1 ಲಕ್ಷದ ಬ್ಯಾಗ್, 2 ಲಕ್ಷದ ಶೋ; ನಟ SRK ಪುತ್ರಿ ಸುಹಾನಾ ಖಾನ್ ಐಷಾರಾಮಿ ಲುಕ್!
ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಐಷಾರಾಮಿ ಜೀವನದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹಾಗಂತ ಸುಮ್ಮನೆ ಹೊರ ಬಂದಾಗ ಇಷ್ಟೊಂದು ದುಬಾರಿ ಹೇಗೆ ಕ್ಯಾರಿ ಮಾಡುತ್ತಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ನಿರ್ದೇಶಕ ಝೋಯಾ ಅಖ್ತರ್ ಆಫೀಸ್‌ನಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ತುಂಬಾನೇ ಸರಳವಾಗಿ ಕಾಣಿಸಿಕೊಂಡಿದ್ದಾರೆ, ಎಂಬ ಮಾತುಗಳು ಕೇಳಿ ಬರುತ್ತಿವೆ.
ಸುಹಾನಾ ಖಾನ್ ಇಷ್ಟೊಂದು ಸಿಂಪಲ್ ಅಲ್ಲ, ಅನ್ನೊದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಧರಿಸಿರುವುದು ಯಾವ ಬ್ರ್ಯಾಂಡ್ ಬಟ್ಟೆ, ಶೂಸ್, ಎಷ್ಟು ಬೆಲೆ ಎಂದು ಕಂಡು ಹಿಡಿದಿದ್ದಾರೆ ಕೆಲಸವಿಲ್ಲದ ನೆಟ್ಟಿಗರು. ಬೆಲೆ ಕೇಳಿದ್ರೆ ಎಲ್ಲರೂ ಶಾಕ್ ಆಗುತ್ತೀರಾ.
ಹೌದು! ಸುಹಾನಾ ಧರಿಸಿರುವ ವೈಟ್ ಆ್ಯಂಡ್ ಬ್ಲ್ಯಾಕ್ ಸೂ ಬೆಲೆ 2 ಲಕ್ಷ 4 ಸಾವಿರ ಹಾಗೂ ಕೈಯಲ್ಲಿ ಹಿಡಿದುಕೊಂಡಿರುವ ಬಿಳಿ ಬ್ಯಾಗಿನ ಬೆಲೆ 1 ಲಕ್ಷ 8 ಸಾವಿರ ಎನ್ನಲಾಗಿದೆ. ಶೋ ನೈಕಿ ಆಗಿದ್ದು ಬ್ಯಾಗ್ Chanel ಬ್ರ್ಯಾಂಡ್.
ಸುಹಾನಾ ಐಷಾರಾಮಿ ಜೀವನದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹೀಗಾಗಿ ಆಕೆ ಧರಿಸುವ ಬಟ್ಟೆಗಳ ಬಗ್ಗೆ ನೆಟ್ಟಿಗರು ಆಗಾಗ ಅದರ ಬೆಲೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕಳೆದ ವರ್ಷ ಅವರ ಹುಟ್ಟು ಹಬ್ಬದ ಬಟ್ಟೆಯೂ ವೈರಲ್ ಆಗಿತ್ತು.
21ನೇ ಹುಟ್ಟು ಹಬ್ಬಕ್ಕೆ ಸುಹಾನಾ ಧರಿಸಿದ್ದ ಬಟ್ಟೆ ಬಲೆ 3,600 ರೂ. ಆದರೆ ಆ ಬಟ್ಟೆಗೆ ಮ್ಯಾಚ್ ಆಗುವ ಬ್ಯಾಗ್ ಹಿಡಿದುಕೊಂಡಿದ್ದರು. ಆ Prada ಬ್ಯಾಗ್‌ನ ಬೆಲೆ ಸುಮಾರು 1 ಲಕ್ಷ 24 ಸಾವಿರ ರೂ. ಎನ್ನಲಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಮಿನಿ ಪಾಕೆಟ್ ಪೌಚ್‌ನಲ್ಲಿ ಹಿಡಿದುಕೊಂಡಿರುವ ಫೋಟೋ ಅಪ್ಲೋಡ್ ಮಾಡಿದ್ದರು, ಅದರ ಬೆಲೆ 43 ಸಾವಿರ ಎನ್ನಲಾಗಿದೆ. ಒಟ್ಟಿನಲ್ಲಿ ಸುಹಾನಾ ಫ್ಯಾಷನ್ ಸೆನ್ಸನ್‌ನ ಮೀರಿಸುವರೂ ಯಾರೂ ಇಲ್ಲ....