ಆಸ್ಕರ್ ಗೆದ್ದ ಬಳಿಕ ಉಕ್ರೇನ್‌ಗೆ ಧನ್ಯವಾದ ತಿಳಿಸಿ ರಾಜಮೌಳಿ ಹೇಳಿದ್ದೇನು?
ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ನಿರ್ದೇಶಕ ರಾಜಮೌಳಿ ಉಕ್ರೇನ್ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.
'ಆಸ್ಕರ್ 2023' ಭಾರತೀಯರಿಗೆ ತುಂಬಾ ವಿಶೇಷವಾಗಿತ್ತು. 95ನೇ ಅಕಾಡೆಮಿ ಅವಾರ್ಡ್ ಸಮಾರಂಭದಸಲ್ಲಿ ಭಾರತ ಎರಡು ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಆರ್ ಆರ್ ಆರ್ ಸಿನಿಮಾದ 'ನಾಟು ನಾಟು..' ಹಾಡು ಮತ್ತು ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ 'ದಿ ಎಲಿಫೆಂಡ್ ವಿಸ್ಪರ್ಸ್' ಪ್ರಶಸ್ತಿ ಗೆದ್ದುಕೊಂಡಿದೆ. ನಾಟು ನಾಟು...ಹಾಡಿಗೆ ಆಸ್ಕರ್ ಗರಿ ಸಿಗುತ್ತಿದ್ದಂತೆ ಆರ್ ಆರ್ ಆರ್ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು. ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆರ್ ಆರ್ ಆರ್ ಸಿನಿಮಾಗೆ ಪ್ರಶಸ್ತಿ ಘೋಷಿಸುತ್ತಿದ್ದಂತೆ ನಿರ್ದೇಶಕ ಎಸ್‌ಎಸ್ ರಾಜಮೌಳಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹಾಗೂ ಇಡೀ ತಂಡ ಸಂತೋಷ, ಕಣ್ಣೀರು ಮತ್ತು ಅಪ್ಪುಗೆಯಿಂದ ಸಂಭ್ರಮಿಸಿದರು.
ಸಿನಿಮಾತಂಡ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿ ಸಂತಸ ಹಂಚಿಕೊಂಡರು. ರಾಜಮೌಳಿ ಕೇವಲ 'ಜೈ ಹಿಂದ್' ಎಂದು ಪೋಸ್ಟ್ ಮಾಡಿದ್ದರು. ಬಳಿಕ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜಮೌಳಿ ನಾಟು ನಾಟು ಗ್ಲೋಬಲ್ ಸೆನ್ಸೇಷನ್ ಆದ ವಿಚಾರವನ್ನು ಡಿಕೋಡ್ ಮಾಡಿದರು. ಜೊತೆಗೆ ಉಕ್ರೇನ್ ತಂಡಕ್ಕೆ ಧನ್ಯವಾದ ತಿಳಿಸುವುದನ್ನು ಮರೆತಿಲ್ಲ.
ಜೈ ಹಿಂದ್; ಆಸ್ಕರ್ ಗೆದ್ದ ಬಳಿಕ ನಿರ್ದೇಶಕ ರಾಜಮೌಳಿ ಫಸ್ಟ್ ರಿಯಾಕ್ಷನ್
RRR ನಿರ್ದೇಶಕ ವ್ಯಾನಿಟಿ ಫೇರ್ ಜೊತೆ ಮಾತನಾಡಿ, 'ನಾವು ನಾಟು ನಾಟು ಬಗ್ಗೆ ಮಾತನಾಡುವಾಗ ನನಗೆ ಮೊದಲು ನೆನಪಾಗುವುದು ಸ್ಥಳ. ಇದನ್ನು ನಾವು ಕ್ವಿವ್‌ನಲ್ಲಿರುವ ಮಾರಿನ್ಸ್ಕಿ ಅರಮನೆಯಲ್ಲಿ(ಅಧ್ಯಕ್ಷೀಯ ಅರಮನೆ) ಚಿತ್ರೀಕರಿಸಲಾಗಿದೆ. ಇದು ಭಾರತದಲ್ಲಿಯೇ ನಡೆಯಬೇಕಿತ್ತು, ಆದರೆ ಮಳೆಗಾಲದ ಸಮಯವಾಗಿತ್ತು, ನಾವು ಸ್ಥಳವನ್ನು ಹುಡುಕಲು ಪ್ರಯತ್ನಿಸುತ್ತಿದ್ದೆವು ಆಗ ನಾವು ಮಾರಿನ್ಸ್ಕಿ ಅರಮನೆ ಕಂಡುಕೊಂಡೆವು. ನಾನು ಅದನ್ನು ನಿಜವಾಗಿಯೂ ಇಷ್ಟಪಟ್ಟೆ. ಇದು ಅಧ್ಯಕ್ಷೀಯ ಅರಮನೆ ಎಂದು ಅವರು ನನಗೆ ಹೇಳಿದಾಗ, ನಾನು ಯೋಚಿಸಿದೆ, 'ಓಹ್, ಬಹುಶಃ ನಾನು ಬೇರೆ ಸ್ಥಳವನ್ನು ಹುಡುಕಬೇಕಾಗಿದೆ ಎಂದೆ. ಆದರೆ ಅವರು ಹೇಳಿದರು , 'ಇದು ಉಕ್ರೇನ್, ನೀವು ಇಲ್ಲೇ ಕೆಲಸವನ್ನು ಪೂರ್ಣಗೊಳಿಸಬಹುದು ಎಂದರು. ಉಕ್ರೇನಿಯನ್ ತಂಡಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ' ಎಂದು ರಾಜಮೌಳಿ ಹೇಳಿದರು.
