿದ್ದೇವೆ. ಯಾವುದಾದರೂ ಹೆಣ್ಣುಮಕ್ಕಳು ಇಂಡಸ್ಟ್ರಿಗೆ ಹೋಗಬೇಕು ಎಂದರೆ ಬೇಡಪ್ಪಾ ಇದು ಕೊಳಕು ಅನ್ನುತ್ತಿದ್ದರು. ಆದರೆ ಈಗ ಬದಲಾವಣೆ ಆಗುತ್ತಿದೆ. ಹೆಣ್ಣುಮಕ್ಕಳಿಗೆ ಇದು ನಾಟ್​ ಸೇಫ್​ ಎನ್ನುವ ಮನಸ್ಥಿತಿ ಹೋಗಿದೆ. ನನಗೆ ಹಿಂದಿರುಗಿ ನೋಡಿದಾಗ ಅಂದು ನಾನು ಮಾಡಿರುವ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ. 

ಬ್ಲ್ಯಾಕ್​ ಮ್ಯಾಜಿಕ್​ ಹೇಗೆ ತಿಳಿಯೋದು? ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಹಾಕಿದ್ರೆ ಸಮಸ್ಯೆನಾ?