ಬಿಗ್ ಬಾಸ್‌ನ ಈ ಹಿಂದಿನ ಎಲ್ಲಾ ಸೀಸನ್‌ಗಳನ್ನು ‘ಮೇನ್ ಪಿಲ್ಲರ್’ ಎಂಬಂತೆ ನಡೆಸಿಕೊಟ್ಟಿದ್ದ ಕಲರ್ಸ್ ವಾಹಿನಿಯ ಆಗಿನ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಈ ಬಾರಿ ‘ಮಿಸ್’ಆಗಿದ್ದಾರೆ. ಈ ಬಗ್ಗೆ ಈಗಾಗಲೇ ಕನ್ನಡನಾಡಿನ ಮನೆಮನೆಗಳಲ್ಲಿ ಚರ್ಚೆ ನಡೆಯುತ್ತಿದೆ.

'ಬಿಗ್ ಬಾಸ್ ಕನ್ನಡ ಸೀಸನ್ 10' ಶುರುವಾಗಲು ಇನ್ನು ಎರಡೇ ದಿನ ಬಾಕಿ! ಅಕ್ಟೋಬರ್ 08, 2023 ರ ಸಾಯಂಕಾಲ 6.00 ಗಂಟೆಗೆ, ಪ್ರೀಮಿಯರ್ ಶೋ ಮೂಲಕ ಶುರುವಾಗುವ ಬಿಗ್ ಬಾಸ್, ಮಾರನೆಯ ದಿನದಿಂದ (ಸೋಮವಾರದಿಂದ ಶುಕ್ರವಾರ, ರಾತ್ರಿ 9.30 ರಿಂದ 11.00 ಗಂಟೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.30 ರಿಂದ 10.30, ಬರೋಬ್ಬರಿ ೧೦೦ ದಿನಗಳವರೆಗೆ ನಿರಂತರ ಪ್ರಸಾರ ಕಾಣಲಿದೆ. 

Add Asianetnews Kannada as a Preferred SourcegooglePreferred

ಬಿಗ್ ಬಾಸ್ ಶುರುವಾಗುವ ಮೊದಲು ಹಲವು ಹಂತಗಳು ಇರುವುದು ಗೊತ್ತೇ ಇದೆ. ಬಿಗ್ ಬಾಸ್ ಶುರುವಾಗಲಿದೆ ಎಂಬ ಸುದ್ದಿ ಹೊರಬಿದ್ದ ಬಳಿಕ ಅದಕ್ಕೊಂದು ಅಧಿಕೃತ ಟೀಸರ್, ಬಳಿಕ ಡೇಟ್ ಅನೌನ್ಸ್ಮೆಂಟ್. ಒಂದು ಸುಮುಹೂರ್ತದಲ್ಲಿ ಪ್ರೆಸ್‌ಮೀಟ್, ಈ ಮೂಲಕ ಈ ಸೀಸನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮಾಧ್ಯಮಗಳ (ಪ್ರೆಸ್‌ಮೀಟ್) ಮೂಲಕ ನೀಡುವುದು. ಇತ್ತೀಚೆಗೆ ಈ ಶೋವನ್ನು ಕಲರ್ಸ ಕನ್ನಡವೇ ನಡೆಸಿಕೊಂಡು ಬರುತ್ತಿದೆ. ಹೀಗಾಗಿ ಈಗ ಇದು ಕಲರ್ಸ ಕನ್ನಡದ ಬಿಗ್ ಬಾಸ್. ಈ ಎಲ್ಲದರ ನಡುವೆ ಈ ಸೀಸನ್‌ನಲ್ಲಿ ಕೇಳಿ ಬಾರದಿರುವ ಹೆಸರು 'ಪರಮೇಶ್ವರ್ ಗುಂಡ್ಕಲ್!'

ಹೌದು, ಬಿಗ್ ಬಾಸ್‌ನ ಈ ಹಿಂದಿನ ಎಲ್ಲಾ ಸೀಸನ್‌ಗಳನ್ನು ‘ಮೇನ್ ಪಿಲ್ಲರ್’ ಎಂಬಂತೆ ನಡೆಸಿಕೊಟ್ಟಿದ್ದ ಕಲರ್ಸ್ ವಾಹಿನಿಯ ಆಗಿನ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಈ ಬಾರಿ ‘ಮಿಸ್’ಆಗಿದ್ದಾರೆ. ಈ ಬಗ್ಗೆ ಈಗಾಗಲೇ ಕನ್ನಡನಾಡಿನ ಮನೆಮನೆಗಳಲ್ಲಿ ಚರ್ಚೆ ನಡೆಯುತ್ತಿದೆ. ಕಾರಣ, ಹಿಂದಿನ ಶೋಗಳ ಪ್ರೆಸ್‌ಮೀಟ್ ಹಾಗೂ ಕಲರ್ಸ್ ವಾಹಿನಿಯ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳ ಮೂಲಕ ಮಾತ್ರವಲ್ಲದೇ ತಮ್ಮ ಸ್ವಂತ ಅಕೌಂಟ್‌ಗಳ ಮೂಲಕವೂ ಪರಮೇಶ್ವರ್ ಗುಂಡ್ಕಲ್ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುತ್ತಿದ್ದರು. ಇದನ್ನು ಕಿರುತೆರೆ ವೀಕ್ಷಕವರ್ಗ ಹಾಗೂ ಬಿಗ್ ಬಾಸ್ ಪ್ರಿಯರು ಗಮನಿಸಿದ್ದರು. ಆದರೆ ಈ ಶೋದಲ್ಲಿ ಅವರು ಪ್ರೆಸ್‌ಮೀಟ್ ಅಥವಾ ಬಿಗ್ ಬಾಸ್ ಸುದ್ದಿಯಲ್ಲಿ ಎಲ್ಲೂ ಕಾಣಿಸುತ್ತಿಲ್ಲ. ಇದಕ್ಕಾಗಿ ನಡೆಯುತ್ತಿದೆ ಚರ್ಚೆ, ಇನ್ನೇನಿಲ್ಲ. 

ಲಕ್ಷಣ ಮುಗಿದ ಕ್ಷಣಗಳು; ಕಲಾವಿದರ ಕಲರ್‌ಫುಲ್ ಎಕ್ಸ್‌ಪ್ರೆಶನ್ ಝಲಕ್‌ ಹೇಗಿದೆ ನೋಡಿ..!

ಸದ್ಯ ‘ಜಿಯೋ ಸ್ಟೂಡಿಯೋಸ್’ನಲ್ಲಿ ಕೆಲಸ ಮಾಡುತ್ತಿರುವ ಪರಮೇಶ್ವರ್ ಗುಂಡ್ಕಲ್ ಸಹಜವಾಗಿಯೇ ಬಿಗ್ ಬಾಸ್ ಕೆಲಸದಲ್ಲಿ ಇಲ್ಲ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಸೀಸನ್-10 ಬೇರೆಯವರ ಜವಾಬ್ದಾರಿಯಲ್ಲಿ ನಡೆಯುತ್ತಿದೆ. ಹೊಸ ಮನೆ, ಹೊಸ ಮನಸ್ಸಿನ 16 ಸ್ಪರ್ಧಿಗಳ ಮೂಲಕ ನಡೆಯಲಿರುವ ಈ ಬಾರಿಯ ಬಿಗ್ ಬಾಸ್‌ನಲ್ಲಿ, ಹೊಸತನವನ್ನು ಕೊಡುವ ಬಗ್ಗೆ ಬಿಗ್ ಬಾಸ್ ಟೀಮ್ ಹೇಳಿಕೊಂಡಿದೆ. ಫಲಿತಾಂಶಕ್ಕಾಗಿ ಸ್ವಲ್ಪ ಟೈಮ್ ಕಾಯಬೇಕಾಗಿದೆ ಅಷ್ಟೇ.

ಊಟದ ಬಂಡಿ ಶುರು ಮಾಡಿದ ಪುಟ್ಟಕ್ಕ: ಮಗ ಮನೆ ಬಿಟ್ಟು ಹೊರಡಲು ಕಾರಣವೇನು?