Sexually Assault: ಬಾಲಿವುಡ್​ ನಟನ ಮೇಲೆಯೇ ಮಹಿಳೆ ಲೈಂಗಿಕ ದೌರ್ಜನ್ಯ- ಆಘಾತಕಾರಿ ಘಟನೆ ಬಹಿರಂಗ

ಚಿಕ್ಕಮಕ್ಕಳಿರುವಾಗ ಹಲವರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ. ಇದೀಗ ಹಿರಿಯ ನಟ ಪಿಯೂಷ್​ ಮಿಶ್ರಾ ಅವರು ತಾವು ಚಿಕ್ಕವರಿರುವಾಗ ಮಹಿಳೆಯಿಂದ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ. ಏನು ಹೇಳಿದ್ದಾರೆ ಅವರು? 
 

Sexually Assaulted By Female Relative In Class 7 Says Actor Piyush Mishra

ಇದಾಗಲೇ ಹಲವು ಸಿನಿಮಾ ತಾರೆಯರು ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 2018ರಲ್ಲಿ ಮೀ ಟೂ ಅಭಿಯಾನ ಬಲು ಜೋರಾಗಿ ನಡೆದ ಸಂದರ್ಭದಲ್ಲಿ ನಟಿಯರು ಮಾತ್ರವಲ್ಲದೇ ನಟರು ಕೂಡ ತಮ್ಮ ಮೇಲಾಗಿದ್ದ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ. ಇನ್ನು ಚಿತ್ರರಂಗದಲ್ಲಿ ಅವಕಾಶ ನೀಡುವ ಸಲುವಾಗಿ ನೇರವಾಗಿ ಬೆಡ್​ರೂಮ್​ಗೆ (Bed room) ಕರೆದ ನಿರ್ಮಾಪಕರು, ನಿರ್ದೇಶಕರು, ನಟರ ಕುರಿತ ಕಾಸ್ಟ್​ ಕೌಚಿಂಗ್​ ಬಗ್ಗೆಯೂ ಇದಾಗಲೇ ಹಲವು ನಟಿಯರು ಭಯಾನಕ ಘಟನೆಯನ್ನು ಬಹಿರಂಗಗೊಳಿಸಿದ್ದಾರೆ. ಇಂಥದ್ದೇ ಒಂದು ಲೈಂಗಿಕ ದೌರ್ಜನ್ಯದ ಕುರಿತು ಈಗ ಪ್ರಸಿದ್ಧ ನಟನೊಬ್ಬ ಮಾತನಾಡಿದ್ದಾರೆ. ಆದರೆ ಇದು ಕಾಸ್ಟ್​ಕೌಚಿಂಗ್​ ಅನುಭವವಲ್ಲ, ಬದಲಿಗೆ ಸಂಬಂಧಿ ಮಹಿಳೆಯೊಬ್ಬರಿಂದ ನಡೆದ ಲೈಂಗಿಕ ದೌರ್ಜನ್ಯದ ಮಾತು! ಸಂಬಂಧಿಕರು, ಅಕ್ಕ ಪಕ್ಕದ ಮನೆಯವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexually assault) ಎಸಗುವ ವಿಷಯಗಳು ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಅಸಲಿಗೆ ಇದು ಇಂದು-ನಿನ್ನೆಯ ಘಟನೆಗಳಲ್ಲ, ವರ್ಷಗಳಿಂದಲೂ ಇಂಥ ದೌರ್ಜನ್ಯಗಳು ನಡೆಯುತ್ತಲೇ ಬಂದಿದ್ದರೂ ಮಾನಕ್ಕೆ ಹೆದರಿ ಅದನ್ನು ಬಹಿರಂಗಗೊಳಿಸಲು ಆಗ ಹೆದರುತ್ತಿದ್ದರು.  ಆದರೆ ಈಗ ಅವುಗಳು ಸುದ್ದಿಯಾಗುತ್ತಿವೆ.

ಅಷ್ಟಕ್ಕೂ ಈಗ ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಿದ ಬಾಲಿವುಡ್​ ನಟ  ಪಿಯೂಷ್ ಮಿಶ್ರಾ. ತಾವು ಏಳನೇ ಕ್ಲಾಸ್​ನಲ್ಲಿ ಇದ್ದಾಗ ತಮ್ಮದೇ ಸಂಬಂಧಿಕ ಮಹಿಳೆಯೊಬ್ಬಳು ತಮ್ಮ ಮೇಲೆ ಎಸಗಿದ್ದ ಲೈಂಗಿಕ ದೌರ್ಜನ್ಯದ ಕುರಿತು ಅವರು ಮಾತನಾಡಿದ್ದಾರೆ.  ಈ ಶಾಕಿಂಗ್​ ಸತ್ಯವನ್ನು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.  ತಮ್ಮ ಆತ್ಮಚರಿತ್ರೆ 'ತುಮ್ಹಾರಿ ಔಕಾತ್ ಕ್ಯಾ ಹೈ...' (ನಿನ್ನೆ ಯೋಗ್ಯತೆ ಏನು)  (Tumhari Aaukath Kya) ಪಿಯೂಷ್ ಮಿಶ್ರಾ'ದಲ್ಲಿ ಹಲವು ವಿಚಾರಗಳನ್ನು ಅವರು ರಿವೀಲ್ ಮಾಡಿದ್ದು, ಅದರಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

