12.91 ಕೋಟಿ ಕೊಟ್ಟು ಕೃಷಿ ಭೂಮಿ ಖರೀಸಿದಿ ಸುಹಾನಾ ಖಾನ್; ಈ ಜನ್ಮದಲ್ಲಿ ರೈತ ಮಹಿಳೆ ಆಗಲ್ಲ ಎಂದ ನೆಟ್ಟಿಗರು!

ಅಲಿಬಾಗ್‌ನಲ್ಲಿ ಕೃಷಿ ಭೂಮಿ ಖರೀದಿಸಿದ ಸುಹಾನಾ ಖಾನ್. ನೋಂದಣಿ ದಾಖಲೆಗಳಲ್ಲಿ ಸುಹಾನಾ ಖಾನ್ agriculturist.

Shah Rukh Khan daughter Suhana Khan buys farmland worth 12 91 crore in aibaug vcs

ಬಾಲಿವುಡ್ ಸ್ಟಾರ್ ನಟ, ಕಿಂಗ್ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಅಲಿಬಾಗ್‌ನಲ್ಲಿ ಕೃಷಿ ಭೂಮಿ ಖರೀದಿಸಿ ಟ್ರೋಲಿಗರಿಗೆ ಗುರಿಯಾಗಿದ್ದಾರೆ. ನೋಂದಣಿ ದಾಖಲೆಯಲ್ಲಿ ಸುಹಾನಾ ಖಾನ್ agriculturist ಎಂದು ಹಾಕಲಾಗಿದೆ. ಅಲ್ಲದೆ 23 ವರ್ಷಕ್ಕೆ 12.91 ಕೋಟಿ ಹಣ ಕೊಡುವಷ್ಟು ಸಂಪಾದನೆ ಎಲ್ಲಿ ಎಂಬ ಪ್ರಶ್ನೆ ಕೂಡ ಮೂಡಿ ಬಂದಿದೆ. 

ಹೌದು! ಜೂನ್ 1ರಂದು 1.5 ಎಕರೆ ಅಂದ್ರೆ  2,218 ಚದರ ಅಡಿ ಕೃಷಿ ಭೂಮಿಯನ್ನು ಸುಹಾನಾ ಖರೀದಿ ಮಾಡಿದ್ದಾರೆ. 77.46 ಲಕ್ಷ ಕೊಟ್ಟು ಸ್ಟಾಂಪ್ ಡ್ಯುಟಿ ಮಾಡಿಸಿಕೊಂಡಿರುವ ಸುಹಾನಾ ಖಾನ್ ನೋಂದಣಿ ಪತ್ರದಲ್ಲಿ  agriculturist ಎಂದು ಹಾಕಿದ್ದಾರೆ. ವಹಿವಾಟುಗಳ ಬಗ್ಗೆ ಇಂಡೆಕ್ಸ್‌ಟ್ಯಾಪ್‌ ಡಾಟ್ ಕಾಮ್‌ ಹಂಚಿಕೊಂಡಿದೆ. ಅಂಜಲಿ, ರೇಖಾ ಮತ್ತು ಪ್ರಿಯಾ ಎಂಬ ಮೂವರು ಹೆಣ್ಣು ಮಕ್ಕಳಿಗೆ ಅವರ ಫೋಷಕರು ಈ ಕೃಷಿ ಭೂಮಿಯನ್ನು ಗಿಫ್ಟ್‌ ಆಗಿ ಕೊಟ್ಟಿದ್ದರಂತೆ. ಅದನ್ನು ಈಗ ಸುಹಾನಾ ಖರೀದಿಸಿದ್ದಾರೆ. 

ಮೈಸೂರು ಸಿಲ್ಕ್‌ ರೇಶ್ಮೆ ಸೀರೆ ಗೊತ್ತಿಲ್ವಾ?; ಮೈ ಕಾಣುವ ಸೀರೆ ಧರಿಸಿದ್ದಕ್ಕೆ ಸುಹಾನಾ ಖಾನ್‌ ವಿರುದ್ಧ ನೆಟ್ಟಿಗರು ಗರಂ