Oscar 2023; ಆಸ್ಕರ್ ಗೆದ್ದ ಬಳಿಕ ರಾಮ್ ಚರಣ್, ಜೂ.ಎನ್‌ಟಿಆರ್ ಫಸ್ಟ್ ರಿಯಾಕ್ಷನ್ ವಿಡಿಯೋ ವೈರಲ್
'ಅರಮನೆಯ ಬಣ್ಣ ಮತ್ತು ಡಾನ್ಸರ್‌ಗಳಿಗೆ ಅಲ್ಲಿನ ಗ್ರೌಂಡ್ ಸರಿಯಾಗಿತ್ತು. ನಾವು ಕೈವ್ ಬಗ್ಗೆ ಮಾತನಾಡುತ್ತಿದ್ದೇವೆ. ಈ ಹಾಡಿನ ಅದ್ಭುತ ವಿಷಯ ಎಂದರೆ ಬ್ಯಾಗ್ರೌಂಡ್ ಡಾನ್ಸರ್, ಇದನ್ನು ಹೆಚ್ಚಾಗಿ ಯಾರು ಗಮನಿಸುವುದೇ ಇಲ್ಲ' ಎಂದು ಹೇಳಿದರು. ಉಕ್ರೇನ್ ಡಾನ್ಸರ್ ಹೇಗೆ ತಮ್ಮ ಪಾತ್ರವನ್ನು ಸುಂದರವಾಗಿ ಪೂರ್ಣಗೊಳಿಸಿದರು ಎನ್ನುವ ಬಗ್ಗೆಯೂ ರಾಜಮೌಳಿ ಮಾತನಾಡಿದರು. 'ಈ ಇಬ್ಬರು ಭಾರತೀಯ ವ್ಯಕ್ತಿಗಳು ತಮ್ಮ ದೃಶ್ಯವನ್ನು ಮಾಡುವಾಗ ಹೇಗೆ ಆರಾಮದಾಯಕವಾಗಿಲ್ಲ ಎಂಬುದನ್ನು ನೀವು ನೋಡಬಹುದು. ಆದರೆ ಆ ಹುಡುಗಿಯರು ನಿಜವಾಗಿಯೂ ಡಾನ್ಸ್ ಆನಂದಿಸಿದ್ದಾರೆ. ನೀವು ಅವರೆಲ್ಲರನ್ನೂ ನೋಡಬಹುದು. ಅವರು ನೃತ್ಯ ಮಾಡಬೇಕಾದಾಗ ಅವರ ಸರದಿ ಬರುವ ಮೊದಲು ಅವರು ಸಂಪೂರ್ಣವಾಗಿ ದೃಶ್ಯವನ್ನು ಪ್ರದರ್ಶಿಸುತ್ತಾರೆ. ಉಕ್ರೇನ್‌ನಲ್ಲಿನ ಡಾನ್ಸರ್ಸ್ ವೃತ್ತಿಪರತೆ ಮಟ್ಟ ನನಗೆ ನಿಜವಾಗಿಯೂ ಆಶ್ಚರ್ಯವಾಯಿತು. ಅವರೊಂದಿಗೆ ಕೆಲಸ ಮಾಡಿರುವುದು ನಿಜಕ್ಕೂ ತಂಬಾ ಇಷ್ಟವಾಯಿತು' ಎಂದು ಹೇಳಿದರು.