ಮೀಟು ಅಭಿಯಾನಕ್ಕೆ ಒಂದು ವರ್ಷದ ಹಿನ್ನಲೆ |  ಬರ್ಕಾದತ್ ಸಾರತ್ಯ ದಲ್ಲಿ 'ವೀ ದ ವುಮೆನ್' ತಂಡದ ವತಿಯಿಂದ ಸೆಮಿನಾರ್ ಆಯೋಜನೆ  | ಸಂವಾದ ಕಾರ್ಯಕ್ರಮದಲ್ಲಿ ನಟಿ ಶ್ರುತಿಹರಿಹರನ್ ಭಾಗಿ

ಬೆಂಗಳೂರು (ನ. 04): ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿದ್ದ 'ಮೀ ಟೂ' ಅಭಿಯಾನಕ್ಕೆ ಒಂದು ವರ್ಷ ತುಂಬಿದೆ. ಈ ಹಿನ್ನಲೆಯಲ್ಲಿ ಬರ್ಕಾದತ್ ಸಾರತ್ಯ ದಲ್ಲಿ ವೀ ದ ವುಮೆನ್ ತಂಡದ ವತಿಯಿಂದ ಸೆಮಿನಾರ್ ಆಯೋಜನೆ ಮಾಡಲಾಗಿತ್ತು. ಈ ಸಂವಾದ ಕಾರ್ಯಕ್ರಮದಲ್ಲಿ ನಟಿ ಶೃತಿ ಹರಿಹರನ್, ಬರ್ಕಾ ದತ್, ಸಾಯಿ ಪಲ್ಲವಿ, ಸಾರಾ ಅಲಿಖಾನ್ ಭಾಗಿಯಾಗಿ ಅಭಿಪ್ರಾಯ ಹಂಚಿಕೊಂಡರು.

View post on Instagram

ಸಂವಾದ ಕಾರ್ಯಕ್ರಮವನ್ನು ಬೆಂಗಳೂರಿನ ಹೊಟೇಲ್ ಲಲಿತ್ ಅಶೋಕ್ ನಲ್ಲಿ ಆಯೋಜನೆ ಮಾಡಲಾಗಿತ್ತು. ವರ್ಷಗಳ ನಂತರ ಬೆಂಗಳೂರಿನಲ್ಲಿ ನಟಿ ಶ್ರುತಿ‌ಹರಿಹರನ್ ಕಾಣಿಸಿಕೊಂಡರು. ಮೀಟೂ ಆರೋಪದ‌ ನಂತರ ಆದ ಬದಲಾವಣೆಗಳು ಮತ್ತು ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಾಯಿತು. 

ಸಂವಾದದಲ್ಲಿ ಮಾತನಾಡುತ್ತಾ, ನನ್ನ ಕೈಯಲ್ಲಿ ಯಾವುದೇ ಸಿನಿಮಾ ಅವಕಾಶಗಳಿಲ್ಲ. ನಾತಿಚರಾಮಿಗೆ ನ್ಯಾಷನಲ್ ಅವಾರ್ಡ್ ಬಂದಿದ್ದು ನನಗೆ ಖುಷಿ ಕೊಟ್ಟಿದೆ. ನಾನು ಅಭಿನಯಿಸಬೇಕು ಅನ್ನುವ ಉತ್ಸಾಹ ತುಂಬಿದೆ. ನಾನು‌ ಒಂದು ವರ್ಷದಿಂದ ವೈಯಕ್ತಿಕ ಜೀವನದಲ್ಲಿ ಬ್ಯುಸಿ ಆಗಿದ್ದೇನೆ. ಮಗಳಿಗೆ ಜನ್ಮ‌ ನೀಡಿದ್ದೇನೆ ಎಂದು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

'ನಾನೇ ಗೆದ್ದೆ' ಟ್ರೋಲ್ ಮಾಡಿದವರಿಗೆ ರಶ್ಮಿಕಾ ಮಾಸ್ಟರ್ ಪಂಚ್!

ಕೆಲವೊಮ್ಮೆ ಮೀಟು ವಿಚಾರದಿಂದಾಗಿ ನೊಂದಿರೋದು ನಿಜ‌ ಎಂದ ಶ್ರುತಿ ಹರಿಹರನ್ ಹೇಳಿದರು. ಈ ವೇಳೆ ಶ್ರುತಿ ಹರಿಹರನ್ ಪರವಾಗಿ ಶ್ರುತಿ ತಾಯಿ ನಿಂತರು.