Asianet Suvarna News Asianet Suvarna News

ಕೂಡಿ ಬಾಳೋಣಾ ಎಂದೆಂದೂ ಸೇರಿ ದುಡಿಯೋಣ ಎಂದ ಭಾರತದ 'ದಿಗ್ಗಜರು'

ರಜನಿ ಮತ್ತು ಕಮಲ್ ಇವರಿಬ್ಬರು ಒಟ್ಟೊಟ್ಟಿಗೆ ಬರುತ್ತಿರುವುದು ಪ್ರೇಕ್ಷಕವರ್ಗಕ್ಕೆ ಹಬ್ಬವೇ ಸರಿ! ಇವರೊಂದಿಗೆ ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಹಿರಿಯ ನಟ ಅಮಿತಾಭ್ ಬಚ್ಚನ್ ಕೂಡ ಜತೆಯಾಗಿದ್ದಾರೆ. ಈ ತ್ರಿಮೂರ್ತಿಗಳ 'ತ್ರಿಬ್ಬಲ್ ಧಮಾಕಾ' ನೋಡಲು ಸಿನಿಮಾ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.

 

Stars Rajinikanth Kamal Haasan and Amitabh Bachchan acts in Thalaivar 170 srb
Author
First Published Oct 6, 2023, 3:37 PM IST

ನಟ ರಜನಿಕಾಂತ್ ಸಿನಿಮಾ ಅಂದರೆ ಅಲ್ಲಿ ಏನಾದರೂ ಸ್ಪೆಷಲ್ ಇದ್ದೇ ಇರುತ್ತದೆ. ಇತ್ತೀಚೆಗೆ ರಿಲೀಸ್ ಆಗಿ ಸೂಪರ್ ಹಿಟ್ ದಾಖಲಿಸಿರುವ 'ಜೈಲರ್' ಸಿನಿಮಾ ಕೂಡ ವಿಭಿನ್ನವಾಗಿತ್ತು. ಇದೀಗ ಅನೌನ್ಸ್ ಆಗಿರುವ 'ತಲೈವಾ' ಖ್ಯಾತಿಯ ರಜನಿಕಾಂತ್ ಮುಂಬರುವ ಸಿನಿಮಾ 'ತಲೈವರ್ 170' ಸಿನಿಮಾದಲ್ಲಿ ಹೊಸದೊಂದು ಟ್ವಿಸ್ಸ್ಟ್ ಇದೆ. ಈ ಸಿನಿಮಾದಲ್ಲಿ ರಜನಿಕಾಂತ್ ಜತೆ ಇನ್ನೂ ಇಬ್ಬರು ಸ್ಟಾರ್ಸ್‌ ನಟಿಸಲಿದ್ದಾರೆ. ಈ ಮೂಲಕ ಸಿನಿಮಾ ಪ್ರೇಕ್ಷಕರಿಗೆ 'ತ್ರಿಬ್ಬಲ್ ಧಮಾಕಾ' ನೋಡಲು ಸಿಗಲಿದೆ. 

ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಜತೆ ಇನ್ನೂ ಇಬ್ಬರು ಲೆಜೆಂಡರಿ ಸ್ಟಾರ್ಸ್ ಸಿದ್ಧರಾಗಿದ್ದಾರೆ. ಸೌತ್ ಸೂಪರ್ ಸ್ಟಾರ್‌ಗಳಲ್ಲಿ ಒಬ್ಬರಾದ ಹಿರಿಯ ನಟ ಕಮಲ್ ಹಾಸನ್ ಹಾಗೂ ಬಾಲಿವುಡ್ ಬಿಗ್ ಬಿ ಖ್ಯಾತಿಯ ಅಮಿತಾಭ್ ಬಚ್ಚನ್ ನಟಿಸಲಿದ್ದಾರೆ. ಸಾಕಷ್ಟು ಜನರಿಗೆ ಗೊತ್ತಿರುವಂತೆ, ನಟ  ನಟ ಕಮಲ ಹಾಸನ್ ಹಾಗೂ ನಟ ರಜನಿಕಾಂತ್ ಇಬ್ಬರೂ  ಕನ್ನಡ, ತಮಿಳು, ತೆಲಗು, ಹಿಂದಿ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಸಿದ ಖ್ಯಾತ ನಟರು. ಈ ಹಿಂದೆ ಈ ಇಬ್ಬರು ನಟರು 'ಅಪೂರ್ವ ರಾಗಂ' ನಲ್ಲಿ ನಟಿಸಿದ್ದರು. 

