Asianet Suvarna News Asianet Suvarna News

ಕೆಜಿಗಟ್ಟಲೆ ಮೇಕಪ್​, ಮೂಗಿಗೆ ಸರ್ಜರಿ- ಊರ ಮಂದಿಗೆ ಸಹಜ ಸೌಂದರ್ಯದ ಪಾಠ: ಶಾರುಖ್​ ಪುತ್ರಿ ಟ್ರೋಲ್​!

ಸೌಂದರ್ಯದ ಬಗ್ಗೆ ಪಾಠ ಮಾಡಿದ ಸುಹಾಖಾ ಖಾನ್​ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದು, ಸಕತ್​ ಟ್ರೋಲ್​ ಮಾಡುತ್ತಿದ್ದಾರೆ. ಆಗಿದ್ದೇನು? 
 

Suhana Khan Speaks On Unrealistic Beauty Standards Netizens suc
Author
First Published Sep 15, 2023, 3:25 PM IST

ನಟ ಶಾರುಖ್ ಖಾನ್ (Shah Rukh Khan) ಮಗಳು ಸುಹಾನಾ ಖಾನ್​ಗೆ ಈಗ 22 ವರ್ಷ ವಯಸ್ಸು. ಇದಾಗಲೇ ಬಿಕಿನಿ ಡ್ರೆಸ್​ ತೊಟ್ಟು ಭಾರಿ ಸುದ್ದಿಯಾಗಿರೋ ಸುಹಾನಾ ಖಾನ್​ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಬಿ ಟೌನ್​ನಲ್ಲಿ ಹರಿದಾಡುತ್ತಿದೆ. ಇದೀಗ ಈ ಜೋಡಿ ಡೇಟಿಂಗ್​ನಲ್ಲಿ ಇದೆ ಎನ್ನುವ ಸುದ್ದಿಗೆ ಇನ್ನಷ್ಟು ಪುಷ್ಟಿ ನೀಡಿದೆ ಇವರ ಕಿಸ್​ ವಿಡಿಯೋ. ಇದರಿಂದಾಗಿ ಬಚ್ಚನ್​ ಮತ್ತು ಖಾನ್​ ಇಬ್ಬರೂ ಸಂಬಂಧಿಕರಾಗಲಿದ್ದಾರೆಯೇ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.  ಇದರ ಜೊತೆಗೇ, ಈಕೆ ಫೇಮಸ್‌ ಸ್ಟಾರ್‌ ಕಿಡ್‌ ಕೂಡ. ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲೇ ಸಾಕಷ್ಷು ಫ್ಯಾನ್ ಫಾಲೋವರ್ಸ್‌ ಹೊಂದಿರುವ ಸುಹಾನಾ ಸದಾ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಆಗಾಗ ಟ್ರೋಲ್‌ಗೆ ಕೂಡ ಗುರಿಯಾಗುತ್ತಾರೆ. ಸುಹಾನಾ ಖಾನ್‌ ಇತ್ತೀಚೆಗೆ ಕರೀನಾ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಸೌಂದರ್ಯ ಮತ್ತು ಸೌಂದರ್ಯವರ್ಧಕಗಳ ಬ್ರ್ಯಾಂಡ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಮೂವರು ಇತ್ತೀಚೆಗೆ ಬ್ರ್ಯಾಂಡ್‌ನ ಬಿಡುಗಡೆ ಸಮಾರಂಭದಲ್ಲಿ  ಭಾಗವಹಿಸಿದ್ದರು. ಆಗಲೂ ಟ್ರೋಲ್​ಗೆ ಒಳಗಾಗಿದ್ದರು.

