Asianet Suvarna News Asianet Suvarna News

ಡಂಕಿ ಮಾರ್ಕೆಟಿಂಗ್​ ಸರಿಯಾಗ್ತಿಲ್ಲ, ಸೂಕ್ತ ವ್ಯಕ್ತಿಯನ್ನು ಇಟ್ಕೊಳಿ ಅಂದ್ರೆ ಶಾರುಖ್​ ಹೀಗೆ ಹೇಳೋದಾ? ಫ್ಯಾನ್ಸ್​ ಸುಸ್ತು!

ಡಂಕಿ ಚಿತ್ರದ ಮಾರ್ಕೆಟಿಂಗ್​ ಸರಿಯಾಗಿ ಮಾಡುತ್ತಿಲ್ಲ, ಸೂಕ್ತ ವ್ಯಕ್ತಿಯನ್ನು ನೇಮಿಸಿಕೊಳ್ಳಿ ಎಂದು ಅಭಿಮಾನಿಯೊಬ್ಬ ಶಾರುಖ್​ಗೆ ಹೇಳಿದ್ರೆ ನಟ ಏನಂದ್ರು ಗೊತ್ತಾ? 
 

SRK Has a Hilarious Reply For Fan Who Complains About Dunkis Marketing suc
Author
First Published Jan 1, 2024, 5:13 PM IST

2023 ವರ್ಷವು ಶಾರುಖ್ ಖಾನ್‌ಗೆ ಬಹಳ ವಿಶೇಷವಾಗಿದೆ. ಅವರು ತಮ್ಮ ನಟನೆಯ ಮೂಲಕ ಮಾತ್ರ ಜನರ ಹೃದಯವನ್ನು ಆಳುತ್ತಾರೆ. ಅವರು ಜನರಿಂದ ಎಷ್ಟು ಪ್ರೀತಿಯನ್ನು ಪಡೆಯುತ್ತಾರೆ ಎಂದರೆ ಅವರ ಚಿತ್ರಗಳು ಬಿಡುಗಡೆಯಾದ ತಕ್ಷಣ ಹಿಟ್ ಲಿಸ್ಟ್‌ಗೆ ಸೇರುತ್ತವೆ.  ಪಠಾಣ್​, ಜವಾನ್​ ಯಶಸ್ಸಿನ ಬಳಿಕ ಡಂಕಿ ಚಿತ್ರ ಕೂಡ ಬ್ಲಾಕ್​ಬಸ್ಟರ್​ ಎಂದು ಸಾಬೀತಾಗಿದೆ.  'ಡಂಕಿ' ಸಿನಿಮಾ ಇದೇ 21ರಂದು ಬಿಡುಗಡೆಯಾಗಿದೆ. ಒಂದು ವಾರ ಕಳಿಯುವಷ್ಟರಲ್ಲಿಯೇ ದಾಖಲೆ ಬರೆದಿದೆ.  ದಿನದಿಂದ ದಿನಕ್ಕೆ ಈ ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್ ಹೆಚ್ಚಿಸಿಕೊಂಡು, ಇದೀಗ 300 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅದರಲ್ಲೂ ಭಾರತ ಒಂದರಲ್ಲೇ ಸಿನಿಮಾ ಭರ್ಜರಿ 150 ಕೋಟಿ ಬಾಚಿದೆ ಎನ್ನಲಾಗಿದೆ. ಸಾವಿರಾರು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಅಬ್ಬರಿಸಿತ್ತು ಡಂಕಿ. ಶಾರುಖ್ ಖಾನ್, ಹಿಂದಿನ ಪಠಾಣ್ ಮತ್ತು ಜವಾನ್ ಸಿನಿಮಾಗಳ ಮೂಲಕ 2023ರಲ್ಲಿ ಭರ್ಜರಿ ಹಿಟ್ ಕಂಡಿದ್ದರು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು. ಅದರ ಬೆನ್ನಲ್ಲೇ ಡಂಕಿ ಕೂಡ ಸಾಗಿದೆ. 

ಇದರ ನಡುವೆಯೇ ಡಂಕಿ ಚಿತ್ರ ಈಗ ಇತಿಹಾಸವೊಂದನ್ನು ಸೃಷ್ಟಿಸಿದೆ. ಅದೇನೆಂದರೆ,  ವಿಶ್ವಾದ್ಯಂತ ಪ್ರೇಕ್ಷಕರೊಂದಿಗೆ ಸರಿಯಾದ ಸ್ವರಮೇಳವನ್ನು ಹೊಂದಿರುವ ಈ ಚಿತ್ರವು ವಿದೇಶಗಳಲ್ಲಿಯೂ ಸಕತ್​ ಸೌಂಡ್​ ಮಾಡುತ್ತಿದೆ. ಯೂರೋಪ್‌ನ ಅತಿದೊಡ್ಡ ಚಿತ್ರಮಂದಿರವಾದ ಲೆ ಗ್ರ್ಯಾಂಡ್ ರೆಕ್ಸ್​ನಲ್ಲಿ ಪ್ರದರ್ಶನಗೊಂಡಿದ್ದು, ಹೀಗೆ ಪ್ರದರ್ಶನಗೊಂಡ  ಮೊದಲ ಹಿಂದಿ ಬಾಲಿವುಡ್ ಚಲನಚಿತ್ರ ಎನಿಸಿದೆ.  ಚಿತ್ರಮಂದಿರದ ಹೊರಗೆ ಅಭಿಮಾನಿಗಳ ದೊಡ್ಡ ಸರತಿ ಸಾಲು ಕಂಡುಬಂದಿತು. ಇದರೊಂದಿಗೆ, ಡಂಕಿ ಕ್ರಿಸ್‌ಮಸ್ ಸಂಜೆ ಲೆ ಗ್ರ್ಯಾಂಡ್ ರೆಕ್ಸ್‌ನ ಗ್ರ್ಯಾಂಡ್ ಹಾಲ್‌ನಲ್ಲಿ ಪ್ರದರ್ಶನಗೊಂಡ ಮೊದಲ ಹಿಂದಿ ಬಾಲಿವುಡ್ ಚಲನಚಿತ್ರ ಎಂದು ಇತಿಹಾಸ ಸೃಷ್ಟಿಸಿದೆ.  ಚಿತ್ರದಲ್ಲಿ ಶಾರುಖ್​ ಅವರನ್ನು ಕಂಡು  ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಇದರ ಹೊರತಾಗಿಯೂ ಡಂಕಿ ಅಂದುಕೊಂಡಷ್ಟು ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಮಾಡಲಿಲ್ಲ. ಜವಾನ್​ ಮತ್ತು ಪಠಾಣ್​ಗೆ ಹೋಲಿಸಿದರೆ ಡಂಕಿಗೆ ಹಿನ್ನಡೆಯಾಗಿದ್ದಂತೂ ನಿಜ. 

