Asianet Suvarna News Asianet Suvarna News

ಕಣ್ಣೆದುರಿಗೇ ಮಕ್ಕಳು ಕಿಡ್ನಾಪ್ ಆದ್ರೆ? ಅಮ್ಮನ ನೋವು, ಹೋರಾಟ ಹೇಳೋ ಮೂವಿ Mrs Chatterjee Vs Norway

ಮಿಸೆಸ್ ಚಟರ್ಜಿ Vs ನಾರ್ವೆ ಚಿತ್ರ ಇದೇ 10ರಂದು ತೆರೆಯ ಮೇಲೆ ಬರಲಿದೆ. ರಾಣಿ ಮುಖರ್ಜಿ ಅಭಿನಯದ ಈ ಚಿತ್ರ ಭಯಾನಕ ಸತ್ಯ ಕಥೆಯನ್ನು ಆಧರಿಸಿ ಮಾಡಲಾಗಿದೆ. ಏನಿದರ ಕಥೆ?
 

Story Of Sagarika Bhattacharya The Woman Who Inspired Ranis Character In Mrs Chatterjee Vs Norway
Author
First Published Mar 6, 2023, 12:12 PM IST

ಬಂಟಿ ಔರ್ ಬಾಬ್ಲಿ 2 ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ರಾಣಿ ಮುಖರ್ಜಿ (Rani Mukharji)   ಮಿಸೆಸ್ ಚಟರ್ಜಿ Vs ನಾರ್ವೆ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಕಳೆದ ವಾರ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು.  2.47 ನಿಮಿಷಗಳ ಟ್ರೇಲರ್​ನಲ್ಲಿ (Trailer) ರಾಣಿ ಮುಖರ್ಜಿ ಮತ್ತು ಅವರ ಕುಟುಂಬವು ನಗುತ್ತಾ ಆಟವಾಡುವುದನ್ನು ನೋಡಬಹುದು. ಆದರೆ ಏಕಾಏಕಿ  ಇಡೀ ಪ್ರಪಂಚವೇ ಇದ್ದಕ್ಕಿದ್ದಂತೆ ಕುಸಿಯುವ ಅನುಭವ. ಅವರ ಇಬ್ಬರೂ ಮಕ್ಕಳನ್ನು ಅವರಿಂದ ದೂರವಿಡಲಾಗುತ್ತದೆ.  ತನ್ನ ಮಕ್ಕಳನ್ನು ಮರಳಿ ಪಡೆಯಲು ತಾಯಿಯ ಹೋರಾಟ ಪ್ರಾರಂಭವಾಗುತ್ತದೆ.  ಮಕ್ಕಳಿಗಾಗಿ ತಾಯಿ ಪಡುವ ಸಂಕಷ್ಟಗಳ ಸರಮಾಲೆ ಈ ಚಿತ್ರದ ಕಥಾವಸ್ತು. ಟ್ರೇಲರ್‌ನಲ್ಲಿ ಅಮೋಘ ಅಭಿನಯ ನೀಡಿರುವ ರಾಣಿ ಮತ್ತೊಮ್ಮೆ ಅಭಿಮಾನಿಗಳ ಮನವನ್ನು ಆಳಲು ಬರುತ್ತಿದ್ದಾರೆ.  ಚಿತ್ರದ ನಿರ್ದೇಶಕರು ಆಶಿಮಾ ಚಿಬ್ಬರ್ (Ashima chibber) ಮತ್ತು ನಿರ್ಮಾಪಕ ನಿಖಿಲ್ ಅಡ್ವಾಣಿ. ಈ ಸಿನಿಮಾವನ್ನು ಎಮ್ಮೆ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಚಿತ್ರವು ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅಂದಹಾಗೆ ಈ ಚಿತ್ರವು ಚಲನಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ. ಅನುರೂಪ್ ಭಟ್ಟಾಚಾರ್ಯ (Anup Bhattacharya) ಮತ್ತು ಸಾಗರಿಕಾ ಭಟ್ಟಾಚಾರ್ಯ (Sagarika Bhattacharya) ಎಂಬ ದಂಪತಿಯ ನೈಜ ಜೀವನವನ್ನು ಇದು ಆಧರಿಸಿದೆ ಎಂದು ಚಿತ್ರದ ಟ್ರೇಲರ್ ಉಲ್ಲೇಖಿಸಿದೆ. 2007 ರಲ್ಲಿ, ಈ ದಂಪತಿ ಮದುವೆಯಾಗುತ್ತಾರೆ.  ತಮ್ಮ ಹೊಸ ವೈವಾಹಿಕ ಜೀವನವನ್ನು ಪ್ರಾರಂಭಿಸಲು ನಾರ್ವೆಗೆ ತೆರಳುತ್ತಾರೆ.  ದಂಪತಿಗೆ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಒಂದು  ಸಂಜೆ, ತಾಯಿ ತನ್ನ ಮಗನಿಗೆ  ಹೀಗೆ ಮಾತನಾಡುತ್ತಾ ತಮಾಷೆಗಾಗಿ ಕೆನ್ನೆಗೆ ಹೊಡೆಯುತ್ತಾಳೆ.  ನಾರ್ವೇಜಿಯನ್ ಮಕ್ಕಳ ಕಲ್ಯಾಣ ಸೇವೆಗಳಿಗೆ (NCW) ಈ ಮಾಹಿತಿಯನ್ನು ಯಾರೋ ನೀಡುತ್ತಾರೆ. ಮಗನ ಕೆನ್ನೆಗೆ ಅಮ್ಮ ಹೊಡೆದಿರುವುದಾಗಿ ದೂರು ದಾಖಲಾಗುತ್ತದೆ.