ಬಾಲಿವುಡ್​ನಲ್ಲಿ ಲೈಂಗಿಕ ಕಿರುಕುಳ: ಶಾಕಿಂಗ್​ ಸತ್ಯ ತಿಳಿಸಿದ ನಟಿ Nargis Fakhri

ತಮ್ಮ ಜೀವನ ಚರಿತ್ರೆಯಲ್ಲಿ ಅವರು ತಮ್ಮ ವೃತ್ತಿ ಹಾಗೂ ಖಾಸಗಿ ಜೀವನದಲ್ಲಿ ಹಲವು ವಿಷಯಗಳನ್ನು ಮುಕ್ತವಾಗಿ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ  ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ತಾವು  7ನೇ ತರಗತಿಯಲ್ಲಿದ್ದಾಗ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದುದಾಗಿ ಹೇಳಿಕೊಂಡಿದ್ದಾರೆ.  ಸಂಬಂಧಿ ಮಹಿಳೆಯೊಬ್ಬಳು ತಮ್ಮನ್ನು ಕರೆದು ಈ ರೀತಿ ಮಾಡಿದ್ದಳು. ನನಗೆ ಆಗ ಏನಾಗುತ್ತಿದೆ ಎಂದು ತಿಳಿಯಲಿಲ್ಲ.  ಈ ಘಟನೆಯಿಂದ ಆಘಾತವಾಯಿತು. ಇದರಿಂದ ಹೊರಬರಲು ಹಲವು ವರ್ಷಗಳೇ ಬೇಕಾಯಿತು ಎಂದು ಬಹಿರಂಗಪಡಿಸಿದ್ದಾರೆ. 50 ವರ್ಷಗಳ ನಂತರವೂ ಆ ಘಟನೆಯನ್ನು ನೆನೆದು ವಿಚಲಿತನಾಗಿದ್ದೇನೆ ಎಂದು ಪಿಯೂಷ್ (Piyush Mishra) ಹೇಳಿದ್ದಾರೆ. ಸೆಕ್ಸ್ ತುಂಬಾ ಆರೋಗ್ಯಕರ ವಿಷಯ. ಆದರೆ ಇಂಥ ಅನುಭವವಗಳು ಭಯಾನಕವಾದದ್ದು.  ಆ ಲೈಂಗಿಕ ಆಕ್ರಮಣವು ನನ್ನ ಜೀವನದುದ್ದಕ್ಕೂ ನನ್ನನ್ನು ಸಂಕೀರ್ಣಗೊಳಿಸಿತು ಎಂದಿದ್ದಾರೆ.

 ಸುಮಾರು 50 ವರ್ಷಗಳ ಹಿಂದೆ ನಡೆದ ಘಟನೆ ಇದು. ಒಂದು ಬೇಸಿಗೆಯ ದಿನ. ಆಗ ಮಹಿಳೆ ನನ್ನ ಬಳಿ ಬಂದು ಇಲ್ಲಸಲ್ಲದನ್ನು ಮಾಡಲು ಶುರು ಮಾಡಿದಳು. ನನಗೆ ಏನಾಗುತ್ತಿದೆ ಎಂದು ತಿಳಿದಿರಲಿಲ್ಲ. ಕೊನೆಗೆ ಆಕೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದಿರುವ ಮಿಶ್ರಾ, ತಮ್ಮ ಪುಸ್ತಕದಲ್ಲಿ ಆ ಮಹಿಳೆಯ ನೈಜ ಹೆಸರನ್ನು ಬಹಿರಂಗಪಡಿಸಲಿಲ್ಲ. ಕಾಲ್ಪನಿಕ ಹೆಸರನ್ನು ಬರೆದಿದ್ದಾರೆ. ನನ್ನ ಜೀವನದಲ್ಲಿ ಘಟಿಸಿರುವ ಘಟನೆಗಳ ಕುರಿತು ನನ್ನ ಆತ್ಮಚರಿತ್ರೆಯಲ್ಲಿ ಬರೆದಿದ್ದೇನೆ. ಆದರೆ ಬಹುತೇಕ ನಕಾರಾತ್ಮಕ ಘಟನೆಗಳಲ್ಲಿ ಹೆಸರನ್ನು ಬದಲಾಯಿಸಿದ್ದೇನೆ. ಯಾರನ್ನೂ ನೋವು ಮಾಡುವ ಅಥವಾ ಘಾಸಿಗೊಳಿಸುವ ಉದ್ದೇಶ ನನಗೆ ಇಲ್ಲ. ಈ ಕಾರಣದಿಂದ ಅವರ ನೈಜ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಆದರೆ ಲೈಂಗಿಕ ದೌರ್ಜನ್ಯದ ಘಟನೆ ಮಾತ್ರ ನನ್ನನ್ನು ಇಂದಿಗೂ ಬೆಚ್ಚಿ ಬೀಳಿಸುತ್ತದೆ ಎಂದಿದ್ದಾರೆ. 

Anikha Surendran: 'ಬ್ರಾ' ಬಗ್ಗೆ ಪಾಠ ಮಾಡಿದ್ದ ನಟಿಯಿಂದ ಈಗ ಲಿಪ್​ಲಾಕ್​ ಅನುಭವ

ಅಂದಹಾಗೆ ಪಿಯೂಷ್​ ಅವರು ದಿಲ್ ಸೆ, ರಾಕ್‌ಸ್ಟಾರ್, ಆಜಾ ನಾಚ್ಲೆ, ಪಿಂಕ್, ತಶನ್, ತಮಾಶಾ, ಗ್ಯಾಂಗ್ಸ್ ಆಫ್ ವಾಸೇಪುರ್ ಮುಂತಾದ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
 

Latest Videos
Follow Us:
Download App:
  • android
  • ios