Asianet Suvarna News Asianet Suvarna News

ರಾಜಮೌಳಿ ಜೊತೆ ಯಶ್ ಸಿನಿಮಾ; 'KGF 2' ಹೀರೋ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಯಶ್ ಖ್ಯಾತ ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಸುಳ್ಳು ಸುದ್ದಿ ಎಂದಿರುವ ಯಶ್ ಒಂದು ವೇಳೆ ಕೆಲಸ ಮಾಡುವ ಅವಕಾಶ ಸಿಕ್ಕರೆ ಯಾಕೆ ಬಿಡಬೇಕು ಎಂದು ಹೇಳಿದ್ದಾರೆ. 

 

kgf 2 actor yash talks about movie with ss rajamouli
Author
Bengaluru, First Published Apr 12, 2022, 4:11 PM IST

ರಾಕಿಂಗ್ ಸ್ಟಾರ್ ಯಶ್(Yash) ಸದ್ಯ ಕೆಜಿಎಫ್2(KGF2) ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಕೆಜಿಎಫ-2 ಏಪ್ರಿಲ್ 14ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಯಶ್ ಮತ್ತು ತಂಡ ದೇಶದಾದ್ಯಂತ ಪ್ರಮೋಷನ್ ನಲ್ಲಿ ತೊಡಗಿಕೊಂಡಿದ್ದು ಭಾರತದ ಬಹುತೇಕ ಭಾಗಗಳಿಗೆ ಭೇಟಿ ನೀಡಿದ್ದಾರೆ. ಕೆಜಿಎಫ್ ಮೊದಲ ಭಾಗ ನೋಡಿದ ಎಲ್ಲರೂ ಚಾಪ್ಟರ್ 2 ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಬಳಿಕ ಯಶ್ ಮಾರುಕಟ್ಟೆ ದೊಡ್ಡದಾಗಿದೆ. ದೊಡ್ಡ ದೊಡ್ಡ ನಿರ್ದೇಶಕರು ಯಶ್ ಜೊತೆ ಕೆಲಸ ಮಾಡಲು ಕಾಯುತ್ತಿದ್ದಾರೆ. ರಾಕಿಂಗ್ ಸ್ಟಾರ್ ಕಾಲ್ ಶೀಟ್ ಗಾಗಿ ನಿರ್ಮಾಪಕರು ಕ್ಯೂನಲ್ಲಿದ್ದಾರೆ. ಕೆಜಿಎಫ್ ಬಳಿಕ ಯಶ್ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ, ಯಾರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಅಲ್ಲದೆ ಈ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ.

ಕನ್ನಡ ನಟ ಯಶ್ ಭಾರತೀಯ ಸಿನಿಮಾರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಎಸ್ ಎಸ್ ರಾಜಮೌಳಿ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಯಶ್ ಜೊತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ, ಈ ಸಿನಿಮಾಗೆ ಖ್ಯಾತ ಬರಹಗಾರ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಕೆಜಿಎಫ್ ಹೀರೋ ಜೊತೆ ರಾಜಮೌಳಿ ಸಿನಿಮಾ ಮಾಡುವ ವಿಚಾರ ಕೇಳಿ ಯಶ್ ಅಭಿಮಾನಿಗಳು ಸಹ ಫುಲ್ ಖುಷ್ ಆಗಿದ್ದರು. ಈ ಬಗ್ಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಕೆಜಿಎಫ್-2 ಪ್ರಮೋಷನ್ ವೇಳೆ ಯಶ್ ಅವರಿಗೆ ಈ ಪ್ರಶ್ನೆ ಎದುರಾಗಿದ್ದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

RCB ಜೊತೆ ಕೈ ಜೋಡಿಸಿದ ಹೊಂಬಾಳೆ ಫಿಲ್ಮ್ಸ್, ಶುರುವಾಗಲಿದೆ ಮನರಂಜನೆಯ ಮಹಾಪರ್ವ!

ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯೆ ನೀಡಿ, 'ಇದು ಸುಳ್ಳು ಸುದ್ದಿ' ಎಂದು ಹೇಳಿದ್ದಾರೆ. ಆದರೆ ಅವರ ಜೊತೆ ಕೆಲಸ ಮಾಡುವ ಅವಕಾಶ ಮಾತ್ರ ಯಾವತ್ತು ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ. 'ಅವರು ನನ್ನ ಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಸಿನಿಮಾಗಳಲ್ಲಿ ದೃಷ್ಟಿಕೋನ ಹೊಂದಿರುವ ನಿರ್ದೇಶಕ. ಅವರ ಯಾವುದೇ ಸಿನಿಮಾಗೆ ನಾನು ಸೂಟ್ ಆಗ್ತಾನೆ ಎಂದು ಭಾವಿಸಿದರೆ ನಾನು ಯಾಕೆ ಅದನ್ನು ಮಾಡಬಾರದು?' ಎಂದು ಹೇಳಿದ್ದಾರೆ.

ಸದ್ಯಕ್ಕೆ ನಿರ್ದೇಶಕ ರಾಜಮೌಳಿ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ಒಟ್ಟಿಗೆ ಕೆಲಸ ಮಾಡುವ ಯಾವುದೇ ಯೋಜನೆ ಇಲ್ಲ. ಯಾಕೆಂದರೆ ರಾಜಮೌಳಿ ಆರ್ ಆರ್ ಆರ್ ಬಳಿಕ ಪ್ರಿನ್ಸ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ಮಹೇಶ್ ಬಾಬು ಸದ್ಯ ಸರ್ಕರು ವಾರಿ ಪಾಟ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಕಮಿಟ್ಮೆಂಟ್ ಮುಗಿದ ಬಳಿಕ ರಾಜಮೌಳಿ ಜೊತೆ ಸಿನಿಮಾ ಮಾಡವಿದ್ದಾರೆ.

KGFಗೂ ಮೊದಲು ಅಪ್ಪು ಸಿನಿಮಾ ಮಾಡ್ಬೇಕಿತ್ತು Prashanth Neel, ಅದು ಮಿಸ್ ಆಗಿ ಕೆಜಿಎಫ್‌ ಮಾಡ್ಬೇಕಾಯ್ತು!

ಇನ್ನು ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್2ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಯಶ್ ಕನ್ನಡ ನಿರ್ದೇಶಕರ ಜೊತೆಯೇ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಪ್ರಾರಂಭವಾಗಿದ್ದು ಸಂಪೂರ್ಣವಾದ ಬಳಿಕ ಬಹಿರಂಗ ಪಡಿಸುವ ಸಾಧ್ಯತೆ ಇದೆ.

Latest Videos
Follow Us:
Download App:
  • android
  • ios