Asianet Suvarna News Asianet Suvarna News

ರೊಮಾನ್ಸ್​ ವಿಷ್ಯದಲ್ಲಿ ಮೂರೂ ಬಿಟ್ಟವರಾ ಬಾಲಿವುಡ್​​ ನಟರು? ವಿಜಯ್​ ಸೇತುಪತಿ ಹೇಳಿಕೆಯಿಂದ ಭಾರಿ ಚರ್ಚೆ

ರೊಮಾನ್ಸ್​ ವಿಷ್ಯದಲ್ಲಿ ಮೂರೂ ಬಿಟ್ಟವರಾ ಬಾಲಿವುಡ್​​ ನಟರು? ವಿಜಯ್​ ಸೇತುಪತಿ ಹೇಳಿಕೆಯಿಂದ ಮತ್ತೊಮ್ಮೆ ವಿಷಯ ಭಾರಿ ಚರ್ಚೆಗೆ ಒಳಗಾಗಿದೆ.
 

Only in Bollywood Hero is like Father age and Heroine is like  Daughter age suc
Author
First Published Jun 3, 2024, 4:38 PM IST

ನಟರ ವಯಸ್ಸು 50-60 ವಯಸ್ಸಾದರೂ ನಾಯಕರಾಗಿಯೇ ಮುಂದುವರೆಯುತ್ತಿದ್ದಾರೆ, ಬಹುತೇಕ ನಟಿಯರಿಗೆ ಮದುವೆಯಾದ ಮೇಲೆ ಅವಕಾಶ ಸಿಕ್ಕರೆ ಹೆಚ್ಚು, ಮಕ್ಕಳಾದ ಮೇಲಂತೂ ಸಿನಿಮಾ ದೂರ ದೂರ... ಇದು ಇಂದಿನ ಸ್ಥಿತಿ. ಈ ಬಗ್ಗೆ ಇದಾಗಲೇ ಹಲವು ನಟಿಯರು ಅಸಮಾಧಾನ ಹೊರ ಹಾಕಿದ್ದು ಇದೆ. ಇದೇ ಕಾರಣಕ್ಕೋ ಏನೋ, ಇದ್ದಷ್ಟು ದಿನ ಎಲ್ಲವನ್ನೂ ಮಾಡಿಬಿಡೋಣ ಎನ್ನುವ ಹುಮ್ಮಸ್ಸಿನಲ್ಲಿ ಇಂದಿನ ನಟಿಯರು ಇದ್ದಂತೆ ಕಾಣಿಸುತ್ತದೆ.  ಈಗಂತೂ ಚಲನಚಿತ್ರಗಳಲ್ಲಿ ರೊಮ್ಯಾನ್ಸ್​, ಲಿಪ್​ಲಾಕ್​ ಎಲ್ಲವೂ ಮಾಮೂಲಾಗಿದೆ.  ಅದಕ್ಕಾಗಿಯೇ 60 ವರ್ಷ ದಾಟಿದ ಸೂಪರ್​ ಸ್ಟಾರ್​ಗಳ ಜೊತೆ ಪರದೆಯ ಮೇಲೆ ಎಲ್ಲದ್ದಕ್ಕೂ ಸಿದ್ಧರಾಗಿ ನಿಂತಿರುತ್ತಾರೆ ಈಗ ತಾನೇ ಸಿನಿಮಾಕ್ಕೆ ಎಂಟ್ರಿ ಕೊಡುವ 20-25 ವಯಸ್ಸಿನ ಯುವತಿಯರು! ತಮ್ಮ ಅಪ್ಪನ ವಯಸ್ಸಿನ ನಾಯಕನ ಜೊತೆ ಲಿಪ್​ಲಾಕ್​ ಅಷ್ಟೇ ಏಕೆ ಬೆಡ್​ರೂಮ್​ ಸೀನ್​ಗಳಲ್ಲಿಯೂ ನಟಿಸಲು ನಾಯಕಿಯರು ಹಿಂಜರಿಯುವುದಿಲ್ಲ. ಇನ್ನು ಇವರೇ ಮುಂದೆ ಬಂದ ಮೇಲೆ ನಾಯಕರಿಗೇನು?   ಅದರಲ್ಲಿಯೂ ಕೆಲವು ಬಾಲಿವುಡ್​ ತಾರೆಯರು ಅಲ್ಲಿ ಇರುವವಳು ತಮ್ಮ ಮಗಳ ವಯಸ್ಸಿನವಳು ಎನ್ನುವುದನ್ನೂ ಮರೆತು  ಮಗಳ ವಯಸ್ಸಿನ ನಟಿಯರ ಜೊತೆ ಲಿಪ್​ಲಾಕ್​, ಇಂಟಿಮೇಟ್​ ಸೀನ್​, ಚುಂಬನ ದೃಶ್ಯ, ರೊಮ್ಯಾನ್ಸ್​ ಎಲ್ಲವೂ ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ.

ಆದರೆ ದಕ್ಷಿಣದಲ್ಲಿಯೂ ಹೀಗೆಯೇ ಇದೆಯೆ ಎನ್ನುವ ಚರ್ಚೆ ಇದೀಗ ಶುರುವಾಗಿದೆ. ಬಾಲಿವುಡ್​ ಮಂದಿ ಮಾತ್ರ ಮೂರೂ ಬಿಟ್ಟವರು, ದಕ್ಷಿಣದವರು ಸಭ್ಯಸ್ಥರು ಎನ್ನುವ ಚರ್ಚೆ ಇದಾಗಿದೆ. ಈ ಚರ್ಚೆ ಶುರುವಾಗಿರುವುದು, ಕೆಲ ತಿಂಗಳ ಹಿಂದೆ,ಕನ್ನಡತಿ ಕೃತಿ ಶೆಟ್ಟಿ ಜೊತೆ ನಟ ವಿಜಯ್ ಸೇತುಪತಿ ನಟಿಸುವುದಿಲ್ಲ ಎಂದು ಸಂದರ್ಶನದಲ್ಲಿ ನೀಡಿರುವ ಹೇಳಿಕೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಒಂದು ಚಿತ್ರದಲ್ಲಿ ಮಗಳಾಗಿ ನಟಿಸಿದ ನಾಯಕಿಯ ಜೊತೆ ಇನ್ನೊಂದು ಚಿತ್ರದಲ್ಲಿ ಪ್ರೇಮಿಯಾಗಿ ನಟಿಸಲಾರೆ ಎಂದು ವಿಜಯ್ ಸೇತುಪತಿ ಹೇಳಿದ್ದರು. ಕೃತಿ ಅವರಿಗೆ 21 ವರ್ಷ, ವಿಜಯ್​ ಅವರಿಗೆ 47 ವರ್ಷ. ಹೀಗಿರುವಾಗ ಮಗಳ ವಯಸ್ಸಿನವಳ ಜೊತೆ ನಾನ್ಹೇಗೆ ರೊಮ್ಯಾನ್ಸ್​ ಮಾಡಲಿ ಎಂದು ವಿಜಯ್​ ಸೇತುಪತಿ ಹೇಳಿದ್ದರು. ಇದರ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಬಾಲಿವುಡ್​ ನಟರಾದ ಶಾರುಖ್​ ಖಾನ್​, ಸಲ್ಮಾನ್​ ಖಾನ್​, ಅನಿಲ್​ ಕಪೂರ್​ ಸೇರಿದಂತೆ ಕೆಲವು ಸ್ಟಾರ್​ ನಟರ ಹೆಸರನ್ನು ಬಳಸಿರುವ ನೆಟ್ಟಿಗರು ವಿಜಯ್​ ಸೇತುಪತಿಯಿಂದ ಇಂಥವರು ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ ಎಂದಿದ್ದಾರೆ. 

ಮಗಳ ವಯಸ್ಸಿನವಳ ಜೊತೆ ಲಿಪ್​ಲಾಕ್​, ರೊಮ್ಯಾನ್ಸ್​ ಮಾಡಲು ನಾಚಿಕೆ ಆಗಲ್ವಾ? ನಟಿ ರತ್ನಾ ಕ್ಲಾಸ್​

