ಹೀರೋ ಆದ್ರಾ ರಾಜಮೌಳಿ? ಸ್ಟೈಲಿಶ್ ಆಗಿ ಮಿಂಚಿದ RRR ನಿರ್ದೇಶಕನ ಹೊಸ ವಿಡಿಯೋ ವೈರಲ್
ಎಸ್ ಎಸ್ ರಾಜಮೌಳಿ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ವೈರಲ್ ವಿಡಿಯೋ ನೋಡಿ ಅಭಿಮಾನಿಗಳು ಹೀರೋ ಆದ ಆರ್ ಆರ್ ಆರ್ ನಿರ್ದೇಶಕ ಎಂದು ಹೇಳುತ್ತಿದ್ದಾರೆ.
ಎಸ್ ಎಸ್ ರಾಜಮೌಳಿ ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ರಾಜಮೌಳಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ರಾಜಮೌಳಿ ನಿರ್ದೇಶನದಲ್ಲಿ ಬಂದ 12 ಸಿನಿಮಾಗಳು ಸೂಪರ್ ಹಿಟ್. ಬಾಹುಬಲಿ ಬಳಿಕ ರಾಜಮೌಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದರು. ಆರ್ ಆರ್ ಆರ್ ಸಿನಿಮಾ ಮೂಲಕ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಎತ್ತಿ ಹಿಡಿದರು. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಾಜಮೌಳಿ ಇದೀಗ ಹೊಸ ಲುಕ್‌ನಲ್ಲಿ ಮಿಂಚಿದ್ದಾರೆ. ನಿರ್ದೇಶಕ ರಾಜಮೌಳಿ ಈಗ ಹೀರೋ ಆದ್ರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.
ಸೂಟ್ ಧರಿಸಿ ಸಖತ್ ಸ್ಟೈಲಿಶ್ ಆಗಿ ರಾಜಮೌಳಿ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ಹೊಸ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿರುವ ಕಾಣಿಸುತ್ತಿರುವ ರಾಜಮೌಳಿ ಅರಮನೆಯಿಂದ ಹೊರ ಬರುತ್ತಿದ್ದಾರೆ. ಕೈಯಲ್ಲಿ ಮೊಬೈಲ್ ಹಿಡಿದಿದ್ದಾರೆ. ಈ ವಿಡಿಯೋ ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ರಾಜಮೌಳಿ ದಿಢೀರ್ ಅಂತ ಲುಕ್ ಬದಲಾಯಿಸಿಕೊಂಡಿದ್ದೇಕೆ? ಜಾಹೀರಾತಿಗಾಗಿ. ಹೌದು ರಾಜಮೌಳಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಸಿದ್ಧ ಮೊಬೈಲ್ ಕಂಪನಿಯ ಜಾಹೀರಾತು ಎನ್ನಲಾಗಿದೆ. ಹಾಗಾಗಿ ಸೂಟ್ ಧರಿಸಿ ಕೈಯಲ್ಲಿ ಮೊಬೈಲ್ ಹಿಡಿದು ಮೌಳಿ ಕಾಣಿಸಿಕೊಂಡಿದ್ದಾರೆ.
'ಬಾಹುಬಲಿ' ಸಿನಿಮಾಗೆ ರಾಜಮೌಳಿ ಮಾಡಿದ ಸಾಲವೆಷ್ಟು? ಬಹಿರಂಗ ಪಡಿಸಿದ ರಾಣಾ ದಗ್ಗುಬಾಟಿ
ನಿರ್ದೇಶಕರಾಗಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿರುವ ಮೌಳಿ ಜಾಹೀರಾತು ಕ್ಷೇತ್ರದಲ್ಲೂ ಗುರುತಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ರಾಜಮೌಳಿ ಈಗ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಸಿಕ್ಕಾಪಟ್ಟೆ ಕ್ರೇಸ್ ಇರುವ ಸ್ಟಾರ್. ಹಾಗಾಗಿ ಜಾಹೀರಾತು ಕಂಪನಿಗಳು ಸಹ ಜಕ್ಕಣ್ಣನ ಹಿಂದೆ ಬಿದ್ದಿವೆ. ಇದೀಗ ರಾಜಮೌಳಿ ಒಪ್ಪೋ ಸಂಸ್ಥೆ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಮೌಳಿ ಭಾರೀ ಮೊತ್ತದ ಸಂಭಾವನೆ ಪಡೆದಿದ್ದಾರೆ. ಈ ಜಾಹೀರಾತಿನಲ್ಲಿ ನಟಿಸಲು ರಾಜಮೌಳಿ ಭಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತ ಕೇಳಿ ಬರುತ್ತಿದೆ.
ಆಸ್ಕರ್ ಗೆದ್ದ ಬಳಿಕ ಉಕ್ರೇನ್‌ಗೆ ಧನ್ಯವಾದ ತಿಳಿಸಿ ರಾಜಮೌಳಿ ಹೇಳಿದ್ದೇನು?
ರಾಜಮೌಳಿ ಕೊನೆಯದಾಗಿ ಆರ್ ಆರ್ ಆರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಸಿನಿಮಾ ಬಳಿಕ ಮೌಳಿ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ತೆಲುಗು ಸ್ಟಾರ್ ಮಹೇಶ್ ಬಾಬು ಜೊತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ. ಆಕ್ಷನ್ ಅಡ್ವೆಂಚರ್ ಆಧರಿತ ಸಿನಿಮಾ ಇದಾಗಿದೆ. ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದು ದೊಡ್ಡ ಮಟ್ಟದಲ್ಲಿ ಸಿನಿಮಾ ಮೂಡಿ ಬರಲಿದೆ. ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.