ರಜನಿ ಮತ್ತು ಕಮಲ್ ಇವರಿಬ್ಬರು ಒಟ್ಟೊಟ್ಟಿಗೆ ಬರುತ್ತಿರುವುದು ಪ್ರೇಕ್ಷಕವರ್ಗಕ್ಕೆ ಹಬ್ಬವೇ ಸರಿ! ಇವರೊಂದಿಗೆ ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಹಿರಿಯ ನಟ ಅಮಿತಾಭ್ ಬಚ್ಚನ್ ಕೂಡ ಜತೆಯಾಗಿದ್ದಾರೆ. ಈ ತ್ರಿಮೂರ್ತಿಗಳ 'ತ್ರಿಬ್ಬಲ್ ಧಮಾಕಾ' ನೋಡಲು ಸಿನಿಮಾ ಪ್ರಿಯರು ತುದಿಗಾಲಲ್ಲಿ ನಿಂತಿರುವುದಂತೂ ಪಕ್ಕಾ! ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಈ ಹಿಂದೆ 'ಹಮ್, ಅಂಧಾಕಾನೂನ್ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸೂಪರ್ ಹಿಟ್ ಜೋಡಿ ಈಗ 38 ವರ್ಷಗಳ ನಂತರ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. 

ಬಿಗ್ ಬಾಸ್‌ ಸೀಸನ್ 10ಕ್ಕೆ ಕ್ಷಣಗಣನೆ; ಪರಮೇಶ್ವರ್ ಗುಂಡ್ಕಲ್ ಮಿಸ್ ಮಾಡಿಕೊಳ್ತಿರೋ ವೀಕ್ಷಕರು!

ಈ ಸುದ್ದಿ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಟ್ಟಿದೆ. ಜತೆಗೆ, 'ತಲೈವರ್ 170' ಸಿನೆಮಾದ ಮೂಲಕ ನಟ ಕಮಲ್ ಹಾಸನ್ ಹಾಗೂ ನಟ ಅಮಿತಾಭ್ ಬಚ್ಚನ್ ಈ ಇಬ್ಬರು ಲೆಜೆಂಟರಿ ನಟರು ಒಂದೇ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳಲಿರುವುದು ಗ್ರೇಟ್ ಎನ್ನಬೇಕು. ಈ ಮೂವರು ದಿಗ್ಗಜರು ಬರೋಬ್ಬರಿ 32 ವರ್ಷಗಳ ಬಳಿಕ ತೆರೆಯ ಮೇಲೆ ಒಟ್ಟಿಗೆ ಮತ್ತೆ ಮೋಡಿ ಮಾಡಲಿದ್ದಾರೆ. ಈ ಮೊದಲು ಈ ಮೂವರು ನಟರನ್ನು ಬಾಲಿವುಡ್ ಸಿನಿಮಾ 'ಗಿರಫ್ತಾರ್' ನಲ್ಲಿ ಒಟ್ಟಿಗೇ ನೋಡಲಾಗಿತ್ತು. 

ಲಕ್ಷಣ ಮುಗಿದ ಕ್ಷಣಗಳು; ಕಲಾವಿದರ ಕಲರ್‌ಫುಲ್ ಎಕ್ಸ್‌ಪ್ರೆಶನ್ ಝಲಕ್‌ ಹೇಗಿದೆ ನೋಡಿ..!

ಒಟ್ಟಿನಲ್ಲಿ, ಸಿನಿಮಾ ಇಂಡಸ್ಟ್ರಿಗೆ ನಿನ್ನೆ ಮೊನ್ನೆ ಬಂದ ಹೀರೋಗಳೆಲ್ಲ ಮನಸ್ತಾಪ ಮಾಡಿಕೊಂಡು, ಕಿತ್ತಾಡಿಕೊಂಡು, ಪರಸ್ಪರ ಟಾಂಗ್ ಕೊಟ್ಟುಕೊಂಡು ಬೇರೆಬೇರೆಯಾಗಿ ನಟಿಸುತ್ತಿರುವಾಗ, ಈ ಹಿರಿಯ ಲೆಜೆಂಡರಿ ಸ್ಟಾರ್ ನಟರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸುವ ಜತೆಗೆ, ಕಿರಿಯರಿಗೆ ಒಗ್ಗಟ್ಟಿನ ಪಾಠ ಮಾಡುವಂತಿದ್ದಾರೆ. 

Follow Us:
Download App:
  • android
  • ios