ಈಗ ಸುಹಾನಾ ಖಾನ್ ಕೃಷಿ ಭೂಮಿಯನ್ನು Deja Vu Farm Pvt Ltd ಹೆಸರಿನಲ್ಲಿ ನೋಂದಣಿ ಮಾಡಿದ್ದಾರೆ. ಇದಕ್ಕೆ ಶಾರುಖ್ ಅತ್ತೆ ಸವಿತಾ ಚಿಬ್ಬರ್ ಮತ್ತು ಹೆಂಡತಿ ತಂಗಿ ನಮಿತಾ ಚಿಬ್ಬರ್ ಡೈರೆಕ್ಟರ್ಸ್‌ ಆಗಿರಲಿದ್ದಾರೆ. ಅಲಿಬಾಗ್‌ ಟೌನ್‌ನಿಂದ 12 ನಿಮಿಷ ದೂರ ಪ್ರಯಾಣ ಮಾಡಿದರೆ ಸಿಗುವ ತಾಲ್ ಹಳ್ಳಿಯಲ್ಲಿ ಈ ಭೂಮಿ ಖರೀದಿಸಿರುವುದು. ಈ ಭೂಮಿ ಮತ್ತೊಂದು ವಿಶೇಷತೆ ಏನೆಂದರೆ ಸಮುದ್ರ ಮುಖ ಮಾಡಿದೆ, ದೊಡ್ಡ ಸ್ವಿಮಿಂಗ್ ಪೂಲ್ ಮತ್ತು ಹೆಲಿಪ್ಯಾಡ್ ಜಾಗ ಹೊಂದಿದೆ. ಇದೇ ಜಾಗದಲ್ಲಿ ಖಾನ್ 52ನೇ ಬರ್ತಡೇ ಪಾರ್ಟಿ ಕೂಡ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಅಲಿಬಾಗ್‌ನಲ್ಲಿ  ಸಮುದ್ರ ಮುಖ ಮಾಡುವ ಭೂಮಿ ಅಥವಾ ಮನೆಯನ್ನು ಹೊಂದಿದ್ದಾರೆ. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅನುಶ್ಕಾ ಶರ್ಮಾ, ವಿರಾಟ, ಉದ್ಯಮಿ ಗೌತಮ್ ಸೇರಿದಂತೆ ಅನೇಕರು ಈ ಪಟ್ಟಿಯಲ್ಲಿದ್ದಾರೆ.

ಪಾರ್ಟಿಗೆ ಅಮ್ಮನ ಹಳೆ ಡ್ರೆಸ್‌ ಧರಿಸಿದ ಸುಹಾನಾ ಖಾನ್‌: ಸೆಲೆಬ್ರೆಟಿಗಳೂ ಹಳೆ ಬಟ್ಟೆ ಇಟ್ಕೋತಾರಾ ಎಂದ ನೆಟ್ಟಿಗ್ಗರು!

23 ವರ್ಷದ ಸುಹಾನಾ ಖಾನ್ ಏಪ್ರಿಲ್ ತಿಂಗಳಿನಲ್ಲಿ ಕಾಸ್ಮೆಟಿಕ್ ಬ್ರ್ಯಾಂಡ್‌ ಒಂದಕ್ಕೆ ರಾಯಭಾರಿ ಆಗಿ ಆಯ್ಕೆ ಆಗಿದ್ದರು. ಜೋಯಾ ಅಖ್ತರ್ ನಿರ್ದೇಶನ ಮಾಡಿರುವ ದಿ ಆರ್ಚೀಸ್ ಚಿತ್ರದ ಮೂಲಕ ನಟನೆಗೆ ಸುಹಾನ ಎಂಟ್ರಿ ಕೊಡಲಿದ್ದಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ರಿಲೀಸ್ ಆಗಲಿದೆ. 2022ರಲ್ಲಿ ನ್ಯೂ ಯಾರ್ಕ್‌ನ ಟಿಶ್ ಸ್ಕೂಲ್ ಆಫ್ ದಿ ಆರ್ಟ್ಸ್‌ನಲ್ಲಿ ನಟನ ತರಬೇತಿ ಪಡೆದಿದ್ದಾರೆ. 

ಅಪ್ಪನ ಮುದ್ದಿನ ಮಗಳು ಸುಹಾನಾ ಮೇ 22, 2000 ರಂದು ಮುಂಬೈನಲ್ಲಿ ಜನಿಸಿದ್ದು.ಲಂಡನ್‌ನಲ್ಲಿ ಉನ್ನತ ಶಿಕ್ಷಣವನ್ನು ಕಲಿಯುತ್ತಿರುವ ಸುಹಾನಾ ನೃತ್ಯ ಮತ್ತು ಕ್ರೀಡೆಗಳನ್ನು ಪ್ರೀತಿಸುತ್ತಾಳೆ ಹಾಗೂ ಶಾಲೆಯ ಅನೇಕ ಕ್ರೀಡಾಕೂಟಗಳಲ್ಲಿ ಭಾಗಿಯಾಗಿದ್ದಳು. ಮಗಳು ಉತ್ತಮ ನರ್ತಕಿ ಆಗಿ ಅವಳ ಹೆಸರು ವಲ್ಲ್ಡ್‌ಫೇಮಸ್‌ ಆಗಬೇಕೆಂದು ಪಪ್ಪಾ ಶಾರುಖ್‌ರ ಆಸೆ. ತಂದೆಯಂತೆ ನಟನಾ ಕ್ಷೇತ್ರದಲ್ಲಿ ಕೇರಿಯರ್‌ ಆರಂಭಿಸಲು ಬಯಸುವ ಸುಹಾನಾ ಶಾಲೆಯಲ್ಲಿಯೂ ಅನೇಕ ನಾಟಕಗಳಲ್ಲಿ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios