ರಾಜಮೌಳಿ ನಿರ್ದೇಶನದಲ್ಲಿ ಕೊರೋನಾ ಕರ್ತವ್ಯದಲ್ಲಿರೋ ಪೊಲೀಸರ ಕುರಿತ ಶಾರ್ಟ್ ಫಿಲ್ಮ್
- ಕೊರೋನಾ ಮಧ್ಯೆ ಅವಿರತವಾಗಿ ಶ್ರಮಿಸುತ್ತಿರುವ ಪೊಲೀಸರು
- ಕೊರೋನಾ ವಿರುದ್ಧ ಹೋರಾಡುತ್ತಿರೋ ಪೊಲೀಸರ ಕುರಿತು ರಾಜಮೌಳಿ ಸಿನಿಮಾ
ಎಸ್.ಎಸ್.ರಾಜಮೌಳಿ ಮ್ಯಾಜಿಕ್ ಅನ್ನು ಸ್ಕ್ರೀನ್ ಮೇಲೆ ವೀಕ್ಷಿಸಲು ಕಾಯುತ್ತಿರುವ ಸಮಯದಲ್ಲಿ, ಕೊರೋನಾ ಕಷ್ಟದ ಸಂದರ್ಭ ಕೆಲಸ ಮಾಡುವ ಪೊಲೀಸರ ಮೇಲೆ ಆಧಾರಿತ ಕಿರುಚಿತ್ರವೊಂದನ್ನು ನಿರ್ದೇಶಿಸಲು ನಿರ್ದೇಶಕರು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.
ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಕೊರೋನಾ ಸಮಯದಲ್ಲಿ ಪೊಲೀಸ್ ಇಲಾಖೆ ಮಾಡಿದ ಪ್ರಯತ್ನವನ್ನು 19 ನಿಮಿಷಗಳ ಕಿರುಚಿತ್ರದಲ್ಲಿ ತೋರಿಸಲಾಗುತ್ತದೆ ಎನ್ನಲಾಗಿದೆ. RRRಗಾಗಿ ಮುಂದಿನ ವೇಳಾಪಟ್ಟಿಯನ್ನು ಪ್ರಾರಂಭಿಸುವ ಮೊದಲು ನಿರ್ದೇಶಕರು ಚಿತ್ರೀಕರಣವನ್ನು ಮುಗಿಸುತ್ತಾರೆ ಎಂಬುದು ಸದ್ಯ ಕೇಳಿಬರುತ್ತಿರುವ ಮಾತು.
ಕಪ್ಪು ಲಿಪ್‌ಸ್ಟಿಕ್ ಹಚ್ಚಿದ ಶ್ರುತಿಯನ್ನು ಮಾಟಗಾತಿ ಎಂದ ನೆಟ್ಟಿಗರು
ನಿರ್ದೇಶಕರು ಈಗಾಗಲೇ ತೆಲಂಗಾಣ ಪೊಲೀಸರನ್ನು ಸಂಪರ್ಕಿಸಿ ಅವರೊಂದಿಗೆ ಕಿರುಚಿತ್ರದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಎಸ್ಎಸ್ ರಾಜಮೌಳಿ ಪ್ರಸ್ತುತ RRR ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಐತಿಹಾಸಿಕ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಕೊಮರಾಮ್ ಭೀಮ್ ಪಾತ್ರವನ್ನು ನಿರ್ವಹಿಸಲಿದ್ದು, ರಾಮ್ ಚರಣ್ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಸಿನಿಮಾ ಸ್ವತಂತ್ರ ಪೂರ್ವ ಯುಗದ ಇಬ್ಬರು ಪ್ರಸಿದ್ಧ ಕ್ರಾಂತಿಕಾರಿಗಳನ್ನು ಆಧರಿಸಿದೆ. ಪ್ರಮುಖ ನಟರಲ್ಲದೆ, ಈ ಚಿತ್ರದಲ್ಲಿ ಅಂತರರಾಷ್ಟ್ರೀಯ ತಾರೆಗಳಾದ ಒಲಿವಿಯಾ ಮೋರಿಸ್, ರೇ ಸ್ಟೀವನ್ಸನ್ ಮತ್ತು ಅಲಿಸನ್ ಡೂಡಿ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಇದನ್ನು ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ.