ಸ್ಯಂಡಲ್ ವುಡ್ ನಟಿ ಶ್ರುತಿ ಹರಿಹರನ್ ಮತ್ತೆ ಕನ್ನಡ ಕಿರುತೆರೆ ಲೋಕಕ್ಕೆ ಮರಳಿದ್ದಾರೆ. ಕಾಮಿಡಿ ಗ್ಯಾಂಗ್ ರಿಯಾಲಿಟಿ ಶೋ ಮೂಲಕ ಶ್ರುತಿ ಮತ್ತೆ ಕಿರುತೆರೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ನಟಿ ಶ್ರುತಿ ಹರಿಹರನ್(Sruthi Hariharan ) ಕಳೆದ ಮೂರು ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಸರಿದಿದ್ದರು. ತನ್ನ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದ ನಟಿ ಶ್ರುತಿ ಹರಿಹರನ್ ಇದೀಗ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರುತಿ ನಟನೆ ಜೊತೆಗೆ ಕಿರುತೆರೆಗೂ (Small Screen) ಮರಳಿದ್ದಾರೆ. ಕಾಮಿಡಿ ಶೋ ಮೂಲಕ ಶ್ರುತಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
ಹೌದು, ಶ್ರುತಿ ಕನ್ನಡ ಕಿರುತೆರೆಯಲ್ಲಿ ಬರ್ತಿರುವ ಹೊಸ ರಿಯಾಲಿಟಿ ಶೋ ಕಾಮಿಡಿ ಗ್ಯಾಂಗ್(Comedy Gang)ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ಸುವರ್ಣ(Star Suvarna) ವಾಹಿನಿಯಲ್ಲಿ ಪ್ರಸಾರವಾಗಲಿರುವ ಕಾಮಿಡಿ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ಶ್ರುತಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಶ್ರುತಿ ಜೊತೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು(Mukhyamantri Chandru) ಮತ್ತು ಕಾಮಿಡಿ ಸ್ಟಾರ್ ಕುರಿ ಪ್ರತಾಪ್(Kuri Prathap) ಸಹ ತೀರ್ಪುಗಾರರ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ನಿರೂಪಕರಾಗಿ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಶಿವರಾಜ್ ಕೆ.ಆರ್ ಪೇಟೆ(Shivara KR Pete) ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರೀತಿ-ಸಂಬಂಧದ ಬಗ್ಗೆ ಶೃತಿ ಹರಿಹರನ್ ಹೇಳೋದೇನು?
ನಟನೆ ಮತ್ತು ಕಾಮಿಡಿ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದ್ದ ಶಿವರಾಜ್ ಕೆ ಆರ್ ಪೇಟೆ ಮೊದಲ ಬಾರಿಗೆ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇನ್ನು ಉಳಿದಂತೆ ಈ ಶೋನಲ್ಲಿ ನಯನಾ, ಹಿತೇಶ್, ಸೂರ್ಯ ಸೇರಿದಂತೆ ಅನೇಕರು ಇದ್ದಾರೆ. ಸದ್ಯ ರಿಯಾಲಿಟಿ ಶೋನ ಪ್ರೋಮೋ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಪ್ರಸಾರವಾಗಲಿದೆ. ಪ್ರೋಮೋದಲ್ಲಿ ಕಾಮಿಡಿ ಗ್ಯಾಂಗ್, 'ನಗಿಸೋಕೆ ನಾವು ರೆಡಿ...ನಗುವುದಕ್ಕೆ ನೀವು ರೆಡಿನಾ..' ಎಂದು ಹೇಳಿದ್ದಾರೆ.
ಇನ್ನು ನಟಿ ಶ್ರುತಿ ಹರಿಹರನ್ ಬಗ್ಗೆ ಹೇಳುವುದಾದರೆ ಕಿರುತೆರೆಗೆ ಎಂಟ್ರಿ ಕೊಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಡಾನ್ಸ್ ಡಾನ್ಸ್' ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಲೂಸಿಯ ಸಿನಿಮಾ ಮೂಲಕ ನಾಯಕಿಯಾಗಿ ತೆರೆಮೇಲೆ ಮಿಂಚಿದ್ದ ಶ್ರುತಿ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲತಹ ನೃತ್ಯಗಾರ್ತಿಯಾಗಿರುವ ಶ್ರುತಿ ಅವರಿಗೆ ಡಾನ್ಸ್ ಅಂದರೆ ಪಂಚ ಪ್ರಾಣ. ಇದೀಗ ಕಾಮಿಡಿ ಶೋ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.
#MeToo ಗೆ ಒಂದು ವರ್ಷ; 'ವೀ ದ ವುಮೆನ್' ಸೆಮಿನಾರ್‌ನಲ್ಲಿ ಶೃತಿ ಹರಿಹರನ್ ತಾಯಿ ಭಾವುಕ
ಸಿನಿಮಾ ವಿಚಾರಕ್ಕೆ ಬರುವುದಾದರೆ ಶ್ರುತಿ ಹರಿಹರನ್ ಕನ್ನಡದಲ್ಲಿ ಕೊನೆಯದಾಗಿ ಆದ್ಯಾ ಸಿನಿಮಾ ಮೂಲಕ ಅಭಿಮಾಮಿಗಳ ಮುಂದೆ ಬಂದಿದ್ದರು. ಇದೀಗ ಅವರ ಬಳಿ ರಕ್ಷಿತ್ ಅವರ ಪರಮ್ ವಾ ಸ್ಪಾಟ್ ಲೈಟ್ ಬ್ಯಾನರ್ ನಲ್ಲಿ ಬರ್ತಿರುವ ಸ್ಟ್ರಾಬೆರಿ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಅರ್ಜುನ್ ಲೂವಿಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರುತಿ ಅಮೃತಾ ಎನ್ನುವ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲುಗಾರ ಎನ್ನುವ ಸಿನಿಮಾವನ್ನು ಮುಗಿಸಿದ್ದಾರೆ. ನಟ ಧನಂಜಯ್ ನಟಿಸಿ ನಿರ್ಮಾಣ ಮಾಡುತ್ತಿರುವ ಹೆಡ್ ಬುಷ್ ಸಿನಿಮಾದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ಯಾಪ್ ನ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರುತಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