ಸೀತಾ ಮದ್ವೆ ನಿಲ್ಲಿಸಲು ರಾಮನ ಭರ್ಜರಿ ಫೈಟಿಂಗ್​! ಶೂಟಿಂಗ್ ಮಾಡಿದ್ದು ಹೀಗೆ ನೋಡಿ: ವಿಡಿಯೋ ವೈರಲ್

ಇದರ ನಡುವೆಯೇ, ಶಾರುಖ್​ ಖಾನ್​ ಅವರು ತಮ್ಮ ಏನಾದರೂ ಕೇಳಿ #AskSRK ಮುಂದುವರೆಸಿದ್ದಾರೆ. ವರ್ಷದಿಂದ ಶುರುವಾಗಿರುವ ಈ ಪ್ರಶ್ನೋತ್ತರ ಮಾಲಿಕೆಯಲ್ಲಿ ಇದಾಗಲೇ ಹಲವಾರು ಮಂದಿ ಶಾರುಖ್​ ಖಾನ್​ ಅವರಿಗೆ ವಿಭಿನ್ನ ರೀತಿಯ ಪ್ರಶ್ನೆ ಕೇಳಿದ್ದಾರೆ. ಇವುಗಳ ಪೈಕಿ ಹಲವು ಪ್ರಶ್ನೆಗಳಿಗೆ ನಟ ತಮಾಷೆಯ ಉತ್ತರ ಕೊಟ್ಟಿದ್ದರೆ, ಕೆಲವೊಂದಕ್ಕೆ ಗರಂ ಕೂಡ ಆಗಿ ಉತ್ತರಿಸಿದ್ದು ಇದೆ. ಇದೀಗ ಅವರ ಅಭಿಮಾನಿಯೊಬ್ಬ ಡಂಕಿಗೆ ಸರಿಯಾದ ಪ್ರಚಾರ ಕೊಡದ ಕಾರಣ ಅದು ಅಷ್ಟೆಲ್ಲಾ ಚೆನ್ನಾಗಿ ಓಡುತ್ತಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜೊತೆ ಜವಾನ್​ ಚಿತ್ರದ ಬಗ್ಗೆಯೂ ಫ್ಯಾನ್ ಹೇಳಿದ್ದಾರೆ. ಜವಾನ್​ ಮತ್ತು ಡಂಕಿ ಚಿತ್ರಕ್ಕೆ ಪಠಾಣ್​ನಷ್ಟು ಮಾರ್ಕೆಟಿಂಗ್​ ಮಾಡಲಿಲ್ಲ. ನೀವು ಯಾಕೆ ರೆಡ್​ ಚಿಲ್ಲೀಸ್​ ಎಂಟರ್​ಟೇನ್​ಮೆಂಟ್​ಗೆ ಹೇಳಿ ನುರಿತ ಟೀಂ ಅನ್ನು ಸೇರಿಸಿಕೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಶಾರುಖ್​ ತಮ್ಮ ಎಂದಿನ ಹಾಸ್ಯಭರಿತ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ.

ಅಷ್ಟಕ್ಕೂ ಶಾರುಖ್​ ಹೇಳಿದ್ದು ಏನೆಂದರೆ, ಇದರ ಮಾರ್ಕೆಟಿಂಗ್​ ನಾನೇ ಮಾಡುತ್ತಿದ್ದೇನೆ. ನನ್ನನ್ನೇ ನಾನು ಹೊರಕ್ಕೆ ಹೇಗೆ ಹಾಕಲಿ ಎಂದು ಕೇಳಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ನಕ್ಕೂ ನಕ್ಕೂ ಸುಸ್ತಾಗಿದ್ದರೆ, ಈ ಪ್ರಶ್ನೆ ಕೇಳಿದ ಅಭಿಮಾನಿ ಮಾತ್ರ ಉತ್ತರ ಕೇಳಿಯೇ ಸುಸ್ತಾದಂತಿದೆ. ಅಂದಹಾಗೆ ಡಂಕಿಯಲ್ಲಿ,  ಶಾರುಖ್ ಖಾನ್ ಜೊತೆಗೆ ಅಸಾಧಾರಣ ಪ್ರತಿಭಾವಂತ ನಟರಾದ ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ಮತ್ತು ಅನಿಲ್ ಗ್ರೋವರ್ ಅವರು ವರ್ಣರಂಜಿತ ಪಾತ್ರಗಳನ್ನು  ನೋಡಬಹುದು.  JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಪ್ರಸ್ತುತಪಡಿಸಿರುವ, ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಾಣದ ಚಿತ್ರ ಇದಾಗಿದೆ. 

ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್​

Follow Us:
Download App:
  • android
  • ios