'ಬಾಹುಬಲಿ' ಸಿನಿಮಾಗೆ ರಾಜಮೌಳಿ ಮಾಡಿದ ಸಾಲವೆಷ್ಟು? ಬಹಿರಂಗ ಪಡಿಸಿದ ರಾಣಾ ದಗ್ಗುಬಾಟಿ
'ಬಾಹುಬಲಿ' ಸಿನಿಮಾಗಾಗಿ ನಿರ್ದೇಶಕ ರಾಜಮೌಳಿ ಕೋಟಿಗಟ್ಟಲೆ ಸಾಲ ಮಾಡಿದ್ರು ಎಂದು ರಾಣಾ ದಗ್ಗುಬಾಟಿ ಬಹಿರಂಗ ಪಡಿಸಿದ್ದಾರೆ.
ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕ, ಬಾಹುಬಲಿ, ಆರ್ ಆರ್ ಆರ್ ಅಂತಹ ಜಗತ್ತೆ ಮೆಚ್ಚುವ ಸಿನಿಮಾಗಳನ್ನು ನೀಡಿದ ರಾಜಮೌಳಿ 400 ರೂಪಾಯಿ ಕೋಟಿ ಸಾಲು ಮಾಡಿದ್ದರು ಎನ್ನುವ ಸುದ್ದು ಈಗ ವೈರಲ್ ಆಗಿದೆ. ಈ ಬಗ್ಗೆ ಬಾಹುಬಲಿ ಸ್ಟಾರ್ ರಾಣಾ ದಗ್ಗುಬಾಟಿ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ರಾಜಮೌಳಿ ಸಾಲ ಪಡೆದಿದ್ದು ತೆಲುಗು ಸಿನಿಮಾರಂಗದ ಬ್ಲಾಕ್‌ಬಸ್ಟರ್ ಚಲನಚಿತ್ರ ‘ಬಾಹುಬಲಿ’ ನಿರ್ಮಾಣಕ್ಕಾಗಿ. ಹೌದು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರು 400 ಕೋಟಿ ರೂ. ಹಣವನ್ನು ಸಾಲ ಮಾಡಿದ್ದರು. ಈ ಪೈಕಿ ಮೊದಲ ಭಾಗದ ಚಿತ್ರೀಕರಣಕ್ಕೆ ಮಾಡಲಾಗಿದ್ದ 180 ಕೋಟಿ ರು. ಸಾಲಕ್ಕೆ ಬಡ್ಡಿದರ ಶೇ.24ರಷ್ಟಿತ್ತು ಎಂದು ನಟ ರಾಣಾ ದಗ್ಗುಬಾಟಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಸಿನಿಮಾಗಳನ್ನು ನಿರ್ಮಾಣ ಮಾಡುವುದು ಅತಿ ದುಬಾರಿ ಕೆಲಸ. ಇದಕ್ಕಾಗಿ ಹಣ ಎಲ್ಲಿಂದ ಬರಬೇಕು? ನಿರ್ಮಾಪಕರು ಅವರ ಮನೆಯಿಂದ ತರಬೇಕು. ಇಲ್ಲವೇ ಆಸ್ತಿಯನ್ನು ಮಾರಿ ಹಣ ತರಬೇಕು. ಅದೇ ರೀತಿ ಬಾಹುಬಲಿ-1 ಸಿನಿಮಾ ನಿರ್ಮಾಣ ಮಾಡಲು ಅವರ ನಿರ್ಮಾತೃಗಳು ಶೇ.24ರಷ್ಟುಬಡ್ಡಿದರದಲ್ಲಿ 180 ಕೋಟಿ ರೂ. ಸಾಲ ಮಾಡಿದ್ದರು. 2 ಭಾಗಗಳ ನಿರ್ಮಾಣಕ್ಕಾಗಿ ಸುಮಾರು 300ರಿಂದ 400 ಕೋಟಿ ರು. ಸಾಲ ಮಾಡಲಾಗಿತ್ತು’ ಎಂದರು.
ಆಸ್ಕರ್ ಪ್ರಚಾರಕ್ಕೆ RRR ತಂಡ ಖರ್ಚು ಮಾಡಿದ್ದೆಷ್ಟು? ಕೊನೆಗೂ ಬಹಿರಂಗ ಪಡಿಸಿದ ರಾಜಮೌಳಿ ಪುತ್ರ
‘ಒಂದು ವೇಳೆ ಬಾಹುಬಲಿ ಸಿನಿಮಾ ನಿರೀಕ್ಷಿತ ಪ್ರದರ್ಶನ ಕಾಣದೇ ಹೋಗಿದ್ದರೆ ಆ ನಷ್ಟವನ್ನು ತುಂಬಿಕೊಳ್ಳುವುದೇ ಕಷ್ಟವಾಗುತ್ತಿತ್ತು. ಮೊದಲ ಭಾಗದ ಚಿತ್ರೀಕರಣ ಸಮಯದಲ್ಲೇ 2ನೇ ಭಾಗದ ಕೆಲವು ದೃಶ್ಯಗಳನ್ನು ನಾವು ಚಿತ್ರೀಕರಿಸಿದ್ದೆವು. ಆದರೂ ಮೊದಲ ಭಾಗಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದ 2ನೇ ಭಾಗವನ್ನು ಚಿತ್ರೀಕರಿಸಲಾಯಿತು’ ಎಂದು ಅವರು ಹೇಳಿದರು.
ವಿಶೇಷ ಬೇಡಿಕೆ ಇಟ್ಟ ಉದ್ಯಮಿ ಆನಂದ್ ಮಹೀಂದ್ರಾಗೆ RRR ನಿರ್ದೇಶಕ ರಾಜಮೌಳಿ ಹೇಳಿದ್ದೇನು?
ಬಾಹುಬಲಿ ಸಿನಿಮಾ ರಿಲೀಸ್ ಆಗಿ ಇತಿಹಾಸ ಸೃಷ್ಟಿಸಿತು. ಗಡಿಗೂ ಮೀರಿ ಸಿನಿಮಾ ಸದ್ದು ಮಾಡಿತು. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆಲುಗು ಸಿನಿಮಾ ಸುದ್ದಿಯಾಯಿತು. ಮೊದಲ ಭಾಗದ ಸಕ್ಸಸ್ ಎರಡನೇ ಭಾಗದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತು. ಬಾಹುಬಲಿ-1 ಸಿನಿಮಾ ಸುಮಾರು 500 ಕೋಟಿ ರೂಪಾಯಿ ಬಾಚಿಕೊಂಡರೆ ಬಾಹುಬಲಿ-2 ಬರೋಬ್ಬರಿ 1,700 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಲಿಸ್ಟ್ ಸೇರಿಕೊಂಡಿತು. ನಂತರ ಎಸ್ ಎಸ್ ರಾಜಮೌಳಿ ಆರ್ ಆರ್ ಆರ್ ಸಿನಿಮಾ ಮೂಲಕ ಮತ್ತೆ ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಸಿದರು. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಬೀಗಿದರು.