Shah Rukh Khan: ಅಪ್ಪನಿಗೆ ಸಲಹೆ ಕೊಟ್ಟ ಮಗಳು ಸುಹಾನಾ , ಥ್ಯಾಂಕ್ಯೂ ಎಂದ ಕಿಂಗ್‌ ಖಾನ್‌

ಸಿನಿಮಾ (Cinema) ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಹಾಗೆಯೇ ಖಾಸಗಿ ಜೀವನವನ್ನೂ ಶಾರೂಖ್ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಮಗ ಆರ್ಯನ್ ಖಾನ್ (Aryan Khan) ಡ್ರಗ್ಸ್ ಕೇಸ್ ಸಂದರ್ಭದಲ್ಲಿ ಕೋರ್ಟ್, ಕೇಸ್ ಎಂದು ಅಲೆದಾಡಿದ್ದರು. ಮಗಳನ್ನು ಸಹ ಅಪರಿಮಿತವಾಗಿ ಇಷ್ಟಪಡುವ ಶಾರುಖ್ ಖಾನ್ (Shah Rukh Khan) ಸದ್ಯ ಮಗಳು ನೀಡಿರುವ ಅತ್ಯುತ್ತಮ ಸಲಹೆಯೊಂದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಏನದು ?

Suhana Gave Advice To Papa And Shahrukh Said Thank you

ಬಾಲಿವುಡ್ ಬಾದ್ ಷಾ, ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ದೇವರು. ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟು ಸೂಪರ್ ಸ್ಟಾರ್ ಎನಿಸಿಕೊಂಡವರು. ದೇವದಾಸ್, ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೇ, ಕುಚ್ ಕುಚ್ ಹೋತಾ ಹೈ, ಕಭೀ ಖುಷಿ ಕಭೀ ಗಮ್, ರಾಯೀಸ್, ಓಂ ಶಾಂತಿ ಓಂ, ಕಲ್ ಹೋ ನಾ ಹೋ, ಚೆನ್ನೈ ಎಕ್ಸ್‌ಪ್ರೆಸ್ ಸೇರಿ ಹಲವಾರು ಸೂಪರ್ ಹಿಟ್‌ ಚಿತ್ರಗಳಲ್ಲಿ ನಟಿಸಿದ್ದಾರೆ. 

ಶಾರೂಖ್ ಇತ್ತೀಚಿಗೆ ಮಗ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಪ್ರಕರಣದಿಂದ ಕೋರ್ಟ್, ಕೇಸ್ ಎಂದು ಅಲೆದಾಡಿದ್ದರು. ಯಾವುದೇ ಚಿತ್ರಗಳಲ್ಲಿ ಅಭಿನಯಿಸಿರಲ್ಲಿಲ್ಲ. ಈಗ ಬಹಳಷ್ಟು ಸಮಯಗಳ ನಂತರ ಕಿಂಗ್ ಖಾನ್ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಶಾರುಖ್ ಖಾನ್ ಕಂ ಬ್ಯಾಕ್‌ ಚಿತ್ರ ಪಠಾಣ್‌ (Pathan)ನ ಟೀಸರ್ (Teaser) ಇತ್ತೀಚಿಗಷ್ಟೇ ರಿಲೀಸ್ ಆಗಿದೆ. ಚಿತ್ರದಲ್ಲಿ ಶಾರುಖ್ ಖಾನ್ ಜತೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಸಹ ನಟಿಸುತ್ತಿದ್ದಾರೆ.

Pathan Teaser: ಶಾರೂಕ್ ಖಾನ್ ಕಂ ಬ್ಯಾಕ್ ಚಿತ್ರ ‘ಪಠಾಣ್’ ಟೀಸರ್ ರಿಲೀಸ್

ಸಿನಿಮಾ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಹಾಗೆಯೇ ಖಾಸಗಿ ಜೀವನವನ್ನೂ ಶಾರೂಖ್ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಮಗ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಸಂದರ್ಭದಲ್ಲಿ ಕಿಂಗ್ ಖಾನ್ ಕೋರ್ಟ್, ಕೇಸ್ ಎಂದು ಅಲೆದಾಡಿದ್ದರು. ಮಗಳನ್ನು ಸಹ ಅಪರಿಮಿತವಾಗಿ ಇಷ್ಟಪಡುವ ಶಾರೂಖ್ ಸದ್ಯ ಮಗಳು ನೀಡಿರುವ ಅತ್ಯುತ್ತಮ ಸಲಹೆಯೊಂದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Shah Rukh Khan (@iamsrk)

ಬಾಲಿವುದ್ ಬಾದ್ ಷಾ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ದುಬೈನಲ್ಲಿ ಇರುವುದಾಗಿ ಶೀರ್ಷಿಕೆ ಹಾಕಿದ್ದಾರೆ. ವೀಡಿಯೋವು ದುಬೈ ಶೂಟಿಂಗ್‌ನಿಂದ ಪ್ರಾರಂಭವಾಗುತ್ತದೆ ಮತ್ತು ಶೂಟಿಂಗ್ ಸ್ವಲ್ಪ ಸಮಯದ ನಂತರ ಕೊನೆಗೊಳ್ಳುತ್ತದೆ.nಈಗ ಶಾರುಖ್ ಅವರು ಸುಹಾನಾರಿಂದ ಕರೆ ಬರುತ್ತದೆ. ಇದರಲ್ಲಿ ಸುಹಾನಾ ದುಬೈನಲ್ಲಿ ಖುಷಿಯಿಂದ ಸಮಯಗಳನ್ನು ಎಂಜಾಯ್ ಮಾಡುವಂತೆ  ತಂದೆಗೆ ಸಲಹೆ ನೀಡುತ್ತಾರೆ, ನಂತರ ಶಾರುಖ್ ಅವರು ದುಬೈನ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಮಕ್ಕಳೊಂದಿಗೆ ನೃತ್ಯ ಮಾಡುತ್ತಾರೆ. ಯುವ ಹುಡುಗರೊಂದಿಗೆ ಕಡಲತೀರದಲ್ಲಿ ಫುಟ್ಬಾಲ್ ಆಡುತ್ತಾರೆ. ಸುಹಾನ ಮತ್ತೆ ದಿನ ಹೀಗೆ ಕಳೆಯಿತೆಂದು ಕೇಳುತ್ತಾರೆ. ಪ್ರತಿಯಾಗಿ ಶಾರೂಖ್ ದೊಡ್ಡಗಾಗಿ ನಗುತ್ತಾರೆ. ‘ನಿಮ್ಮ ಸಲಹೆಗೆ ಧನ್ಯವಾದಗಳು, ಇದು ನನ್ನ ಜೀವನದ ಅತ್ಯುತ್ತಮ ದಿನ’ ಎಂದು ತಿಳಿಸುತ್ತಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ದುಬೈ ಪ್ರವಾಸೋದ್ಯಮದ ಹೊಸ ಜಾಹೀರಾತಿನ ವೀಡಿಯೋ ಆಗಿದೆ.

1 ಲಕ್ಷದ ಬ್ಯಾಗ್, 2 ಲಕ್ಷದ ಶೋ; ನಟ SRK ಪುತ್ರಿ ಸುಹಾನಾ ಖಾನ್ ಐಷಾರಾಮಿ ಲುಕ್!

ಸದ್ಯ ಶಾರೂಖ್ ತಮ್ಮ ಪಠಾಣ್ ಚಿತ್ರದ ಚಿತ್ರೀಕರಣಕ್ಕಾಗಿ ಸ್ಪೇನ್‌ನಲ್ಲಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವು ಸುಮಾರು ನಾಲ್ಕು ವರ್ಷಗಳ ನಂತರ ಅವರು ಚಲನಚಿತ್ರಗಳಿಗೆ ಪುನರಾಗಮನವನ್ನು ಸೂಚಿಸುತ್ತದೆ. ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಗೂಢಚಾರಿಕನ ಪಾತ್ರದಲ್ಲಿ ನಟಿಸಿದ್ದಾರೆ. ಶಾರುಖ್ ಕೊನೆಯದಾಗಿ 2018ರಲ್ಲಿ ಆನಂದ್ ಎಲ್ ರೈ ಅವರ ನಿರ್ದೇಶನದ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕತ್ರೀನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಕೂಡ ನಟಿಸಿದ್ದಾರೆ. ಆದರೆ ಥಿಯೇಟರ್‌ನಲ್ಲಿ ಚಿತ್ರ ಅಷ್ಟೇನು ಯಶಸ್ವೀ ಪ್ರದರ್ಶನವನ್ನು ಕಾಣಲ್ಲಿಲ್ಲ. 

ಅಮೆಜಾನ್ ಪ್ರೈಮ್ ರಿಲೀಸ್ ಗೆಹ್ರಾಯನ್‌ನಲ್ಲಿ ದೀಪಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಓಂ ಶಾಂತಿ ಓಂ, ಚೆನ್ನೈ ಎಕ್ಸ್‌ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಶಾರೂಕ್ ಖಾನ್ ಜತೆ ನಟಿಸಿದ್ದರು. ಪಠಾಣ್ ದೀಪಿಕಾ ಪಡುಕೋಣೆ ಶಾರೂಕ್ ಖಾನ್ ಜತೆ ನಟಿಸುತ್ತಿರುವ ನಾಲ್ಕನೇ ಚಿತ್ರವಾಗಿದೆ.

Latest Videos
Follow Us:
Download App:
  • android
  • ios