ವಿಜಯ್‌ ಸೇತುಪತಿ 2021ರಲ್ಲಿ ತೆರೆ ಕಂಡ 'ಉಪ್ಪೆನ' ಚಿತ್ರದಲ್ಲಿ ಕೃತಿ ಶೆಟ್ಟಿಗೆ ತಂದೆ ಪಾತ್ರದಲ್ಲಿ ನಟಿಸಿದ್ದರು. ಆದರೆ ನಂತರ ನಿರ್ಮಾಪಕರೊಬ್ಬರು ವಿಜಯ್‌ ಸೇತುಪತಿ ಹೊಸ ಚಿತ್ರಕ್ಕೆ ನಾಯಕಿಯನ್ನಾಗಿ ಕೃತಿಯನ್ನು ಆರಿಸಿದ್ದರು. ಮಗಳ ವಯಸ್ಸಿನ ನಟಿಯೊಂದಿಗೆ ನಾನು ನಟಿಸುವುದಿಲ್ಲ ಎಂದು ವಿಜಯ್‌ ಸೇತುಪತಿ ಕಡ್ಡಿ ತುಂಡಾದಂತೆ ಹೇಳಿದ್ದರು. ಇದರ ಬಗ್ಗೆ ಹಿರಿಯ ಬಾಲಿವುಡ್​ ನಟಿ  ರತ್ನಾ ಪಾಠಕ್ ಷಾ ಇತ್ತೀಚೆಗೆ ಬೇಸರ ವ್ಯಕ್ತಪಡಿಸಿದ್ದರು. ತಮ್ಮ 'ಧಕ್ ಧಕ್' ಚಿತ್ರದ  ಪ್ರಚಾರದ ವೇಳೆ  ಅವರು,  ತಮ್ಮ ಮಗಳಿಗಿಂತ ಚಿಕ್ಕ ವಯಸ್ಸಿನ ನಟಿಯರ ಜೊತೆ ನಟಿಸೋಕೆ ಅವರಿಗೆ ನಾಚಿಕೆ ಆಗುತ್ತಿಲ್ಲ. ಹಾಗಿರುವಾಗ ನಾನೇನು ಮಾತನಾಡಲಿ? ನಾನು ಹೇಳುವುದಕ್ಕೆ ಏನಿಲ್ಲ. ಅಂದರೆ ಈ ಬಗ್ಗೆ ಮಾತನಾಡಲು ನನಗೆ ನಾಚಿಕೆ ಎನಿಸುತ್ತದೆ ಎಂದಿದ್ದರು.   

 ‘ದಿ ನೈಟ್ ಮ್ಯಾನೇಜರ್’ ಪಾರ್ಟ್ 2ನಲ್ಲಿ ಅನಿಲ್ ಕಪೂರ್ ನಟಿ ಶೋಭಿತಾ ಜೊತೆ ಲಿಪ್‌ಲಾಕ್ ಮಾಡಿ ರೊಮ್ಯಾನ್ಸ್ ಮಾಡಿರುವ ಫೋಟೋಗಳು ಸಖತ್ ವೈರಲ್ ಆಗಿದ್ದು, ಟ್ರೋಲ್‌ಗೂ ಒಳಗಾಗಿತ್ತು. ಶಾರುಖ್​ ಖಾನ್​ ಅವರು ಕೆಲ ಚಿತ್ರಗಳಲ್ಲಿ ದೀಪಿಕಾ ಪಡುಕೋಣೆ ಜೊತೆ ಅತ್ಯಂತ ಅಶ್ಲೀಲ ಭಂಗಿಯಲ್ಲಿ ತೊಡಗಿಸಿಕೊಂಡಾಗಲೂ ಸಕತ್​ ಟ್ರೋಲ್​ ಆಗಿದ್ದರು. ಇವೆಲ್ಲಕ್ಕಿಂತಲೂ ಅತ್ಯಂತ ಟೀಕೆಗೆ ಒಳಗಾಗಿದ್ದು, ನಟ ಸಲ್ಮಾನ್​ ಖಾನ್​ ಅವರು ತಮಗಿಂತ 37 ವರ್ಷ ಚಿಕ್ಕವಳಾದ ನಟಿ ಸಾಯಿ ಮಂಜ್ರೇಕರ್​ ಜೊತೆ ದಬಾಂಗ್​-3 ನಲ್ಲಿ ರೊಮಾನ್ಸ್​ ಮಾಡಿದ್ದು, ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಟೀಕು ವೆಡ್ಸ್ ಶೇರು’ (Tiku Weds Sheru) ಚಿತ್ರದಲ್ಲಿ ನವಾಜುದ್ದೀನ್ ಸಿದ್ಧಿಕಿ  ಚಿಕ್ಕ ವಯಸ್ಸಿನ ನಾಯಕಿ ಅವ್ನೀತ್ ಜೊತೆ ನಟಿಸಿ ಟ್ರೋಲ್​ ಆಗಿದ್ದರು. ಆದರೆ ನಾಯಕಿಯರೇ ನಾಚಿಕೆಯಿಲ್ಲದೇ ಮುಂದೆ ಬರುವಾಗ ನಾಯಕರಿಗೇನು ಸಮಸ್ಯೆ ಎನ್ನುವ ವಾದವೂ ಇದೆ. ಆದರೂ ಇದೀಗ ಇಂಥ ಕೀಳುಮಟ್ಟದ ರುಚಿ ಬಾಲಿವುಡ್​ನಲ್ಲಿ ಮಾತ್ರ ಇದೆ ಎನ್ನುವ ಮಾತು ಕೇಳಿಬರುತ್ತಿದೆ. 

ಮದುವೆಯಾಗೋಕೆ ಇಷ್ಟವೇ ಇಲ್ಲ ಎನ್ನುತ್ತಲೇ ಕಾರಣ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ: ಫ್ಯಾನ್ಸ್​ ಶಾಕ್​!

Latest Videos
Follow Us:
Download App:
  • android
  • ios