ಇದಕ್ಕೆ ಕಾರಣ, ಸುಹಾನಾ ಇನ್ನೂ ಚಿತ್ರನಟಿಯಲ್ಲ, ಯಾವುದೇ ಚಿತ್ರ ಮಾಡಿಲ್ಲ.  ಆದರೆ ಶಾರುಖ್​ ಖಾನ್ ಪುತ್ರಿ ಎನ್ನುವ ಕಾರಣಕ್ಕೆ ಅವಕಾಶ ಸಿಕ್ಕಿದೆ ಎಂದು. ಈ ಬಗ್ಗೆ ನೆಟ್ಟಿಗರು  'ಸುಹಾನಾ ಬಗ್ಗೆ ಯಾವುದೇ ದ್ವೇಷವಿಲ್ಲ, ಆದರೆ ನೀವು ಚೊಚ್ಚಲ ಪ್ರವೇಶ ಮಾಡದಿರುವಾಗ ಎರಡು ಪ್ರಮುಖ ಮೇಕಪ್ ಬ್ರಾಂಡ್‌ಗಳ ಬ್ರಾಂಡ್ ಅಂಬಾಸಿಡರ್ ಆಗಲು ತುಂಬಾ ಬೇಗ. ಅವಳು ತನ್ನೊಂದಿಗೆ ಇರುವ ಮಹಿಳೆಯರಂತೆ ಸುಹಾನಾ ಖಾನ್ ಎಂದು ಸಾಬೀತುಪಡಿಸಬೇಕಾಗಿದೆ' ಎಂದು ಬಳಕೆದಾರರು ಟ್ರೋಲ್​ ಮಾಡಿದ್ದರು. ಕಿಯಾರಾ ನತ್ತು ಕರೀನಾ ಶ್ರಮದಿಂದ ಮೇಲಕ್ಕೆ ಬಂದಿದ್ದಾರೆ, ಆದರೆ ಸುಹಾನಾರನ್ನು ಈ ಪ್ರಚಾರಕ್ಕೆ ಬಳಸಿಕೊಂಡಿದ್ದು ತಪ್ಪು ಎಂದಿದ್ದರು. ಆದರೆ ಇದೀಗ ಇದೇ ವಿಷಯವಾಗಿ ಇನ್ನೊಮ್ಮೆ ಸುಹಾನಾ ಟ್ರೋಲ್​ಗೆ ಒಳಗಾಗಿದ್ದಾರೆ.

Suhana Khan: ಶಾರುಖ್​ ಪುತ್ರಿ ಜೊತೆ ಯಾರೀ ಹೊಸ ಹ್ಯಾಂಡ್​ಸಮ್​ ಯುವಕ?

ಅಷ್ಟಕ್ಕೂ ಆಗಿದ್ದೇನೆಂದರೆ,  ಆನ್‌ಲೈನ್ ಚಿಲ್ಲರೆ ಬ್ರ್ಯಾಂಡ್‌ಗೆ ಕಿಯಾರಾ ಅಡ್ವಾಣಿ ಮತ್ತು ಕರೀನಾ ಕಪೂರ್ (Kareena Kapoor) ಜೊತೆಗೆ ಸುಹಾನಾ ಅವರನ್ನು  ಆಯ್ಕೆ ಮಾಡಿರುವ ವಿಷಯವೇ ಇನ್ನೊಂದಿಷ್ಟು ಚರ್ಚೆಯಾಗುತ್ತಿದೆ. ಈ ವಿಡಿಯೋದಲ್ಲಿ  ಸುಹಾನಾ ಖಾನ್​,  ಅರ್ಜುನ್ ಕಪೂರ್ ಅವರೊಂದಿಗೆ ಸೌಂದರ್ಯದ ಕುರಿತು ಮಾತನಾಡುತ್ತಾರೆ.  ಸೌಂದರ್ಯದ ಕುರಿತು ಅವಾಸ್ತವಿಕ ಮಾನದಮಡವನ್ನು ಇಂದಿನ ಪೀಳಿಗೆ ಅನುಸರಿಸುತ್ತಿರುವುದು ಶೋಚನೀಯ ಎನ್ನುವ ಅರ್ಥದಲ್ಲಿ ಈ ಸಂವಾದ ನಡೆಯುತ್ತದೆ. ಇಂಥ ಮಾನದಂಡಕ್ಕೆ ಸವಾಲು ಹಾಕುವುದು ಮತ್ತು ಮುರಿಯುವುದನ್ನು ನಾನು ಇಷ್ಟಪಡುತ್ತೇನೆ.  ನಿಜವಾಗಿಯೂ ಸೌಂದರ್ಯ ಎಂಬ ಪದವು ಹೆಚ್ಚು ಆಳವಾಗಿದೆ ಎನ್ನುತ್ತಾರೆ.
 