Poonam Pandey: ಕೌಟುಂಬಿಕ ದೌರ್ಜನ್ಯದ ಬಗ್ಗೆ ಮಾದಕ ನಟಿ ತೆರೆದಿಟ್ಟ ಭಯಾನಕ ರಹಸ್ಯ...

ಇದರ ನಂತರ, ಅಧಿಕಾರಿಗಳು ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿರುತ್ತಾರೆ.   ಮಕ್ಕಳೊಂದಿಗೆ ತಾಯಿಯ ನಡವಳಿಕೆಯನ್ನು ಗಮನಿಸುತ್ತಿರುತ್ತಾರೆ. ಮಕ್ಕಳು ತಮ್ಮ ಹೆತ್ತವರೊಂದಿಗೆ ಒಂದೇ ಹಾಸಿಗೆಯ ಮೇಲೆ ಮಲಗುತ್ತಿರುತ್ತಾರೆ.  ಬರಿ ಕೈಗಳಿಂದ ಆಹಾರವನ್ನು ತಿನ್ನುತ್ತಿರುತ್ತಾರೆ. ಅವರಿಗೆ ಯಾವುದೇ ಕೊರತೆ ಇರುವುದಿಲ್ಲ.  ಅನುಕೂಲಕರ ಬಟ್ಟೆ ಮತ್ತು ಆಟಿಕೆಗಳೂ ಇರುತ್ತವೆ. ಇವೆಲ್ಲವನ್ನೂ  ಅಧಿಕಾರಿಗಳು ಶೀಘ್ರದಲ್ಲೇ ಗಮನಿಸುತ್ತಾರೆ.  2011 ರಲ್ಲಿ, ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡುತ್ತಾರೆ. ಮೂರು ವರ್ಷದ ಮಗ  ಅಭಿಜ್ಞಾನ್ (Abhijnana) ಮತ್ತು ಒಂದು ವರ್ಷದ ಮಗಳು ಐಶ್ವರ್ಯಳನ್ನು  ಕರೆದುಕೊಂಡು ಹೋಗುತ್ತಾರೆ.  ಮಕ್ಕಳಿಗೆ 18 ವರ್ಷ ತುಂಬುವವರೆಗೂ ಅಪ್ಪ-ಅಮ್ಮಂದಿರನ್ನು ಭೇಟಿ ಮಾಡಲು ಮಕ್ಕಳಿಗೆ ಅನುಮತಿ ನೀಡುವುದಿಲ್ಲ.
 
ಪೋಷಕರು ಮತ್ತು ಅಧಿಕಾರಿಗಳ ನಡುವಿನ ರಾಜತಾಂತ್ರಿಕ ಹೋರಾಟ ಮತ್ತು ಗಲಾಟೆಯ ನಂತರ, ಪಾಲನೆಯನ್ನು ಅನುರೂಪ್ ಭಟ್ಟಾಚಾರ್ಯ ಅವರ ಸಹೋದರನಿಗೆ ವರ್ಗಾಯಿಸಲಾಗುತ್ತದೆ.  ನಂತರ ಅವರನ್ನು ಮನೆಗೆ ಮರಳಲು ಅನುಮತಿಸಲಾಗುತ್ತದೆ. ಈ ನಡುವೆ ದಂಪತಿ ವಿಚ್ಛೇದನವಾಗುತ್ತದೆ. 2013 ರಲ್ಲಿ, ಕೋಲ್ಕತಾ ಹೈಕೋರ್ಟ್ ಸಾಗರಿಕಾಗೆ ತನ್ನ ಮಕ್ಕಳ ಪಾಲನೆಯನ್ನು ಕೋರ್ಟ್​ (Court) ನೀಡುತ್ತದೆ.  ಮಕ್ಕಳ ರಕ್ಷಣೆಗಾಗಿ ಜಗತ್ತಿನಾದ್ಯಂತ ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ನಾರ್ವೆ ಒಂದಾಗಿದೆ. ಇಲ್ಲಿ  ಮಕ್ಕಳನ್ನು ಹೊಡೆಯುವುದು ಮತ್ತು ಹೊಡೆಯುವುದು ಕಾನೂನುಬಾಹಿರ. ಹೀಗೆ ತಮಾಷೆಗಾಗಿ ಮಗುವಿಗೆ ಹೊಡೆದದ್ದೇ ಹೇಗೆ ಆಕೆಯ ಪಾಲಿಗೆ ದುಃಸ್ವಪ್ನವಾಗುತ್ತದೆ ಎನ್ನುವುದು ಕಥಾಹಂದರ. ಇದು ನೈಜ ಕಥೆಯಾಗಿದೆ. 

Sexually Assault: ಬಾಲಿವುಡ್​ ನಟನ ಮೇಲೆಯೇ ಮಹಿಳೆ ಲೈಂಗಿಕ ದೌರ್ಜನ್ಯ- ಆಘಾತಕಾರಿ ಘಟನೆ ಬಹಿರಂಗ

ಚಿತ್ರದಲ್ಲಿ ಸಾಗರಿಕಾ ಪಾತ್ರದಲ್ಲಿ ರಾಣಿ ಮುಖರ್ಜಿ ನಟಿಸಲಿದ್ದು, ಅನುರೂಪ್ ಪಾತ್ರದಲ್ಲಿ ಅನಿರ್ಬನ್ ಭಟ್ಟಾಚಾರ್ಯ ನಟಿಸಲಿದ್ದಾರೆ. ಚಿತ್ರದಲ್ಲಿ ಜಿಮ್ ಸರ್ಭ್ ಮತ್ತು ನೀನಾ ಗುಪ್ತಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
 

Follow Us:
Download App:
  • android
  • ios