ಆದರೆ ಇದು ವೈರಲ್​ ಆಗುತ್ತಿದ್ದಂತೆಯೇ ಹಲವಾರು ಮಂದಿ ಕಿಡಿ ಕಾರಿದ್ದಾರೆ. ಸುಹಾನಾ ಸೌಂದರ್ಯದ ಕುರಿತು ಇಷ್ಟೆಲ್ಲಾ ಮಾತನಾಡುತ್ತಾರೆ, ಆದರೆ ಅಸಲಿಗೆ ತಾವು ಮಾತ್ರ ಬಿಳಿಯಾಗಿ ಕಾಣಲು ಹಲವಾರು ಸೌಂದರ್ಯವರ್ಧಕಗಳ ಮೊತೆ ಹೋಗುವುದು ಮಾತ್ರವಲ್ಲದೇ, ಮೂಗಿಗೂ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದಾರೆ. ಹೇಳುವುದೊಂದು, ಮಾಡುವುದೊಂದು, ಉಳಿದವರಿಗೆ ಆಚಾರ ಹೇಳುವ ಇವರಿಗೆ ಆಚಾರ ಹೇಳುವವರುಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಮುಖ ಬಿಳಿಯಾಗಿ ಕಾಣಲು ಕೆಜಿಗಟ್ಟಲೆ ಮೇಕಪ್​ ಮಾಡಿಕೊಳ್ಳುವುದು ಕಾಣಿಸುತ್ತದೆ, ಇಂಥವಳು ಊರಿಗೆ ಆಚಾರ ಹೇಳ್ತಿದ್ದಾಳೆ ಎಂದಿದ್ದಾರೆ. 

ಅಷ್ಟಕ್ಕೂ ಕಳೆದ  ಆಗಸ್ಟ್ 31 ನಟಿಯರಾದ ಕಿಯಾರಾ ಅಡ್ವಾಣಿ ಮತ್ತು ಕರೀನಾ ಕಪೂರ್ ಖಾನ್ ಅವರೊಂದಿಗೆ ಸುಹಾನಾ ಖಾನ್  ಸೌಂದರ್ಯ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಈವೆಂಟ್‌ಗಾಗಿ, ಸುಹಾನಾ,  ಡೀಪ್ ಕಟ್ ನೆಕ್‌ಲೈನ್‌ನೊಂದಿಗೆ ಬೆರಗುಗೊಳಿಸುವ ಕೆಂಪು ಉಡುಪನ್ನು ಧರಿಸಿದ್ದರು. ಆದಾಗ್ಯೂ, ಈವೆಂಟ್‌ನಲ್ಲಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಅವರ ಉಪಸ್ಥಿತಿಯು ಅನೇಕ ನೆಟಿಜನ್‌ಗಳನ್ನು ಕೆರಳಿಸಿದೆ. 

12.91 ಕೋಟಿ ಕೊಟ್ಟು ಕೃಷಿ ಭೂಮಿ ಖರೀಸಿದಿ ಸುಹಾನಾ ಖಾನ್; ಈ ಜನ್ಮದಲ್ಲಿ ರೈತ ಮಹಿಳೆ ಆಗಲ್ಲ ಎಂದ ನೆಟ್ಟಿಗರು!

Follow Us:
Download App:
  • android
  • ios